
ದುಬೈ: ಭಾರತೀಯ ಸಮುದಾಯಕ್ಕಾಗಿ ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಸ್ಥಾನ ನಿರ್ಮಿಸಲು 20,000 ಸ್ಕ್ವಾರ್ ಮೀಟರ್ (4.95 ಎಕ್ರೆ) ಜಾಗ ನೀಡಲಾಗಿದೆ.
ಕಳೆದ ವರ್ಷ ಭಾರತಹದ ಪ್ರಧಾನಿ ನರೇಂದ್ರ ಮೋದಿ ಯುಎಇಗೆ ಭೇಟಿ ನೀಡಿದ್ದ ವೇಳೆ ಅಬುಧಾಬಿಯಲ್ಲಿ ದೇವಸ್ಥಾನ ನಿರ್ಮಿಸಲು ಜಾಮೀನು ನೀಡುದಾಗಿ ಯುಎಇ ಸರಕಾರ ಘೋಷಿಸಿತ್ತು. ಅದರಂತೆ ಈಗ ಅಬುಧಾಬಿಯ ಅಲ್ ವತ್ಬ ಎಂಬ ಪ್ರದೇಶದಲ್ಲಿ 4.95 ಎಕ್ರೆ ಜಾಗ ನೀಡಲಾಗಿದೆ.
ಸೋಮವಾರದಂದು ಜಾಗ ನೀಡಲಾಗಿದ್ದು, ಮುಂದಿನ ಒಂದು ವರ್ಷದೊಳಗೆ ದೇವಸ್ಥಾನ ನಿರ್ಮಿಸಲಾಗುದು ಎಂದು ದೇವಸ್ಥಾನ ಸಮನ್ವಯ ಸಮಿತಿಯ ಮುಖ್ಯಸ್ಥರು, MNC ಹೆಲ್ತ್ ಕೇರ್ ಹಾಗು UAE ಎಕ್ಸ್ಚೇಂಜ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಬಿ.ಆರ್.ಶೆಟ್ಟಿ ತಿಳಿಸಿದ್ದಾರೆ.
ದೇವಸ್ಥಾನಕ್ಕೆ ನೀಡಲಾಗಿರುವ ಜಾಗವು ಅಬುಧಾಬಿಯಿಂದ ಕೇವಲ 30 ನಿಮಿಷದ ಅಂತರದಲ್ಲಿದ್ದು, ಅಬುಧಾಬಿ-ಅಲೈನ್ ಹೆದ್ದಾರಿಯ ಪಕ್ಕದಲ್ಲಿಯೇ ಇದೆ ಎಂದು ಅವರು ತಿಳಿಸಿದರು.
4.95 ಎಕ್ರೆ ಸುಂದರ ಹಾಗು ವಿಸ್ತಾರವಾದ ಜಾಗದಲ್ಲಿ ಈ ದೇವಸ್ಥಾನ ನಿರ್ಮಾಣವಾಗಲಿದ್ದು, ದುಬೈಯಲ್ಲಿ 2 ಹಿಂದೂ ದೇವಸ್ಥಾನ ಹಾಗು ಒಂದು ಸಿಖ್ ಗುರುದ್ವಾರವಿದೆ. ಅಬುಧಾಬಿ ಸರಕಾರದ ಪ್ರಾಯೋಜಕತ್ವದಲ್ಲಿ ದೇವಸ್ಥಾನ ತಲೆಯೆತ್ತಲಿದೆ.
ಅಬುಧಾಬಿಯ ಯುವರಾಜ ಹಾಗು ಯುಎಇ ಸಶಸ್ತ್ರ ಪಡೆಗಳ ಉಪ ಸರ್ವೋಚ್ಛ ಕಮಾಂಡರ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಸಹಕಾರದಿಂದ ಜಾಗ ಇಷ್ಟು ಬೇಗ ಸಿಕ್ಕಿದೆ. ಜೊತೆಗೆ ಶೇಖ್ ಮೊಹಮ್ಮದ್ ಅವರು ವಿಶೇಷವಾಗಿ ಜಾಗ ಕೊಡಿಸುವಲ್ಲಿ ಸಹಾಯಹಸ್ತ ನೀಡಿದ್ದಾರೆ.
ದೇವಸ್ಥಾನದಲ್ಲಿ ಕೃಷ್ಣ, ಮಹೇಶ್ವರ ಹಾಗು ಅಯ್ಯಪ್ಪ ಸ್ವಾಮಿಯ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುದು. ದೇವಸ್ಥಾನದ ವಾಸ್ತುಶಿಲ್ಪಕ್ಕೂ ಗಮನ ನೀಡಲಾಗಿದ್ದು, ಸುಂದರ ಉದ್ಯಾನವನವನ್ನು ನಿರ್ಮಿಸಲಾಗುದು ಎಂದರು.
ಕಳೆದ ಆಗಸ್ಟ್ ನಲ್ಲಿ ಪ್ರಧಾನಿ ಮೋದಿ ಯುಎಇ ಗೆ ಭೇಟಿ ನೀಡಿದ್ದ ಮೊದಲ ದಿನವೇ ಅಬುಧಾಬಿಯಲ್ಲಿ ದೇವಸ್ಥಾನ ನಿರ್ಮಿಸಲಿ ಜಾಗ ನೀಡುದಾಗಿ ಯುಎಇ ಸರಕಾರ ಘೋಷಿಸಿತ್ತು. ಅಂದು ಈ ಬಗ್ಗೆ ಟ್ವೀಟ್ ಮಾಡಿದ್ದ ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್, ಭಾರತೀಯ ಸಮುದಾಯದವರ ದೀರ್ಘಕಾಲದ ಕಾಯುವಿಕೆ ಅಂತ್ಯಗೊಂಡಿದೆ. ಪ್ರಧಾನಿ ಮೋದಿಯ ಭೇಟಿ ದಿನವೇ ಯುಎಇ ಸರ್ಕಾರ ದೇವಸ್ಥಾನಕ್ಕೆ ಭೂಮಿ ನೀಡುವ ನಿರ್ಧಾರ ಕೈಗೊಂಡಿದೆ ಎಂದು ಟ್ವೀಟ್ ಮಾಡಿದ್ದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅಬುಧಾಬಿಯ ಐತಿಹಾಸಿಕ ಶೇಖ್ ಜಾಯೆದ್ ಗ್ರಾಂಡ್ ಮಸೀದಿಗೆ ಭೇಟಿ ನೀಡಿದರು. ಸುಮಾರು 40 ನಿಮಿಷಗಳ ಕಾಲ ಮಸೀದಿಯಲ್ಲೇ ಕಳೆದರು. ಬಳಿಕ ಅಲ್ಲಿರುವ ಭಾರತೀಯ ಕಾರ್ಮಿಕರನ್ನು ಭೇಟಿಯಾದ ಮೋದಿ, ಅವರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಅವುಗಳನ್ನು ಪರಿಹರಿಸಲು ಭಾರತ ಸರ್ಕಾರ ಏನು ಮಾಡಬಹುದು ಎಂಬ ಬಗ್ಗೆ ಚರ್ಚಿಸಿದ್ದರು.
Comments are closed.