ಅಂತರಾಷ್ಟ್ರೀಯ

ಕೊರೋನಾ ವೈರಸ್ ಭೀತಿ: ಅಬುಧಾಬಿಯಲ್ಲಿ ಮನೆಯಿಂದ ಕೆಲಸಮಾಡುವ ಅವಕಾಶ

Pinterest LinkedIn Tumblr


ಅಬುಧಾಬಿ: ಕೊರೊನಾ ಈಗಾಗಲೇ ಜಗತ್ತಿನ ಬಹುತೇಕ ರಾಷ್ಟ್ರಗಳ ಬಾಗಿಲು ಬಡಿದಿದೆ. ಇದು ಹರಡುವುದನ್ನು ತಡೆಗಟ್ಟುವ ಸಲುವಾಗಿ ರಾಷ್ಟ್ರಗಳು ಹಲವು ಕ್ರಮಗಳನ್ನು ಕೈಗೊಂಡಿದೆ. ದುಬೈನ ಎಲ್ಲಾ ಸರಕಾರಿ ಮತ್ತು ಅರೆ ಸರಕಾರಿ ಕಚೇರಿಗಳಲ್ಲಿ ಕೆಲಸ ಮಾಡುವವರಿಗಾಗಿ ಹೊಸ ಯೋಜನೆಯನ್ನು ಅಲ್ಲಿನ ಸರಕಾರ ಸಿದ್ಧಪಡಿಸುತ್ತಿದೆ. ಇದರನ್ವಯ ಮನೆಯಲ್ಲೇ ಇದ್ದುಕೊಂಡು ಕೆಲಸ ಮಾಡುವ ಕ್ರಮವನ್ನು ಪರಿಚಯಿಸುತ್ತಿದೆ.

ಸದ್ಯ ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಮಾಡಲಾಗಿದೆ. ಅಬುಧಾಬಿ ಸರಕಾರದ ಕೆಲವು ಘಟಕಗಳು ಈಗಾಗಲೇ ಪ್ರಾಯೋಗಿಕ ಯೋಜನೆಯನ್ನು ಕಾರ್ಯಗತಗೊಳಿಸಲು ಪ್ರಾರಂಭಿಸಿವೆ. ಮುಂದಿನ ವಾರದಿಂದ, ವ್ಯವಸ್ಥೆಯನ್ನು ಅಧಿಕೃತವಾಗಿ ಅನ್ವಯಿಸಲಾಗುತ್ತದೆ. ಅಲ್ಲಿ ಎಲ್ಲಾ ಉದ್ಯೋಗಿಗಳಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ.

ಈ ವ್ಯವಸ್ಥೆಯನ್ನು ಸರಿಯಾಗಿ ಪರಿಚಯಿಸುವ ದೃಷ್ಟಿಯಿಂದ ನೌಕರರಿಗೆ ಮತ್ತು ವಿಭಾಗದ ಮುಖ್ಯಸ್ಥರಿಗೆ ಲ್ಯಾಪ್‌ಟಾಪ್‌ಗ್ಳನ್ನು ವಿತರಿಸಲಾಗುತ್ತಿದೆ. ಅಬುಧಾಬಿಯ ಲ್ಯಾಪ್‌ಟಾಪ್‌ ಮಾರುಕಟ್ಟೆಯು ಕಳೆದ ಕೆಲವು ದಿನಗಳಿಂದ ಉತ್ತಮ ಬೇಡಿಕೆಯನ್ನು ಸಂಪಾದಿಸಿದೆ. ಮಾತ್ರವಲ್ಲದೇ ಅಬುಧಾಬಿ ಸರಕಾರವು ದೂರಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದ್ದು, ಸಾವಿರಾರು ಲ್ಯಾಪ್‌ಟಾಪ್‌ಗ್ಳನ್ನು ಖರೀದಿಸಿ ಶಾಲೆಗಳಿಗೆ ವಿತರಿಸಿದೆ. ಇದು ಪ್ರಸಕ್ತ ಶೈಕ್ಷಣಿಕ ವರ್ಷದ ಅಂತ್ಯದ ವರೆಗೂ ಮುಂದುವರಿಯುವ ನಿರೀಕ್ಷೆಯಿದೆ.

ತಾತ್ಕಾಲಿಕವಾಗಿ ಈ ಕಾರ್ಯದ ಮೂಲಕ ಅಬುಧಾಬಿಯಲ್ಲಿ ಸರಕಾರಿ ಮತ್ತು ಅರೆ ಸರಕಾರಿ ಇಲಾಖೆಗಳ ನೌಕರರ ಸಂಖ್ಯೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

ಕರೋನವೈರಸ್‌ ಏಕಾಏಕಿ ಸಾಂಕ್ರಾಮಿಕ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಲೇಬಲ್‌ ಮಾಡಿದೆ. ಎರಡು ವಾರಗಳಲ್ಲಿ ಚೀನದ ಹೊರಗಿನ ಪ್ರಕರಣಗಳ ಸಂಖ್ಯೆ 13 ಪಟ್ಟು ಹೆಚ್ಚಾಗಿದೆ ಎಂದು ಡಬ್ಲ್ಯುಎಚ್‌ಒ ಮುಖ್ಯಸ್ಥ ಡಾ| ಟೆಡ್ರೊಸ್‌ ಅಧಾನೊಮ್‌ ಬ್ರೆಯೆಸಸ್‌ ಹೇಳಿದ್ದಾರೆ. ಸಾಂಕ್ರಾಮಿಕ ರೋಗವು ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ಒಂದೇ ಸಮಯದಲ್ಲಿ ಹರಡುವ ರೋಗವಾಗಿದೆ. ಕೆಲವು ದೇಶಗಳು ಸಂಪನ್ಮೂಲಗಳ ಕೊರತೆಯಿಂದ ಹೋರಾಡುತ್ತಿವೆ. ಕೆಲವು ದೇಶಗಳು ಸಂಕಲ್ಪದ ಕೊರತೆಯಿಂದ ಹೋರಾಡುತ್ತಿವೆ ಎಂದು ಅವರು ಹೇಳಿದ್ದಾರೆ.

Comments are closed.