ಗಲ್ಫ್

ಶೀಘ್ರದಲ್ಲೇ ದುಬೈನಲ್ಲಿನ ಐಷಾರಾಮಿ ಮನೆಯನ್ನು ಪ್ರವೇಶಿಸಲಿರುವ ಐಶ್ -ಅಭಿಷೇಕ್

Pinterest LinkedIn Tumblr

ais

ಅನೇಕ ಬಾಲಿವುಡ್ ಸೆಲೆಬ್ರಿಟಿಗಳಿಗೆ ದುಬೈ ಎಂದರೆ ವ್ಯಾಮೋಹ. ಈಗಾಗಲೇ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ದುಬೈನಲ್ಲಿ ಮನೆ ಖರೀದಿಸಿದ್ದಾರೆ. ನಟಿ ಐಶ್ವರ್ಯಾ ರೈ ಬಚ್ಚನ್ ಕೂಡ ಅಲ್ಲೊಂದು ಬಂಗಲೆ ಖರೀದಿಸುತ್ತಾರೆ ಎಂದು ಸುದ್ದಿ ಮೂಲಗಳು ಬಹಳ ದಿನಗಳ ಹಿಂದೆಯೇ ಅನುಮಾನ ವ್ಯಕ್ತಪಡಿಸಿದ್ದವು. ಅದೀಗ ನಿಜವಾಗುವ ಸಮಯ ಬಂದಿದ್ದು, ಶೀಘ್ರದಲ್ಲೇ ಐಶ್ ಮತ್ತು ಅಭಿಷೇಕ್ ದುಬೈನಲ್ಲಿನ ಐಷಾರಾಮಿ ಮನೆಯನ್ನು ಪ್ರವೇಶಿಸಲಿದ್ದಾರಂತೆ.

ಅಲ್ಲಿನ ಖ್ಯಾತ ರಿಯಲ್ ಎಸ್ಟೇಟ್ ಕಂಪನಿಯು 97 ಐಷಾರಾಮಿ ಮನೆಗಳನ್ನು ನಿರ್ವಿುಸಿದೆ. ಅದರಲ್ಲಿ ಐಶ್ ಕೂಡ ಒಂದು ಮನೆಯ ಒಡತಿಯಾಗುತ್ತಿದ್ದಾರೆ. ಅದರಲ್ಲಿ 18 ಹೋಲ್ಗಳ ಗಾಲ್ಪ್ ಮೈದಾನ ಮತ್ತು ಈಜುಕೊಳ ಕೂಡ ಇದೆಯಂತೆ. ಒಳಾಂಗಣ ವಿನ್ಯಾಸವೂ ಮನಸೆಳೆಯುವಂತಿದೆ.

ಅತ್ಯಾಕರ್ಷಕ ರೀತಿಯಲ್ಲಿ ಪ್ರತಿ ಕೊಠಡಿಯನ್ನೂ ಡಿಸೈನ್ ಮಾಡಲಾಗಿದೆ. ಮನೆಯೊಳಗಿನ ಪ್ರತಿ ವ್ಯವಸ್ಥೆಯೂ ಹೈ-ಟೆಕ್ ಆಗಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಐಶ್ ಮನೆಯ ಚಿತ್ರಗಳು ಹರಿದಾಡುತ್ತಿದ್ದು, ಎಲ್ಲರ ಕಣ್ಣು ಕುಕ್ಕುತ್ತಿವೆ. ಆದರೆ ಈ ಹೊಸ ಮನೆ ಖರೀದಿಸುವುದರ ಬಗ್ಗೆ ಬಚ್ಚನ್ ಕುಟುಂಬದಿಂದ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಸದ್ಯಕ್ಕೆ ದುಬೈನ ರಿಯಲ್ ಎಸ್ಟೇಟ್ ಕಂಪನಿ ಮೂಲಗಳಿಂದ ಈ ಸುದ್ದಿ ಹೊರಬಿದ್ದಿದೆ.

Comments are closed.