ಗಲ್ಫ್

ಬ್ಯಾರೀಸ್ ಕಲ್ಚರಲ್ ಫೋರಮ್ (BCF) ದುಬೈ ವತಿಯಿಂದ ಮನೋಲ್ಲಸಕರವಾದ ಪಿಕ್ ನಿಕ್

Pinterest LinkedIn Tumblr

BCF Picnic-Dec 30-2015-010

ಬ್ಯಾರೀಸ್ ಕಲ್ಚರಲ್ ಫೋರಮ್ ದುಬೈ ವತಿಯಿಂದ ಇತ್ತೀಚಿಗೆ ಮನೋಲ್ಲಸಕರವಾದ ಪಿಕ್ ನಿಕ್ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ರಮಣೀಯವಾದ ಹಸುರು ಹೊದ್ದ ಗುಡ್ಡ ಬೆಟ್ಟಗಳಿಂದ ಆವೃತವಾದ ಮಸಾಫಿಯಲ್ಲಿ ರಿಟಾಯರ್ಡ್ ಮೇಜರ್ ಜನರಲ್ – ಅಲ ಹಾಜ್ ಅಲಿ ಖಮೀಸ್ ರವರ ವಿಶಾಲವೂ ಸೌಲಭ್ಯ ಭರಿತವೂ ಆದ ರೆಸಾರ್ಟ್ ನಲ್ಲಿ ಜರುಗಿದ ಈ ಪಿಕ್ ನಿಕ್ ನಲ್ಲಿ ಮಹಿಳೆಯರು, ಮಹನೀಯರು, ಮಕ್ಕಳಾದಿಯಾಗಿ ಸುಮಾರು ೧೦೦ ರಷ್ಟು ಬ್ಯಾರಿ ಭಾನದವರು ಭಾಗವಹಿಸಿದ್ದರು. ಬೆಳಿಗ್ಗೆ ಗಿಸೈಸ್ ನ ತುಂಬೆ ಹಾಸ್ಪಿಟಲ್ ನ ಮುಮ್ಭಾಗತಾದ್ ಪಾರ್ಕ್ ನಲ್ಲಿ ಬೆಳಗ್ಗಿನ ಉಪಹಾರ ಸೇವಿಸಿ ಎರಡು ಬಸ್ ನಲ್ಲಿ ಹೋರಾಟ ತಂಡವು ಸುಮಾರು ಬೆಳಿಗ್ಗೆ ೧೦ ಗಂಟೆ ಗೆ ಮಸಾಫಿಯ ರೆಸಾರ್ಟ್ ತಲುಪಿತು. ತಡ ನಂತರ ಲಘು ಪಾನೀಯ ಮತ್ತು ಹಣ್ಣು ಹಂಪಲು ಸೇವಿಸಿ ವಿವಿಧ ಆಟೋಟ ಸ್ಪರ್ಧೆಗಳು ಪ್ರಾರಂಭ ಗೊಂಡವು. ಮಕ್ಕಳು, ಮಹಿಳೆಯರು ಮತ್ತು ಮಹನೀಯರಿಗೆ ಪ್ರತ್ಯೇಕ ಪ್ರತ್ಯೇಕ ವಾದ ಚಟುವಟಿಕೆಗಳನ್ನು ಏರ್ಪಡಿಸಲಾಗಿತ್ತು.

ಮಧ್ಯಾಹ್ನವಾದಂತೆ ಹತ್ತಿರದಲ್ಲೆ ಇದ್ದ ಮಸೀದಿಗೆ ಜುಮ್ಮಾ ನಮಾಜಿಗೆ ಮಕ್ಕಳ ಸಮೇತ ಎಲ್ಲ ರೂ ತೆರಳಿದ ನಂತರ ಮಹಿಳೆಯರು ತಮ್ಮ ಅಡುಗೆ ಕಾರ್ಯ ಪಾರಂಬಿ ಸಿದರು.

BCF Picnic-Dec 30-2015-002

BCF Picnic-Dec 30-2015-003

BCF Picnic-Dec 30-2015-004

BCF Picnic-Dec 30-2015-005

BCF Picnic-Dec 30-2015-006

BCF Picnic-Dec 30-2015-008

BCF Picnic-Dec 30-2015-009

ಅಪ್ಪಟ ಬ್ಯಾರಿ ಸಂಪ್ರದಾಯದ ಸಾಂಸ್ಕೃತಿಕ ಹೆಗ್ಗಳಿಕೆಗೆ ತಕ್ಕಂತೆ – ಬ್ರಹತ್ ಅಗ್ನಿ ಕುಂಡದಂತಹ ಒಲೆ, ನಿಗಿ ನಿಗಿ ಸುಡುವ ಕಟ್ಟಿಗೆಯ (ಸೊಂಟೆ) ಕಣಲಿನ ಬೆಂಕಿ, ಬ್ರಹದಾಕಾರದ ಅರ್ಧ ಗೋಳಾಕೃತಿಯ ಪಾತ್ರೆ, ಅದರಲ್ಲಿ ಕರಾವಳಿ ಕರ್ನಾಟಕದ ದೇಸಿ ಮಸಾಲೆಯಲ್ಲಿ ಮೆಲ್ಲಗೆ ನಿಧಾನ ಮೆತ್ತಗೆ ಬೇಯುವ ಬಿರಿಯಾನಿ, ಅದರೊಂದಿಗೆ ತಮ್ಮ ಕುಟುಂಬ ದತ್ತವಾದ ಪಾಕ ಕಲೆಯ ಪ್ರಾವೀಣ್ಯತೆಯನ್ನು ಮೆರೆಸುವ ಬ್ಯಾರಿ ಸಹೋದರಿಯರು, ಅವರಿಗೆ ಸಹಾಯ ಮಾಡಲು ಸೊಂಟ ಕಟ್ಟಿ ನಿಂತ ಬ್ಯಾರಿ ಸಹೋದರರು, ಬಿರಿಯಾನಿ ಪ್ರಿಯರ ಜಿಹ್ವಾ ಚಾಪಲ್ಯಕ್ಕೆ ಸವಾಲೊಡ್ಡುವ ಆ ಅಪ್ಪಟ ಬ್ಯಾರಿ ಬಿರಿಯಾನಿ ಮಸಾಲೆಯ ಪರಿಮಳ, ಅದೊಂದು ಅನಿರ್ವಚನೀಯವಾದ ಕೌಟುಂಬಿಕ ಅನುಭವವಾಗಿತ್ತು.

ಮಧ್ಯಾಹ್ನದ ಭೂರಿ ಭೋಜನ ವಂತೂ ಅಮೋಘವಾಗಿತ್ತು. ಒಂದು ದಿನದ ಮಟ್ಟಿಗೆ ತಮ್ಮ ಕೊಲೆಸ್ತರೋಲ್ ಅನ್ನು ಮರೆತು ಅಬಾಲ ವ್ರಿದ್ಧರೆನ್ನದೆ ಎಲ್ಲರೂ ಬ್ಯಾರಿ ಬಿರಿಯಾನಿಯ ಸವಿ ಅನುಭವಿಸಿದರು.

ನಂತರ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಮಹನೀಯರಿಗೆ ಪ್ರತ್ಯೇಕ ಪ್ರತ್ಯೇಕ ಪಂದ್ಯಾಟಗಳು ನಡೆದವು.

ಅವುಗಳಲ್ಲಿ ಕಬಡ್ಡಿ ಮತ್ತು ಫುಟ್ಬಾಲ್ ಪಂದ್ಯಾಟಗಳು ಉಲ್ಲೇಖನೀಯ. ಮಾಸ್ತರ್ ಆಫ್ರಾಜ್ ಆಫೀಕ್ ನೇತ್ರತ್ವದ ಮಕ್ಕಳ ತಂಡ ಮತ್ತು BCF ಮಾಧ್ಯಮ ಸಂಯೋಜಕ ಜ: ನಿಯಾಜ್ ರವರ ನೇತ್ರತ್ವದ ಯುವಕರ ತಂಡ ದ ನಡುವೆ ನಡೆದ ಫುಟ್ ಬಾಲ್ ಪಂದ್ಯಾಟದಲ್ಲಿ ಮಕ್ಕಳ ತಂಡವು ವೀರಾವೇಶ ಮತ್ತು ಚಾಣಾಕ್ಷತೆಯಿಂದ ಆಡಿ ಬಲಿಷ್ಠ ಯುವಕರ (ದೊಡ್ಡವರ) ತಂಡವನ್ನು ಸೋಲಿಸಿದ್ದು ಅಂದಿನ ವಿಶೇಷತೆಯಾಗಿತ್ತು. ದೊಡ್ಡವರನ್ನು ಸೋಲಿಸಿದ ಮಕ್ಕಳ ವಿಜಯೋತ್ಸವದ ಸಿಂಹನಾದದ ಘರ್ಜನೆ ಮುಗಿಲು ಮುಟ್ಟುವಂತಿತ್ತು.

ಮುಂದೆ ನಡೆದ ಹಲವಾರು ಉಲ್ಲಾಸಕರ ಪಂದ್ಯಾಟಗಳಲ್ಲಿ ದಂಪತಿಗಳು ತಮ್ಮ ಜೀವನ ಸಂಗಾತಿಯನ್ನು ತದೇಕ ದ್ರಿಷ್ಟಿಯಿಂದ ಕಣ್ಣು ಮಿಟುಕಿಸದೆ ನೋಡುವ ಪಂದ್ಯ ಉಲ್ಲೇಖನೀಯ. ತಮ್ಮ ಅರ್ಧಾಂಗಿಗಳನ್ನು ಅತೀ ಹತ್ತಿರದಿಂದ ನೋಡುವ ಭರಾಟೆಯಲ್ಲಿ ಹಲವು ಪತ್ನೀ ವಲ್ಲಭರ ಕಣ್ಣು ಕೆಂಪಗಾಗಿ ಕಣ್ಣೀರು ಸಖತ್ತಾಗಿ ಇಳಿಯುತ್ತಿದ್ದದ್ದು ಎದ್ದು ಕಾಣುತ್ತಿತ್ತು. ಅದು ಬಹುಶ ತಮ್ಮ ಜೀವನ ಸಂಗಾತಿಗಳನ್ನು ಅಷ್ಟೊಂದು ಹತ್ತಿರದಿಂದ ಅಷ್ಟೊಂದು ಧೀರ್ಘ ಕಾಲ ನೋಡಿದ್ದರ ಸಂತೋಷದ ಕಣ್ಣೀರಾಗಿತ್ತು.!

ಈ ನಡುವೆ ಇಡೀ ಕಾರಯಕ್ರಮದುದ್ದಕ್ಕೂ ತಮ್ಮ ಸುಶ್ರಾವ್ಯ ಕಂಠ ಸಿರಿಯಿಂದ BCF ಕಮಿಟೀ ಸದಸ್ಯರಾದ ಜ: M B ಅಕ್ಬರ್ ಮತ್ತು ಜ: ಉಸ್ಮಾನ್ ಮುಳೂರು ರವರು ಸಂಗೀತ ಸೌರಭ ನೀಡಿದರು. ಇವರೊಂದಿಗೆ ಜ: M E ಮೂಳೂರು ಡಾ.. ಕಾಪು ಮಹಮ್ಮದ್, ,ಜ: ಲತೀಫ್ ಮುಲ್ಕಿ, ಜ: ಅಬ್ದುಲ್ ರಹ್ಮಾನ್ ಸಜಿಪ, ಜ: ಸುಲೇಮಾನ್ ಮೂಳೂರು, ಜ: ರಶೀದ್ ಮೊದಲಾದವರು ಜತೆಗೂಡಿದರು. ಮೊಹಮ್ಮದ್ ರಫಿ, ಮುಕೇಶ್, ಬಾಲ ಸುಬ್ರಹ್ಮಣ್ಯಂ, ತಲತ್ ಮಹ್ಮೂದ್, ಪಿ ಬಿ ಶ್ರೀನಿವಾಸ್ ಮೊದಲಾದವರ ಸದಾ ಬಹಾರ್ ಗೀತೆಗಳನ್ನು ಹಾಡಿದ ಈ ಹವ್ಯಾಸಿ ಕಲಾವಿದರು BCF ನಲ್ಲಿ ಪ್ರತಿಭೆಗೆ ಎನೂ ಕೊರತೆ ಇಲ್ಲ ಎಂಬುದನ್ನು ಸಾಬೀತು ಪಡಿಸಿದರು.

ನಂತರ ನಡೆದ ಸನ್ಮಾನ ಸಮಾರಂಭದಲ್ಲಿ BCF ಪರವಾಗಿ BCF ಪ್ರ. ಕಾರ್ಯದರ್ಶಿ ಡಾ. ಕಾಪು ಮಹಮ್ಮದ್ ರವರು ಅತಿಥಿಗಳನ್ನು ಸ್ವಾಗತಿಸಿದರು. BCF ಉಪಾಧ್ಜ್ಯಕ್ಷ M E ಮೂಳೂರು ರವರು BCF ನ ಸಂಕ್ಷಿಪ್ತ ಪರಿಚಯ ನೀಡಿದರು. ಅಂದಿನ ಪ್ರಧಾನ ಅತಿಥಿಗಳಾದ ರಿಟಾಯರ್ಡ್ ಮೇಜರ್ ಜನರಲ್ – ಅಲ ಹಾಜ್ ಅಲಿ ಖಮೀಸ್ ರವರನ್ನು ಸನ್ಮಾನಿಸಲಾಯಿತು. ಅವರನ್ನು ಜ: M E ಮೂಳೂರು, ಜ: ಅಬ್ದುಲ್ ಲತೀಫ್ ಮುಲ್ಕಿ, ಜ: ಅಫೀಕ್ , ಡಾ. ಕಾಪು ಮಹಮ್ಮದ್, ಉಸ್ಮಾನ್ ಮೂಳೂರು ಮೊದಲಾದವರು ಶಾಲು ಹೊದಿಸಿ ಸನ್ಮಾನಿಸಿದರು.

ಮುಖ್ಯ ಅತಿಥಿಗಳಾದ ರಿಟಾಯರ್ಡ್ ಮೇಜರ್ ಜನರಲ್ – ಅಲ ಹಾಜ್ ಅಲಿ ಖಮೀಸ್ ರವರು ತಮ್ಮ ಭಾಷಣದಲ್ಲಿ ಇಷ್ಟೊಂದು ಮಕ್ಕಳನ್ನು ಮತ್ತು ಸಹೋದರ ಸಹೋದರಿಯರನ್ನು ತಮ್ಮ ರೆಸಾರ್ಟ್ನಲ್ಲಿ ಪ್ರಥಮ ಬಾರಿಗೆ ಕಂಡು ಅತೀವ ಆನಂದ ವ್ಯಕ್ತ ಪಡಿಸಿದರು. ಅವರ ಸಂಧರ್ಬೋನುಚಿತ ಮತ್ತು ಮಾನವೀಯತೆಯಿಂದ ಕೂದಿದ ಉಪದೇಶ ಎಲ್ಲರ ಮನ ತಟ್ಟುವಂತಿತ್ತು. ಈ ರೆಸಾರ್ಟ್ ಬನ ಒಡೆಯ ನಾನಲ್ಲ. ನಾನೊಂದು ನಿಮಿತ್ತ ಮಾತ್ರ. ಅಲ್ಲಾಹು ಆಗಿದ್ದಾನೆ ನಮ್ಮೆಲ್ಲರ ಒಡೆಯ. ಆದುದರಿಂದ ನಿಮಗೆ ನಾನು ಎನೂ ಉಪಕಾರ ಮಾಡಿಲ್ಲ. ಇದು ಅಲ್ಲಾಹುವಿನ ದಯೆ. ಪರಸ್ಪರ ಪ್ರೀತಿಯಿಂದ ಬಾಳಿರಿ. ವರ್ಗ, ಪಂಗಡ, ದೇಶ ಎಂತ ದೂರ ನಿಲ್ಲ ಬೇಡಿರಿ. ನಾವೆಲ್ಲರೂ ದೇವರ ದಾಸರು.ನಾವೆಲ್ಲಾ ಒಂದೇ ಮಕ್ಕಳನ್ನು ಪ್ರೀತಿಸಿರಿ. ಹಿರಿಯರನ್ನು ಗೌರವಿಸಿರಿ. ತಾಯಿ ತಂದೆಯರನ್ನು ಬಹುಮಾನಿಸಿರಿ. ದಿನಾಲೂ ಬೆಳಿಗ್ಗೆ ನಿಮ್ಮ ನಿಮ್ಮ ತಾಯಿಯ ಯೋಗ ಕ್ಷೇಮ ವಿಒಚಾರಿಸಿ ಆ ತಾಯಿಯ ಯನ್ನು ಅಪ್ಪಿ ಹಿಡಿದು ಮುಂದಲೆಯನ್ನು ಚುಂಬಿಸಿ ಆ ತಾಯಿಗೆ ಸಲಾಂ ಹೇಳಿರಿ. ಇದು ಇಸ್ಲಾಂ, ನಮಗೆ ಕಳಿಸಿದ ಪಾಠವಾಗಿದೆ.. ಪ್ರತೀ ವರ್ಷ ಬನ್ನಿರಿ. ಬರುವಾಗ ನಿಮ್ಮ ತಂದೆ ತಾಯಿಯವರನ್ನು ಹೆಚ್ಚು ಸಂಖ್ಯೆಯಲ್ಲಿ ಕರೆ ತನ್ನಿರಿ.ಇದಾಗಿತ್ತು ಆ ಮಹನೀಯ ಅತಿಥಿಗಳ ನುಡಿ ಮುತ್ತುಗಳು. ಈ ಮಾತುಗಳನ್ನು ಕೇಳಿ ಎಲ್ಲರೂ ಭಾವ ಪರವಶರಾದರು.

BCF .ಉಪಾಧ್ಯಕ್ಷರಾದ ಜ: ಅಬ್ದುಲ್ ಲತೀಫ್ ಮುಲ್ಕಿ ಯವರು ಧನ್ಯವಾದವಿತ್ತರು. ಈ ಪಿಕ್ ನಿಕ್ ನ ಸಮ್ಪೂರ್ನ ಜವಾಬ್ದಾರಿ ವಹಸಿ ಅತ್ಯುತ್ತಮ ರೀತಿಯಲ್ಲಿ ನಡೆಸಿ ಕೊಟ್ಟ BCF LADIES WING, ಅದರ ಉಸ್ತುವಾರಿ ವಹಿಸಿದ ಶ್ರೀಮತಿ ಮುಮ್ತಾಜ್ ಶಾಕಿರ್ ಮತ್ತು ಅವರ ತಂಡದ ಮಹಿಳಾ ಸದಸ್ಯರನ್ನು, ಇದಕ್ಕಾಗಿ ಸ್ಥಳದ ಏರ್ಪಾಟು ಮಾಡಿದ ಜ: ಅಬ್ದುಲ್ ಲತೀಫ್ ಮುಲ್ಕಿ, ಬಹುಮಾನ ಗಳ ಪ್ರಾಯೋಜಕರಾದ ಜ: M E ಮೂಳೂರು, ಜ: ಉಸ್ಮಾನ್ ಮೂಳೂರು, ಡಾ. ಕಾಪು ಮಹಮ್ಮದ್, ಎಲ್ಲಾ ರೀತಿಯ ಸಹಾಯ ನೀಡಿದ ಜ: ನವಾಜ್ ಕೋಟೆಕಾರ್, ಆಫೀಕ್ , ರಫೀಕ್ ಮುಲ್ಕಿ, ಸಜಿಪ ಅಬ್ದುಲ್ ರಹ್ಮಾನ್, ಅಮೀರ್ ಹಳೆನ್ಗಡಿ, ಮೊಹಮ್ಮದ್ ಕಿಸಾರ್, ಅಶ್ರಫ್ ಸತ್ತಿಕಲ್, ಅಬ್ದುಲ್ ರಹ್ಮಾನ್ ಸಟ್ಟಿಕಲ್, ರಿಯಾಜ್ ಸುರತ್ಕಲ್, ಗಫ಼ೂರ್ ಭಾಯಿ, ಇಬ್ರಾಹಿಮ್ ದುಬಾಲ್ ಮೊದಲಾದವರಿಗೆ ಧನ್ಯವಾದ ವಿತ್ತರು.

ಆದರೆ ನಮ್ಮ BCF ಅಧ್ಯಕ್ಷರಾದ ಡಾ. B K ಯೂಸುಫ಼್ ರವರು ತಮ್ಮ ವೈಯಕ್ತಿಕ ಕಾರ್ಯಕ್ಕಾಗಿ ಬೆಂಗಳೂರಿಗೆ ಅದೇ ದಿನ ಹೋಗ ಬೇಕಾಗಿ ಬಂದುದರಿಂದ ಪಿಕ್ ನಿಕ್ ಹಾಜರಾಗದೆ ಇದ್ದದು ಅಂದಿನ ದೊಡ್ಡ ಕೊರತೆಯಾಗಿತ್ತು. ಸನ್ಮಾನ ಸಮಾರಂಭದ ಸಂಧರ್ಭದಲ್ಲಿ ಅವರ ಶುಭಾಶಯಗಳನ್ನು ನೆರೆದ ಎಲ್ಲರಿಗೂ ತಿಳಿಸಲಾಯಿತು . ಡಾ B K ಯೂಸುಫ಼್ ರವರು ಪಿಕ್ ನಿಕ್ ನ ಉಸ್ತುವಾರಿ ಯನ್ನು ವಹಿಸಿದ BCF LADIES WING ಮತ್ತು ಇತರ ರನ್ನು ತಮ್ಮ ಸಂದೇಶದಲ್ಲಿ ಅಭಿನಂದಿಸಿದರು.

ಅಂತೂ ಈ ವರ್ಷದ ಪಿಕ್ ನಿಕ್ ಮನುಷ್ಯ ಮನುಷ್ಯ ರ ನಡುವೆ ಇರ ಬೇಕಾದ ಹೋದರತೆ- ಸಮ ಭಾವ – ಸೌಹಾರ್ದತೆಯ ಒಂದು ಅನಿರ್ವಚನೀಯವಾದ ಅನುಭವವಾಗಿತ್ತು.

ವರದಿ: M E ಮೂಳೂರು.

Write A Comment