ಗಲ್ಫ್

ರಿಯಾದ್: ಅದ್ಧೂರಿಯಾಗಿ ನಡೆದ ಐಎಫ್‌ಎಫ್ ಸ್ನೇಹಕೂಟ-2015

Pinterest LinkedIn Tumblr

19

ಇಂಡಿಯಾ ಫ್ರೆಟರ್ನಿಟಿ ಫೋರಂ ರಿಯಾದ್ ಕರ್ನಾಟಕ ಘಟಕದ ವತಿಯಿಂದ ಬೃಹತ್ ಸಾರ್ವಜನಿಕ ಕಾರ್ಯಕ್ರಮ ಸ್ನೇಹಕೂಟ-2015, ಮಾರ್ಚ್ 26 ರ ಶುಕ್ರವಾರ ರಾತ್ರಿ ಇಲ್ಲಿನ ಅಲ್-ರುಶೇದ್ ರೆಸೋರ್ಟ್‌ನಲ್ಲಿ ನಡೆಯಿತು.

ಈ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಎಫ್‌ಎಫ್ ರಿಯಾದ್ ಕರ್ನಾಟಕ ಘಟಕದ ಅಧ್ಯಕ್ಷರಾದ ಜ! ಹಾರೀಸ್ ಅಂಗರಗುಂಡಿಯವರು ವಹಿಸಿದ್ಧು, ಐಎಫ್‌ಎಫ್ ರಿಯಾದ್ ರೀಜಿಯನ್ ಅಧ್ಯಕ್ಷರಾದ ಜ! ಇಲ್ಯಾಸ್ ಕೇರಳ ರವರು ಉದ್ಘಾಟನೆಯನ್ನು ನೆರವೇರಿಸಿದರು.

1

2

3

4

5

6

7

9

10

ತನ್ನ ಉಧ್ಘಾಟನಾ ಭಾಷಣದಲ್ಲಿ ಐಎಫ್‌ಎಫ್ ನಡೆಸಿಕೊಂಡು ಬರುತ್ತಿರುವ ಸಾಮಾಜಿಕ ಸೇವಾ ಕೆಲಸಗಳ ಬಗೆಗೆ ವಿವರಿಸುತ್ತಾ , ಮುಂದಿನ ದಿನಗಳಲ್ಲಿ ಸಂಘಟನೆಗೆ ಸಾರ್ವಜನಿಕರ ಸಹಕಾರದ ಅಗತ್ಯತೆಯನ್ನು ತಿಳಿಸಿದರು. ಮುಖ್ಯ ಭಾಷಣ ಮಾಡಿದ ಪೊಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಜ!ಅಬ್ದುಲ್ ರಝಾಕ್ ಕೆಮ್ಮಾರ , ಭಾರತ ದೇಶದ ಹಿಂದುಳಿದ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಪೊಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೈಗೊಳ್ಳುತ್ತಿರುವ ಕೆಲಸ ಕಾರ್ಯಗಳ ಬಗೆಗೆ ವಿವರಿಸುತ್ತಾ, ಈ ಸಮುದಾಯಗಳ ಸಬಲೀಕರಣಕ್ಕಾಗಿ ಏಕತೆಯ ಅಗತ್ಯತೆಯನ್ನು ಸ್ಪಷ್ಟ ಮಾತುಗಳಿಂದ ವಿವರಿಸಿದರು. ಇಂಡಿಯನ್ ಸೊಷಿಯಲ್ ಫಾರಂ ರಿಯಾದ್ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷರಾದ ಜ! ಸಮೀರ್ ಎರ್ಮಾಳ್ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ಧರು.

ಐಎಫ್‌ಎಫ್ ರಿಯಾದ್ ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಜ! ಇಸ್ಮಾಯಿಲ್ ಇನೋಳಿ ಅತಿಥಿಗಳನ್ನು ಸ್ವಾಗತಿಸಿದರು. ಜ! ರವೂಫ್ ಕಳಾಯಿ ಧನ್ಯವಾದಗೈದರು. ಶರೀಫ್ ಕಬಕ ಕಾರ್ಯಕ್ರಮ ನಿರೂಪಿಸಿದರು.

11

12

13

14

15

16

17

18

22

23

ಸಭಾ ಕಾರ್ಯಕ್ರಮದ ನಂತರ , ವರದಕ್ಷಿಣೆ ಪಿಡುಗಿನಿಂದ ಸಮುದಾಯ ಎದುರಿಸುತ್ತಿರುವ ಸಮಸೈ ಯನ್ನು ಕಾಸಿ ಬಂಗಾರ್ ಎಂಬ ಕಿರುನಾಟಕದ ಮೂಲಕ ತೋರಿಸಿಕೊಡಲಾಯಿತು. ನಂತರ ಯೋಗ ಪ್ರದರ್ಶನ, ಮಕ್ಕಳಿಗಾಗಿ ಇಸ್ಲಾಮಿಕ್ ಕ್ವಿರ್ ಹಾಗೂ ಹಲವು ಆಟೋಟ ಸ್ಪರ್ಧೆಗಳು, ಮಹಿಳಯರಿಗಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು , ಮತ್ತು ಯುವಕರಿಗಾಗಿ ವಿವಿಧ ಕ್ರೀಡಾ ಕಾರ್ಯಕ್ರಮಗಳು ನಡೆದವು.

 

Write A Comment