ಗಲ್ಫ್

ಇನ್ನೂ ಭಾರತಕ್ಕೆ ತಲುಪದ ನಟಿ ಶ್ರೀದೇವಿ ಮೃತದೇಹ ! ಮೃತದೇಹ ಬಿಟ್ಟುಕೊಡಲು ವಿಳಂಬ ಆಗುತ್ತಿರುವುದು ಏಕೆ..?

Pinterest LinkedIn Tumblr

ಮುಂಬೈ: ದುಬೈನ ಹೊಟೇಲ್‌ವೊಂದರಲ್ಲಿ ಶನಿವಾರ ರಾತ್ರಿ ಮೃತಪಟ್ಟಿರುವ ಬಾಲಿವುಡ್‌ನ ಖ್ಯಾತ ನಟಿ ಶ್ರೀದೇವಿ ಮೃತದೇಹ ಸೋಮವಾರ ಸಂಜೆ ಮುಂಬೈಗೆ ತಲುಪುವ ಸಾಧ್ಯತೆಯಿದೆ.

ಶ್ರೀದೇವಿ ಹೃದಯಾಘಾತದಿಂದ ಮೃತಪಟ್ಟಿದ್ದರೂ, ಎಲ್ಲ ಪರೀಕ್ಷಾ ವರದಿಯ ಬಳಿಕ ಮೃತದೇಹ ಹಸ್ತಾಂತರಿಸಲು ಪೊಲೀಸರು ನಿರ್ಧರಿಸಿದ್ದಾರೆ. ದುಬೈ ವಿಧಿವಿಜ್ಞಾನ ಅಧಿಕಾರಿಗಳು ಮೃತದೇಹಗಳ ಅಂಗಾಂಗ ಪರೀಕ್ಷೆ ನಡೆಸಿದ್ದಾರೆ. ರಕ್ತ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದು, ವಿಧಿ ವಿಜ್ಞಾನ ಅಧಿಕಾರಿಗಳ ವರದಿ ಲಭಿಸಿದ ಬಳಿಕ ವಲಸೆ ಹಾಗೂ ಸಂರಕ್ಷಣೆ ಸಹಿತ ಇತರ ಪ್ರಕ್ರಿಯೆ ಮುಗಿದ ಬಳಿಕ ಮೃತದೇಹ ಹಸ್ತಾಂತರವಾಗಲಿದೆ.

ದುಬೈ ಪೊಲೀಸರು ಶ್ರೀದೇವಿ ತಂಗಿದ್ದ ಜಮೈರ ಎಮಿರೇಟ್ಸ್ ಟವರ್ ಹೊಟೇಲ್‌ನ ಕೋಣೆಯನ್ನು ‘ನಿರ್ಬಂಧಿತ ಪ್ರದೇಶ’ವೆಂದು ಘೋಷಿಸಿದ್ದಾರೆ. ಹೊಟೇಲ್ ಕೊಠಡಿಯನ್ನು ಕೂಲಂಕುಶವಾಗಿ ಪರೀಕ್ಷೆ ಮಾಡುತ್ತಿದ್ದಾರೆಂದು ವರದಿಯಾಗಿದೆ.

  ಮುಂಬೈನಲ್ಲಿ ನಡೆಯಲಿರುವ ಶ್ರೀದೇವಿಯ ಅಂತಿಮ ವಿಧಿ ವಿಧಾನದಲ್ಲಿ ಭಾಗವಹಿಸಲು ತಮಿಳು ಸೂಪರ್‌ಸ್ಟಾರ್ ರಜನೀಕಾಂತ್ ಈಗಾಗಲೇ ಮುಂಬೈಗೆ ತಲುಪಿದ್ದಾರೆ. ತೆಲುಗು ಚಿತ್ರರಂಗದ ದಿಗ್ಗಜರಾದ ಚಿರಂಜೀವಿ, ನಾಗಾರ್ಜುನ ಹಾಗೂ ವೆಂಕಟೇಶ್, ಭಾರತಿರಾಜ್, ರಾಘವೇಂದ್ರ ರಾವ್, ಕನ್ನಡ ನಟ ಅಂಬರೀಷ್ ಹಾಗೂ ಪ್ರಕಾಶ್ ರೈನಾ ಆಗಮಿಸುವ ಸಾಧ್ಯತೆಯಿದೆ.

Comments are closed.