ರಾಷ್ಟ್ರೀಯ

ಭಾರತದಿಂದ ಪಾಕ್‌ ಗಡಿಯಲ್ಲಿ 14 ಸಾವಿರ ಬಂಕರ್ ನಿರ್ಮಾಣ!

Pinterest LinkedIn Tumblr

‘[

ಜಮ್ಮು: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಉಗ್ರ ಉಪಟಲ ಹಾಗೂ ಒಳ ನುಸುಳುಕೋರರ ಹಾವಳಿಯನ್ನು ನಿಯಂತ್ರಿಸಲು ಸಜ್ಜಾಗಿರುವ ಭಾರತೀಯ ಸೇನೆ ಈಗ ಬಂಕರ್‌ಗಳ ನಿರ್ಮಾಣಕ್ಕೆ ಹೈ ಹಾಕಿದೆ.

ಪಾಕ್‌ ಸೇನೆ ಹಾಗೂ ಉಗ್ರರು ನಡೆಸುವ ಗುಂಡಿನ ದಾಳಿಯಿಂದ ಬಚಾವಾಗಲು ಭಾರತೀಯ ಸೇನೆ ಈಗ ಗಡಿಯುದ್ದಕ್ಕೂ 14 ಸಾವಿರ ಬಂಕರ್‌ಗಳನ್ನು ನಿರ್ಮಿಸಲು ಮುಂದಾಗಿದೆ.

ಪೂಂಛ್‌, ರಾಜೌರಿ ಜಿಲ್ಲೆಯ ಗಡಿ ರೇಖೆಗುಂಟ 7,298 ಬಂಕರ್‌ಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಜಮ್ಮು, ಕತುವಾ ಮತ್ತು ಸಾಂಬಾ ಜಿಲ್ಲೆಗಳಲ್ಲಿ 7,162 ಬಂಕರ್‌ಗಳನ್ನು ನಿರ್ಮಿಸಲಾಗುವುದು ಎಂದು ಹಿರಿಯ ಸೇನಾಧಿಕಾರಿಗಳು ತಿಳಿಸಿದ್ದಾರೆ.

ಈ ಬಂಕರ್‌ ನಿರ್ಮಾಣ ಯೋಜನೆಗೆ 415.73 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಎಂಟು ಜನರು ಇರಬಹುದಾದ 160 ಚದರಡಿಯ ಬಂಕರ್‌ ನಿರ್ಮಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವೆ 3,323 ಕಿಲೋ ಮೀಟರ್‌ ಗಡಿ ಹೊಂದಿದೆ. ಇದರಲ್ಲಿ 221 ಕಿಲೋ ಮೀಟರ್‌ ಅಂತಾರಾಷ್ಟ್ರೀಯ ಗಡಿ ಹಾಗೂ 740 ಕಿಲೋ ಮೀಟರ್‌ ಗಡಿ ನಿಯಂತ್ರಣ ರೇಖೆಯೂ ಇದೆ.

Comments are closed.