ಗಲ್ಫ್

ನವಂಬರ್ 3ರಂದು ಅಬುಧಾಬಿಯಲ್ಲಿ ನಡೆಯಲಿದೆ ಅದ್ದೂರಿಯ ಕರ್ನಾಟಕ ರಾಜ್ಯೋತ್ಸವ

Pinterest LinkedIn Tumblr

ದುಬೈ:ಅಬುಧಾಬಿ ಕರ್ನಾಟಕ ಸಂಘದ ವತಿಯಿಂದ ಕರ್ನಾಟಕ ರಾಜ್ಯೋತ್ಸವವು ನವಂಬರ್ 3ರಂದು ಬೆಳಿಗ್ಗೆಯಿಂದ ಸಂಜೆಯ ವರೆಗೆ ಅಬುದಾಬಿಯ ಇಂಡಿಯ ಸೋಶಿಯಲ್ ಆಂಡ್ ಕಲ್ಚರಲ್ ಸೆಂಟರ್ ನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯು.ಎ.ಇಯ ಹೆಸರಾಂತ ಉದ್ಯಮಿ, ಕನ್ನಡಿಗರ ಮಹಾಪೋಷಕರಾದ ಡಾ.ಬಿ. ಆರ್ ಶೆಟ್ಟಿಯವರು ವಹಿಸಲಿದ್ದಾರೆ.ಮುಖ್ಯ ಅತಿಥಿಯಾಗಿ ಶಾಯರಿ ಸಾಮ್ರಟ್ ಅಸದುಲ್ಲ ಬೇಗ್ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ದುಬಾಯಿಯ ಯಕ್ಷಗಾನ ಕಲಾವಿದ ಯಕ್ಷಗಾನ ಗುರುಗಳಾದ ಶೇಖರ್.ಡಿ ಶೆಟ್ಟಿಗಾರ್ ರವರಿಗೆ ದಾ.ರ ಬೇಂದ್ರೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಆದರ್ಶ ದಂಪತಿಗಳು ಸ್ಪರ್ಧೆ ಜರಗಲಿದೆ.ಸಿನಿಮಾ ನಟ ಶಾಹಿಲ್ ರೈ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ.

ಇದೆ ಸಂದರ್ಭದಲ್ಲಿ ಯುಎಇಯಲ್ಲಿ ನೆಲೆಸಿರುವ ಕನ್ನಡಿಗ ವಿದ್ಯಾರ್ಥಿಗಳು ಈ ಕೆಳಗಿನ ವಿಷಯದಲ್ಲಿ ಸಾಧನೆ ಮಾಡಿದ್ದರೆ ಅಂಥವರಿಗೆ ಅಭಿನಂದಿಸಲಾಗುವುದು.

(AD Karnataka Sangha wishes to honour the UAE RESIDENT Kannadiga students during the Rajyotsava celebration, who have excelled in the following activities )

(1) Scored 90% (CGPA9.5) or above in 10th and 12th in the Board or CBSC 2017
(2) Selected for CBSC in the sports activities (2016 – 2017)
(3) Excelled in Literary, art & quiz in CBSC level (2016 – 2017)
(4) Recipient of HH Shaikh Hamdan or Sharjah Award (2016 – 2017)

Pls forward full details to:
ravi.rai@nmc.ae and
Althafms@hotmail.com

Comments are closed.