ಗಲ್ಫ್

ಇಂಡಿಯನ್ ಕಲ್ಚರಲ್ ಸೊಸೈಟಿಯ ನೂತನ ಯುಎಇ ಕೇಂದ್ರ ಸಮಿತಿ ರಚನೆ: ಅಲಿಯಾರ್ ನೂತನ ಅಧ್ಯಕ್ಷರಾಗಿ, ನಾಸೀರ್ karaje ಪ್ರ.ಕಾರ್ಯದರ್ಶಿಯಾಗಿ ಆಯ್ಕೆ

Pinterest LinkedIn Tumblr
sdp
ದುಬೈ, ಮೇ 5: ಎಸ್‌ಡಿಪಿಐ ಪಕ್ಷದ ಅನಿವಾಸಿ ಭಾರತೀಯ ಸಂಘಟನೆಯಾಗಿರುವ ಇಂಡಿಯನ್ ಕಲ್ಚರಲ್ ಸೊಸೈಟಿಯ ಯುಎಇ ಕೇಂದ್ರ ಸಮಿತಿಯನ್ನು ಇತ್ತೀಚೆಗೆ ಅಜ್ಮಾನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಚಿಸಲಾಯಿತು.
ಸಭೆಯ ಆರಂಭದಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಸಮಿತಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಕೇರಳ ಮೂಲದ ಅಲಿಯಾರ್‌ರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಕರ್ನಾಟಕ ಮೂಲದ ನಾಸೀರ್ karaje, ಉಪಾಧ್ಯಕ್ಷರಾಗಿ ಹಸನ್ ಟಿ.ಎಂ. ಹಾಗೂ ಮುನಾವರ್ ಮತ್ತು ನೌಶಾದ್‌ರವರನ್ನು ಕಾರ್ಯದರ್ಶಿಗಳಾಗಿ ಆಯ್ಕೆ ಮಾಡಲಾಯಿತು.
sdp1
sdp2
sdp12
ಎಸ್‌ಡಿಪಿಐ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎ.ಸಯೀದ್‌ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಸನ್ ಟಿ.ಎಂ.ವಹಿಸಿದ್ದರು. ಇಂಡಿಯನ್ ಕಲ್ಚರಲ್ ಸೊಸೈಟಿಯ  ಮಾಜಿ ಪ್ರಧಾನ ಕಾರ್ಯದರ್ಶಿ ಮುನಾವರ್  ವಾರ್ಷಿಕ ವರದಿ ವಾಚಿಸಿದರು. ನೌಶಾದ್ ಕೊಟೆಕಲ್ ಚುನಾವಣಾ ಆಯ್ಕೆ ಕಾರ್ಯವನ್ನು ನಡೆಸಿಕೊಟ್ಟರು. ಆರಂಭದಲ್ಲಿ ಇಂಡಿಯನ್ ಕಲ್ಚರಲ್ ಸೊಸೈಟಿಯ ಕಾರ್ಯದರ್ಶಿ ನೌಶಾದ್ ತಿರುವನಯ ಸ್ವಾಗತಿಸಿದರು.
ನೂತನ ಸಮಿತಿಯನ್ನು ಘೋಷಣೆ ಮಾಡಿದ ಎ.ಸಯೀದ್‌ರವರು ಭಾರತದ ಪ್ರಸ್ತುತ ರಾಜಕೀಯ ಸನ್ನಿವೇಶವನ್ನು ಸಭೆಯ ಮುಂದಿಟ್ಟರು. ಇಂಡಿಯನ್ ಕಲ್ಚರಲ್ ಸೊಸೈಟಿಯ ಯುಎಇ ಕೇಂದ್ರ ಸಮಿತಿಯ ಅಧ್ಯಕ್ಷ ಅಲಿಯಾರ್ ಕೊನೆಯಲ್ಲಿ ತಮ್ಮ ಮಾತುಗಳನ್ನು ಸಭೆಯ ಮುಂದಿಟ್ಟರೆ, ಪ್ರಧಾನ ಕಾರ್ಯದರ್ಶಿಯಾಗಿ ನಾಸೀರ್ karaje ವಂದಿಸಿದರು.

Write A Comment