ಗಲ್ಫ್

ತುಂಬೆ ಹಾಸ್ಪಿಟಲ್ ದುಬೈಯಲ್ಲಿ ಜೂನ್ 12 ರಂದು ಬೃಹತ್ ಉಚಿತ ವೈದ್ಯಕೀಯ ಶಿಬಿರ

Pinterest LinkedIn Tumblr

0G6A0493

ದುಬೈ: ಪ್ರತಿಷ್ಟಿತ ತುಂಬೆ ಹಾಸ್ಪಿಟಲ್ ಮತ್ತು ಕರ್ನಾಟಕ ಕಲ್ಚರಲ್ ಫೌಂಡೇಶನ್ ದುಬೈ ಸಹಭಾಗಿತ್ವದಲ್ಲಿ ಜೂನ್ 12 ಶುಕ್ರವಾರದಂದು ಬೃಹತ್ ಉಚಿತ ವೈದ್ಯಕೀಯ ಶಿಬಿರ ಹಮ್ಮಿಕೊಳ್ಳಲಾಗಿದೆ.

ತುಂಬೆ ಹಾಸ್ಪಿಟಲ್ (ಅಲ್ ಕಿಸೈಸ್ ದುಬೈ ಸ್ಟೇಡಿಯಂ ಮೆಟ್ರೋ ಸ್ಟೇಷನ್ ಸಮೀಪ ಲುಲು ಹೈಪರ್ ಮಾರ್ಕೆಟ್ ಹಿಂಭಾಗ) ನಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5 ರ ತನಕ ನಡೆಯಲಿರುವ ಈ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಭಾಗವಹಿಸುವ ನೀರಿಕ್ಷೆಯಿದೆ,

ವಿಶಾಲವಾದ ಸುಸಜ್ಜಿತ ಸೌಕರ್ಯಗಳನ್ನೊಳಗೊಂಡ ತುಂಬೆ ಹಾಸ್ಪಿಟಲ್ ದುಬೈ ಯ ಮೆಗಾ ಮೆಡಿಕಲ್ ಕ್ಯಾಂಪೈನ್ ನೊಂದಿಗೆ ಕೈ ಜೋಡಿಸಿದ KCF ದುಬೈ ಯು ಜನರಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುವ ಸಲುವಾಗಿ ಈ ಮಹತ್ತರ ಹೆಜ್ಜೆಯನ್ನು ಮುಂದಿಟ್ಟಿದೆ.

0G6A0497

0G6A0489

0G6A0488

ಹ್ರದ್ರೋಗಿಗಳು, ಕಿಡ್ನಿ ವೈಫಲ್ಯ ರೋಗಿಗಳು ವ್ರದ್ಧಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ರೋಗಗಳನ್ನು ತಡೆಗಟ್ಟುವ ಮುನ್ನೆಚ್ಚರಿಕಾ ಕ್ರಮಗಳನ್ನು ವಿವರಿಸುವ ಸೆಮಿನಾರ್ ಗಳು, ಉಚಿತ ಹ್ರದಯ ಹಾಗೂ ಕಿಡ್ನಿ ತಪಾಸಣೆಗಳು, ರೋಗ ನಿರೋಧಕ ಶಕ್ತಿಗಳ ಬಳಕೆಗಳ ಕುರಿತ ಉಪಯುಕ್ತ ಮಾಹಿತಿಗಳು ಪ್ರಸ್ತುತ ಕ್ಯಾಂಪೈನ್ ನ ವಿವಿಧ ಭಾಗಗಳಾಗಿವೆ.

0G6A0483

0G6A0484

0G6A0486

ಬೃಹತ್ ಉಚಿತ ವೈದ್ಯಕೀಯ ಶಿಬಿರ ದಲ್ಲಿ ರಕ್ತದೊತ್ತಡ, ಮಧುಮೇಹ, ಬಿಎಂಐ, ಇಸಿ ಜಿ, ಅಲ್ಟ್ರಾ ಸೌಂಡ್ ಪರೀಕ್ಷೆಗಳು ಉಚಿತ ವಾಗಿ ನಡೆಸಿಕೊಡಲಾಗುವುದು. ಉಚಿತ ಆರೋಗ್ಯ ತಪಾಸಣೆಯ ಜೊತೆ ಉಚಿತ ಔಷದಿ ಲಭ್ಯವಾಗಲಿದೆ.

ಗಲ್ಫ್ ರಾಷ್ಟ್ರಗಳಾದ್ಯಂತ ವ್ಯವಸ್ಥಿತವಾಗಿ ಕಾರ್ಯಾಚರಿಸುತ್ತಿರುವ ಕೆ ಸಿ ಎಫ್ ಸಾಮಾಜಿಕ ಸೇವಾ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಅರೋಗ್ಯ ಸೇವಾ ರಂಗದಲ್ಲಿ ತುಂಬೆ ಹಾಸ್ಪಿಟಲ್ ತನ್ನದೇ ಆದ ಕೊಡುಗೆ ನೀಡಿದೆ. ಆದುದರಿಂದ ಈ ಮೇಳೈಸುವಿಕೆಯ ಜಂಟಿ ಶಿಬಿರ ಯಶಸ್ವಿಯಾಗಿ ಮೂಡಿ ಬರಲಿದೆ.

ಕಾರ್ಡಿಯೋಲಜಿ, ಇಂಟರ್ನಲ್ ಮೆಡಿಸಿನ್, ಜನರಲ್ ಸರ್ಜರಿ, ಗೈನಕಾಲಜಿ, ಪೀಡಿಯಾಟ್ರಿಕ್ಸ್, ಇ ಎನ್ ಟಿ, ಯುರಾಲಜಿ, ಆರ್ತೋಪೆಡಿಕ್ಸ್, ಚರ್ಮ ರೋಗ, ಡೆಂಟಲ್, ಕಣ್ಣಿನ ತಪಾಸಣಾ ವಿಭಾಗ ಗಳು ತುಂಬೆ ಹೋಸ್ಪಿಟಲ್ ನಲ್ಲಿ ಕರ್ಯಾಚರಿಸುತಿದ್ದು, ಶಿಬಿರಾರ್ಥಿಗಳಿಗೆ ಉಚಿತ ಔಷದಿ ನೀಡಲಾಗುವುದು.

ಈ ಶಿಬಿರದಲ್ಲಿ ಪಾಲ್ಗೊಳ್ಳುವ ಸಲುವಾಗಿ ನೊಂದಾಯಿಸಿಕೊಳ್ಳಲು – 055-5271713. 050-4380419, 0508817382. ಎಂಬೀ ನಂಬರ್ ಗಳನ್ನು ಸಂಪರ್ಕಿಸಲು ವಿನಂತಿಸಲಾಗಿದೆ

ಜನರಿಗೆ ಅರೋಗ್ಯ ದ ಬಗ್ಗೆ ಕಾಳಜಿ ಮೂಡಿಸಿ ದುಬೈ ಪರಿಸರಗಳಲ್ಲಿ ನೆಲೆಸಿರುವ ಎಲ್ಲಾ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಶಿಬಿರದ ಸದುಪಯೋಗವನ್ನು ಪಡೆದು ಶಿಬಿರವನ್ನು ಯಶಸ್ವಿಗೊಳಿಸಬೇಕಾಗಿ ತುಂಬೆ ಹಾಸ್ಪಿಟಲ್ ಆಡಳಿತ ವಿಭಾಗ ಮತ್ತು ಕೆ ಸಿ ಎಫ್ ದುಬೈ ಘಟಕ ಜಂಟಿ ಯಾಗಿ ಆಯೋಜಿಸಿದ ಪತ್ರಿಕಾ ಗೋಷ್ಠಿ ಯಲ್ಲಿ ಆರೋಗ್ಯ ಶಿಬಿರ ಕೆ ಸಿ ಎಫ್ ನಿರ್ವಹಣಾ ಸಮಿತಿ ಚೈರ್ಮನ್ ಅಬ್ದುಲ್ ಬಷೀರ್ ಬೊಳುವಾರ್ ತಿಳಿಸಿದ್ದಾರೆ.

ಮಹಬೂಬ್ ರಹ್ಮಾನ್ ಸಖಾಫಿ (ಅದ್ಯಕ್ಷರು ದುಬೈ ಕೆ. ಸಿ. ಎಫ್), ಡಾ. ಸಯ್ಯದ್ ಮೆಹ್ಮೂದಿ(ಮೆಡಿಕಲ್ ಡೈರೆಕ್ಟರ್, ತುಂಬೆ ಹಾಸ್ಪಿಟಲ್ ದುಬೈ), ಮುಹಮ್ಮದ್ ಅಸ್ಲಂ ಕಾರಾಜೆ (ಕನ್ವೀನರ್, ಕೆ.ಸಿ.ಎಫ್ ಆರೋಗ್ಯ ಶಿಬಿರ ನಿರ್ವಹಣಾ ಸಮಿತಿ), ಅಬ್ದುಲ್ ಜಲೀಲ್ ನಿಜಾಮಿ (ಅದ್ಯಕ್ಷರು ಶಿಕ್ಷಣ ವಿಭಾಗ ಕೆ. ಸಿ. ಎಫ್, ಯು ಎ ಇ), ಶುಕೂರ್ ಮನಿಲ (ಕನ್ವೀನರ್, ಫಾಮಿಲಿ ವಿಂಗ್ ಕೆ.ಸಿ.ಎಫ್ ದುಬೈ), ಇ. ಕೆ. ಇಬ್ರಾಹಿಮ್ ಹಾಜಿ ಕಿನ್ಯ (ವೈಸ್ ಛೇರ್ಮನ್, ಕೆ.ಸಿ.ಎಫ್ ಆರೋಗ್ಯ ಶಿಬಿರ ನಿರ್ವಹಣಾ ಸಮಿತಿ), ವಿಘ್ನೇಶ್ (ಪ್ರಸರಣ ವಿಭಾಗ, ತುಂಬೆ ಹಾಸ್ಪಿಟಲ್ ದುಬೈ), ಧರ್ಮಪಾಲ (ಪ್ರಸರಣ ವಿಭಾಗ, ತುಂಬೆ ಹಾಸ್ಪಿಟಲ್ ದುಬೈ), ಮುಹಮ್ಮದ್ ಖಲಂದರ್ ಕಬಕ (ಪ್ರಧಾನ ಕಾರ್ಯದರ್ಶಿ ದುಬೈ ಕೆ. ಸಿ. ಎಫ್), ಮುಹಮ್ಮದ್ ರಿಫಾಯಿ ಕಾಟಿಪ್ಪಳ್ಳ (ಕನ್ವೀನರ್,ಮಾಧ್ಯಮ ವಿಭಾಗ ದುಬೈ ಕೆ.ಸಿ.ಎಫ್), ಇಕ್ಬಾಲ್ ಕಾಜೂರ್ (ಕನ್ವೀನರ್ ಸಾಂತ್ವನ ವಿಭಾಗ ಕೆ. ಸಿ. ಎಫ್, ಯು ಎ ಇ) ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ್ದರು.

Write A Comment