ದಮಾಮ್: ಇಂಡಿಯನ್ ಸೋಶಿಯಲ್ ಫೋರಮ್ ಈಸ್ಟನ್ ಪ್ರೊವಿನ್ಸ್ ಕರ್ನಾಟಕ ಚಾಪ್ಟರ್ ವತಿಯಿಂದ ಎಪ್ರಿಲ್ 10ರಂದು ಅಲ್‌ಖೋಬರ್‌ನ ರಾಕಾ ಸಾಬ್ಸ ಕ್ರೀಡಾಂಗಣದಲ್ಲಿ ಆಯೋಜಿಸಿರುವ ‘ಸೋಶಿಯಲ್ ಫೋರಮ್ ಕಪ್-2015’ ಕ್ರಿಕೆಟ್ ಪಂದ್ಯಾಕೂಟದ ಅಂಗವಾಗಿ ‘ಇಂಡಿಯನ್ ಸೋಶಿಯಲ್ ಫೋರಮ್’ ಕ್ರಿಕೆಟ್ ತಂಡದ ವರ್ಣರಂಜಿತ ಜೆರ್ಸಿಯನ್ನು ದಮಾಮ್‌ನ ರೋಸ್ ರೆಸ್ಟೋರೆಂಟ್‌ನಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.
ನಡೆದ ಸರಳ ಆಕರ್ಷಕ ಸಮಾರಂಭದಲ್ಲಿ ತಂಡದ ಜೆರ್ಸಿಯನ್ನು ಸೋಶಿಯಲ್ ಫೋರಮ್‌ನ ರಾಜ್ಯ ಕಾರ್ಯದರ್ಶಿ ಬಾವಾ ಸಾಬು ಬ್ಯಾರಿ ಅವರು ತಂಡದ ನಾಯಕ ಸಯೀದ್ ಅವರಿಗೆ ಹಸ್ತಾಂತರಿಸುವ ಮೂಲಕ ಸಾಂಕೇತಿಕವಾಗಿ ಬಿಡುಗಡೆಗೊಳಿದ್ದು, ಈ ಸಂದರ್ಭದಲ್ಲಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ತಂಡಗಳ ಕಪ್ತಾನರು ಹಾಜರಿದ್ದರು. ಇಂಡಿಯನ್ ಸೋಶಿಯಲ್ ಫೋರಮ್ ಕ್ರಿಕೆಟ್ ತಂಡದ ಜೆರ್ಸಿಯ ಪ್ರಾಯೋಜಕತ್ವವನ್ನು ಅಲ್ ಮುಸ್ಸಾದ್ ಹಾಗೂ ಫೆಬ್ರೋಟಿಕ್ ಕಂಪೆನಿಗಳು ವಹಿಸಿದ್ದವು.
ಇದಕ್ಕೂ ಮುನ್ನ ನೆರೆದಿದ್ದ ಕ್ರೀಡಾಭಿಮಾನಿಗಳು ಹಾಗೂ ವಿವಿಧ ತಂಡಗಳ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಇಂಡಿಯನ್ ಸೋಶಿಯಲ್ ಪೋರಮ್ ಕರ್ನಾಟಕ ಚಾಪ್ಟರ್ ಅಧ್ಯಕ್ಷ ಮುಹಮ್ಮದ್ ಶರೀಫ್, ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಿರುವುದರ ಉದ್ದೇಶ, ಹಿನ್ನೆಲೆಯನ್ನು ವಿವರಿಸಿದರು. ಸೋಶಿಯಲ್ ಫೋರಮ್‌ನ ಸಾಮಾಜಿಕ ಸೇವಾ ಕಾರ್ಯಚಟುವಟಿಕೆಯಲ್ಲಿ ಕೈಜೋಡಿಸುವಂತೆ ಕರೆ ನೀಡಿದರು.
ಕ್ರೀಡಾಕೂಟದ ನಿಯಮಾವಳಿಗಳ ಕುರಿತು ಅಬ್ದುಲ್ ಸಾಬು ಬ್ಯಾರಿ ಅವರು ವಿವರಿಸಿದರು. ಇಂಡಿಯನ್ ಸೋಶಿಯಲ್ ಫೋರಮ್‌ನ ರಾಜ್ಯ ಕಾರ್ಯದರ್ಶಿ ಆರಿಫ್ ಎಂ. ಅವರು ಕ್ರೀಡಾಕೂಟದ ಜೊತೆಗೆ ಫೋರಮ್ ಹಮ್ಮಿಕೊಂಡಿರುವ ಸಾಮಾಜಿಕ ಸೇವಾ ಚಟುವಟಿಕೆಗಳ ಕುರಿತು ವಿವರಿಸಿದರು.ವೇದಿಕೆಯಲ್ಲಿ ಇಂಡಿಯನ್ ಸೋಶಿಯಲ್ ಫೋರಮ್‌ನ ಖೋಬರ್ ಘಟಕದ ಅಧ್ಯಕ್ಷ ನಾಸಿರ್, ದಮಾಮ್ ಘಟಕದ ಅಧ್ಯಕ್ಷ ಫಯಾಝ್ ಎನ್., ಕ್ರೀಡಾಕೂಟದ ಸಂಯೋಜಕ ಇಮ್ರಾನ್ ಮುಂತಾದವರು ಉಪಸ್ಥಿತರಿದ್ದರು. ಇದೇ ವೇಳೆ ಕ್ರಿಕೆಟ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿಯನ್ನು ವಿವಿಧ ತಂಡಗಳ ಸಮ್ಮುಖದಲ್ಲೇ ಚೀಟಿ ಎತ್ತುವ ಮೂಲಕ ಸಿದ್ಧಪಡಿಸಲಾಯಿತು. ಹಾಗೂ ಆಗಮಿಸಿದ್ದ ಕ್ರೀಡಾಪಟುಗಳಿಗೆ ಔತಣಕೂಟ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.
ಎಂದಿನಂತೆ ಜುಬೈಲ್ ನ ಪಂದ್ಯಾಟದ ಫೈನಲ್ ಪಂದ್ಯಗಳು ಎಪ್ರಿಲ್ 2 ಹಾಗೂ 3ರಂದು ಜುಬೈಲ್ ಅಲ್ಫಲಾಹ್ ಕ್ರೀಡಾಂಗಣದಲ್ಲಿ ಅಹರ್ನಿಶಿ ನಡೆಯಲಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ಕ್ರೀಡಾಂಗಣದಲ್ಲಿ ಜರಗಲಿರುವುದು ಎಂದು ಐ. ಎಸ್. ಎಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಕ್ರೀಡಾಕೂಟದ ಹೆಚ್ಚಿನ ಮಾಹಿತಿಗಾಗಿ ಸಯೀದ್ 0564922696 ಅವರನ್ನು ಸಂಪರ್ಕಿಸಬಹುದು.