ಗಲ್ಫ್

ಕೆ ಐ ಸಿ ಅಲ್ ಕೌಸರ್ ಯೂತ್ ವಿಂಗ್  ಪ್ರಥಮ ವಾರ್ಷಿಕ ಮಹಾ ಸಭೆ; ಅಧ್ಯಕ್ಷರಾಗಿ ಜಬ್ಬಾರ್ ಬೈತಡ್ಕ ಹಾಗೂ ಪ್ರಧಾನ ಕಾರ್ಯದರ್ಶಿಯಾ ಅಹಮ್ಮದ್ ಜಾಬೀರ್ ಬೆಟ್ಟಂಪಾಡಿ ಆಯ್ಕೆ

Pinterest LinkedIn Tumblr

KIC Dubai_Mar 8_2015-002

ದುಬೈ: ಧಾರ್ಮಿಕ ಹಾಗೂ ಲೌಕಿಕ ವಿಧ್ಯಾಬ್ಯಾಸವನ್ನು ಒಂದೇ ಸೂರಿನಡಿಯಲ್ಲಿ ನೀಡುತ್ತಾ ಬಂದಿರುವ ಜಾಮಿಅ ಅಲ್ ಕೌಸರ್ ಶರೀಅತ್ ಕಾಲೇಜ್ ಕುಂಬ್ರ ಇದರ ಮೇಲುಸ್ತುವಾರಿ ಸಮಿತಿ ಕಳೆದ  ದಶಕ ಗಳಿಂದ ಗಲ್ಫ್ ರಾಷ್ಟ್ರ ಯು ಎ ಇ ಯಾದ್ಯಂತ ಹಲವಾರು ಧಾರ್ಮಿಕ ಸಾಮಾಜಿಕ ಕಾರ್ಯಕ್ಷೇತ್ರಗಳಲ್ಲಿ ಪ್ರಚಲಿತದಲ್ಲಿರುವ ಕರ್ನಾಟಕ ಇಸ್ಲಾಮಿಕ್ ಸೆಂಟರ್ ಯು ಎ ಇ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಯುವ ಸಂಘಟನೆ ಕೆ ಐ ಸಿ ಅಲ್  ಕೌಸರ್ ಯೂತ್ ವಿಂಗ್ ಇದರ ವಾರ್ಷಿಕ ಮಹಾ ಸಭೆಯು ಇತ್ತೀಚಿಗೆ ದೇರಾ ರಾಫೀ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.

KIC Dubai_Mar 8_2015-003

KIC Dubai_Mar 8_2015-004

KIC Dubai_Mar 8_2015-005

KIC Dubai_Mar 8_2015-006

KIC Dubai_Mar 8_2015-007

ಸಮಿತಿ  ಅಧ್ಯಕ್ಷರಾದ ಅಬ್ದುಲ್ ಅಝೀಝ್ ಸೊರಕೆಯವರ ಸಭಾಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ ಐ ಸಿ ಗೌರವಾಧ್ಯಕ್ಷಾರದ ಸಯ್ಯದ್ ಅಸ್ಕರಲಿ ತಂಙಲ್  ಕೊಲ್ಪೆ ಯವರು ಪ್ರಾರ್ಥಿಸಿ ಮಾತನಾಡಿ , ಪ್ರವಾಸಿಗಳ ಜೀವನದಲ್ಲಿ ಓರ್ವ ವ್ಯಕ್ತಿಗೆ ಸಿಗುವ ಅವಕಾಶ ಗಳು ಇನ್ನಾವ ವ್ಯಕ್ತಿಗಳಿಗೂ ಲಭಿಸುವುದಿಲ್ಲ. ಸಜ್ಜನನು, ದುಷ್ಟನು ಆಗಲು ಬೇಕಾದ ಸಕಲ ಮಾರ್ಗಗಳು ತೆರೆದಿರುವ ಇಂತಹ ಸಂದರ್ಬದಲ್ಲಿ ಸಿಗುವ ಸಮಯಗಳನ್ನು ಸತ್ಕರ್ಮಗಳಿಗೆ ಉಪಯೋಗಿಸಿ , ತಾಯಿನಾಡಿನ ಬಡ ಅನಾಥ ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಆಸರೆಯಾಗಿ ಕಾರ್ಯಾಚರಿಸುತ್ತಿರುವ ವಿಧ್ಯಾಸಂಸ್ಥೆಯಡಿಯಲ್ಲಿ ಕಾರ್ಯ ವೆಸಗುತ್ತಿರುವ ತಮ್ಮಂತಹ ಯುವ ಸಮೂಹವನ್ನು ಪ್ರಶಂಸಿಲೇಬೇಕು, ಎಂದು ಹಿತವಚನ ನೀಡಿ ಕೆ ಐ ಸಿ ಅಲ್ ಕೌಸರ್ ಯೂತ್ ವಿಂಗ್ ಪಧಾಧಿಕಾರಿಗಳ ಕಾರ್ಯ ವೈಖರಿಯ ಬಗ್ಗೆ ಹರ್ಷ ವ್ಯಕ್ತ ಪಡಸಿ ಮುಂದಿನ ದಿನಗಳಲ್ಲಿ ಉತ್ತಮ ರೀತಿಯಲ್ಲಿ ಮುನ್ನಡೆಯಲಿ ಎಂದು ಶುಭ ಹಾರೈಸಿದರು .

KIC Dubai_Mar 8_2015-008

KIC Dubai_Mar 8_2015-009

KIC Dubai_Mar 8_2015-010

KIC Dubai_Mar 8_2015-011

KIC Dubai_Mar 8_2015-012

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆ ಐ ಸಿ ರಾಷ್ಟ್ರೀಯ ಸಮಿತಿ ಅದ್ಯಕ್ಷರಾದ ಹಾಜಿ ಮೊಹಿಯುದ್ದೀನ್ ಕುಟ್ಟಿ ದಿಬ್ಬ ರವರು ಅತ್ಯಲ್ಪ ಸಮಯದಲ್ಲಿ ದೀನೀ  ಚೌಕಟ್ಟಿನಲ್ಲಿ  ಪ್ರಶಂಸಾರ್ಹ ಕಾರ್ಯಗಳ ಮೂಲಕ ಕೆ ಐ ಸಿ ಎಂಬ ಮಹಾ ಸ್ಥಾಪನೆಗೆ ನೆರಳಾಗಿ ಕಾರ್ಯಾಚರಿಸುತ್ತಿರುವ ಈ ಯುವ ಸಂಘಟನೆಯು ಇತರ ಸಂಘ ಸಂಸ್ಥೆಗಳಿಂದ ಭಿನ್ನವಾಗಿ ಗೋಚರಿಸುತ್ತಿದೆ. ವ್ಯಕ್ತಿಯೋರ್ವನ ಜೀವಿತ ಕಾಲದಲ್ಲಿ ಅತೀ ಹೆಚ್ಚು ಉಪಯುಕ್ತ ಸಮಯವಾಗಿದೆ ಯುವತ್ವ ಎಂಬುದು. ಪರಲೋಕದಲ್ಲಿಯೂ ಕೂಡ ಅಲ್ಲಾಹನು ಪ್ರಶ್ನಿಸುವ ಕಾಲವಾಗಿದೆ ಅದು , ಆದ್ದರಿಂದ ಇಂತಹ ದೀನೀ  ಕಾರ್ಯಗಳೊಂದಿಗೆ ಮುನ್ನಡೆಯುವ ಯುವ ಸಮೂಹವನ್ನು ಪ್ರೋತ್ಸಾಹಿಸಿಕೊಂಡು , ಅವನ ಕಾರ್ಯ ವೈಖರಿಗಳಲ್ಲಿ ಕೈಜೋಡಿಸುವಂತೆ ಕೇಳಿಕೊಂಡರು.

ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ಮಾಡಿದ ಅಶ್ರಫ್ ಪರ್ಲಡ್ಕ ರವರು ಒಂದು ವರ್ಷಗಳ ಅಂತರದಲ್ಲಿ ಕೆ ಐ ಸಿ ಅಲ್  ಕೌಸರ್ ಯೂತ್ ವಿಂಗ್ ಪಧಾಧಿಕಾರಿಗಳ ಕಾರ್ಯ ವೈಖರಿ ನಡೆದು ಬಂದ  ಹಾದಿ , ಹಾಗೂ ಸಂಘಟನೆಯ ಮುಂದಿರುವ ಉದ್ದೇಶವನ್ನು ವಿವರಿಸಿ, ಯುವ ಸದಸ್ಯರು ಕೆ ಐ ಸಿ ನೀಡಿದ ಅಭೂತ ಓರ್ವ ಕೊಡುಗೆಗಳನ್ನು ವಿವರಿಸಿ ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದ  ಅತಿಥಿಗಳನ್ನು ಹಾಗೂ ಆಗಮಿಸಿದ ಕೆ ಐ ಸಿ ನೇತಾರರನ್ನು , ಹಿತೈಷಿಗಳನ್ನು ತುಂಬು ಹೃದಯದಿಂದ ಸ್ವಾಗತಿಸಿದರು .

ಕಾರ್ಯಕ್ರಮದಲ್ಲಿ ಕೆ ಐ ಸಿ ನೇತಾರರು , ದುಬೈ ಸಮಿತಿ ಗೌರವಾಧ್ಯಕ್ಷರಾದ ಅಬ್ದುಲ್ ಖಾದರ್ ಬೈತಡ್ಕ ರವರು ಮಾತನಾಡಿ, ಸಮುದಾಯದಲ್ಲಿನ ದುರ್ಬಲ ಯುವ ಸಮೂಹವನ್ನು  ಗುರುತಿಸಿಕೊಂಡು , ವಿಧ್ಯಾಭ್ಯಾಸವನ್ನು ಅರ್ದದಲ್ಲಿ ಮೊಟಕು ಗೊಳಿಸಿ ಸಮಾಜಕ್ಕೆ ಮಾರಕವಾಗಿ, ಸಮುದಾಯಕ್ಕೆ ಕಪ್ಪು ಚುಕ್ಕೆಯಾಗುವುದನ್ನು ಮನಗಂಡು ಅಂತಹ ವಿಧ್ಯಾರ್ಥಿಗಳಿಗೆ ಸ್ಥಾಪನೆಯ ನಿಯಮಾನುಸಾರ ಅರ್ಹತಾ ಪರೀಕ್ಷೆಗಲ ಮೂಲಕ ಆಯ್ಕೆ ಗೊಳಿಸಿ ಸುದೀರ್ಗ ಎಂಟು ವರ್ಷಗಳ ವಿಧ್ಯಾರ್ಜನೆಯ ಮೂಲಕ ಪಮುಖ ಆರು ಭಾಷೆಗಳಲ್ಲಿ ದೀನೀ ಪ್ರಬೋಧನೆಗೆ ಯುವ ಪಂಡಿತರನ್ನು ಅರ್ಪಿಸಿದ ವಿಧ್ಯಾಸಂಸ್ಥೆಯಾಗಿದೆ , ನಾವು ಇಂದು ಗುರುತಿಸಿಕೊಳ್ಳುವ ಕೆ ಐ ಸಿ ಎಂಬುದು. ಯಾವುದೇ ಶುಲ್ಕ ವನ್ನು ಪಡೆಯದೇ ಊಟ ವಸತಿ , ಗಳನ್ನೂ ಸಂಪೂರ್ಣವಾಗಿ ಉಚಿತವಾಗಿ ನೀಡುತ್ತಾ ಬಂದಿರುವ ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ಸಮುದಾಯದಲ್ಲಿ ಉನ್ನತ ಮಟ್ಟದಲ್ಲಿ ಕಾರ್ಯಾಚರಿಸುತ್ತಿದ್ದು ಪ್ರಭಾಷಣ ಲೋಕದಲ್ಲೇ ಮಿನುಗು ನಕ್ಷತ್ರವಾಗಿ ಹೊಳೆಯುತ್ತಿದಾರೆ ಎಂದು , ಕೆ ಐ  ಸಿ ನಡೆದು ಬಂಡ ಹಾದಿಯನ್ನು ಸವಿವರವಾಗಿ ವಿವರಿಸಿ ಅಲ್  ಕೌಸರ್ ಎಂಬ ಯುವ ಸಂಘಟನೆಯು ಕೆ ಐ ಸಿ ಎಂಬ ವಿಧ್ಯಾಸಂಸ್ಥೆಗೆ ನೀಡಿದ ಸಹಕಾರವನ್ನು ಶ್ಲಾಗಿಸಿದರು.

ನಂತರ ಕೆ ಐ ಸಿ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾಬ್ ನೂರ್ ಮುಹಮ್ಮದ್ ನೀರ್ಕಜೆ ಯವರು ಮಾತನಾಡಿ ಪ್ರಸಕ್ತ ವರ್ಷದಲ್ಲಿ ಯುವ ಸಂಘಟನೆಯಾ ಬೆಳವಣಿಗೆ , ಕೆ ಐ ಸಿ ಯೊಂದಿಗಿನ ಸಂಭಂದ , ಹಾಗೂ ಪ್ರಸಕ್ತ ಸನ್ನಿವೇಶದಲ್ಲಿ ಕಾರ್ಯಚರಿಸಬೇಕಾದ ಆವಶ್ಯಕತೆಗಳನ್ನು ವಿವರಿಸಿ ಆರು ತಿಂಗಳ ಅವಧಿಯಲ್ಲಿ ಕೆ ಐ ಸಿ ವಿಧ್ಯಾಸಂಸ್ಥೆಯ ಅನಿವಾರ್ಯವಾಗಿದ್ದ ಸದೃಡ ಸರ್ವ ರೀತಿಯಲ್ಲೂ ಸಹಕಾರಿಯಾಗಬಲ್ಲ ವಾಹನ ವ್ಯವಸ್ತೆಯನ್ನು ಒದಗಿಸಿಕೊಟ್ಟು ಇಂದು ರಾಷ್ಟ್ರೀಯ ಸಮಿತಿ ಮೇಲಿನ ಜವಾಬ್ದಾರಿಯನ್ನು ನೀಗಿಸಿದ್ದು ಅಲ್ಲದೆ, ಕೆ ಐ ಸಿ ಎಂಬ ಬೃಹತ್ ಸಂಸ್ಥೆಯನ್ನು ವಿವಿದ ಕ್ಷೇತ್ರಗಳಲ್ಲಿ ಪ್ರಚಾರಕಾರ್ಯದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ತಮ್ಮ ಕಾರ್ಯ ರಾಷ್ಟ್ರೀಯ ಸಮಿತಿಯು ಅಭಾರಿಯಾಗಿದೆ  ಎಂದರು. ಅಲ್ಲದೆ ಇದೆ ಸಂಧರ್ಬದಲ್ಲಿ ಅಲ್ ಕೌಸರ್ ಯೂತ್ ವಿಂಗ್ ಪಧಾಧಿಕಾರಿಗಳ ಕಾರ್ಯದಕ್ಷತೆಯನ್ನು ಮನಗಂಡು ರಾಷ್ಟ್ರೀಯ ಸಮಿತಿ ವತಿಯಿಂದ ಸ್ಮರಣಿಕೆ ಹಾಗೂ ಅಭಿನಂದನಾ ಪತ್ರವನ್ನು ರಾಷ್ಟ್ರೀಯ ಸಮಿತಿ ಅದ್ಯಕ್ಷರಾದ ಹಾಜಿ ಮೊಹಿಯುದ್ದೀನ್ ಕುಟ್ಟಿ ದಿಬ್ಬ , ಗೌರವಾಧ್ಯಕ್ಷಾರದ ಸಯ್ಯದ್ ಅಸ್ಕರಲಿ  ಕೊಲ್ಪೆ ಕೋಶಾಧಿಕಾರಿ ಸುಲೈಮಾನ್ ಮೌಲವಿ ಕಲ್ಲೇಗ ಹಾಗೂ ಇತರ ಪಧಾಧಿಕಾರಿ ಗಳು  ಯೂತ್ ವಿಂಗ್  ಪಧಾಧಿಕಾರಿಗಳ ಪರವಾಗಿ ಅದ್ಯಕ್ಷರಾದ ಅಬ್ದುಲ್ ಆಝೀಝ್ ಸೊರಕೆ ಹಾಗೂ ಕಾರ್ಯದರ್ಶಿ ಅಹಮ್ಮದ್ ಜಾಬೀರ್ ಬೆಟ್ಟಂಪಾಡಿ ನೀಡಿ ಗೌರವಿಸಿ ಮುಂದಿನ ದಿನಗಳಲ್ಲಿ ಉತ್ತಮ ರೀತಿಯಲ್ಲಿ ಕಾರ್ಯಾಚರಿಸಲಿ ಎಂದು ಶುಭ ಹಾರೈಸಿದರು .

ನಂತರ ಅಧ್ಯಕ್ಷೀಯ ಭಾಷಣ ಗೈದ ಅಬ್ದುಲ್  ಅಬ್ದುಲ್ ಆಝೀಝ್ ಸೊರಕೆ ಯವರು , ಪ್ರಸಕ್ತ ಸಾಲಿನ ಹಲವಾರು ಸವಾಲುಗಳನ್ನು ಮೆಟ್ಟಿ ನಿಂತು ಕಣ್ತೆರೆದು ನೋಡುವಷ್ಟರಲ್ಲಿ ತೃಪ್ತಿ ದಾಯಕವಾದ ನಮ್ಮ ಗುರಿಯನ್ನು ತಲುಪಲು ಸಾಧ್ಯವಾಗಿದ್ದು , ಮುಂದೆ ತಮ್ಮಂತಹ ಯುವ ಸಮೂಹವು ಕೈಜೋಡಿಸಿಕೊಂಡು ವಿಧ್ಯಾಸಂಸ್ಥೆಯನ್ನು ಬಲ ಪಡಿಸಿ ಮುನ್ನಡೆಯುವಂತೆ ಕೇಳಿಕೊಂಡು ಸಹಕರಿಸಿ ಪ್ರೋತ್ಸಾಹಿಸಿದ ಎಲ್ಲರಿಗೂ ಕೃತಜ್ಞತೆ ಸಮರ್ಪಿಸಿ ಪ್ರಸಕ್ತ ಹಾಲಿ ಸಮಿತಿಯನ್ನು ಬರಕಾಸ್ತು ಗೊಳಿಸಿ ಘೋಷಿಸಿದರು .
ಕೆ ಐ ಸಿ ಪೋಷಕರೂ , ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷರು ಆದ ಜನಾಬ್ ಅಬ್ದುಲ್ ರಝಾಕ್ ಬುಲ್ಲೆರಿಕಟ್ಟೆಯವರು ಯವರು ನೂತನ ಸಮಿತಿ ಪಧಾಧಿಕಾರಿ ನೇಮಕದ ಜವಾಬ್ದಾರಿವಹಿಸಿ ಮಾತನಾಡಿ ಯುವ ಸಂಘಟನೆಗೆ ಶುಭ ಹಾರೈಸಿದರು. ನಂತರ ನೂತನ ಸಮಿತಿ ಗೌರವಾದ್ಯಕ್ಷರಾಗಿ ರಫೀಕ್ ಆತೂರ್ ಹಾಗೂ ಅಧ್ಯಕ್ಷರಾಗಿ ಜಬ್ಬಾರ್ ಬೈತಡ್ಕ ಆಯ್ಕೆ ಗೊಂಡರೆ  ಪ್ರಧಾನ ಕಾರ್ಯದರ್ಶಿ ಯಾಗಿ ಎರಡನೇ ಅವಧಿಗೆ ಅಹಮ್ಮದ್ ಜಾಬೀರ್ ಬೆಟ್ಟಂಪಾಡಿ ಯವರು ಮರು ಆಯ್ಕೆ ಗೊಂಡರು. ಕಾರ್ಯಾದ್ಯಕ್ಷರಾಗಿ ನವಾಝ್ ಬಿಸಿ ರೋಡ್ ಕೋಶಾಧಿಕಾರಿಯಾಗಿ ರಫೀಕ್ ಮುಕ್ವೆ ಹಾಗೂ ಇಫ್ತಿಕಾರ್ ಅಡ್ಯಾರ್ ಕನ್ನೂರ್ ರವರನ್ನು ನೇಮಿಸಲಾಯಿತು.
ನೂತನ ಸಮಿತಿ ಅಧ್ಯಕ್ಷರಾಗಿ ಆಯ್ಕೆ ಗೊಂಡ ಜಬ್ಬಾರ್ ಬೈತಡ್ಕ  ರವರು ಮಾತನಾಡಿ , ಮುಂದಿನ ದಿನಗಳಲ್ಲಿ ಕೆ ಐ  ಸಿ ಎಂಬ ಮಹಾ ವಿಧ್ಯಾ ಸಂಸ್ಥೆಗೆ ನೆರಳಾಗಿ ನಿಲ್ಲುವ ಭರವಸೆಯೊಂದಿಗೆ , ಸಂಘಟನೆಯ ರೂಪು ರೇಷೆಗಳಲ್ಲಿ  ತಾವೆಲ್ಲರೂ ಕೈಜೋಡಿಸಿ ಕೊಂಡು ಅರಬ್ ರಾಷ್ಟ್ರದಲ್ಲಿ ಭಲಿಷ್ಟ ಸಂಘಟನೆಯಾಗಿಸಳು ಸಹಕರಿಸುವಂತೆ ಕೇಳಿಕೊಂಡರು.

ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದ ನೌಶಾದ್ ಫೈಝಿ ಅಡ್ಯಾರ್ ಕನ್ನೂರ್ , ಶಂಸುದ್ದೀನ್ ಹನೀಫಿ , ದುಬೈ ಸಮಿತಿ ಅದ್ಯಕ್ಷರಾದ ಅಶ್ರಫ್ ಖಾನ್ ಮಾನ್ತೂರ್ , ಅಬುದಾಬಿ ಸಮಿತಿ ಅದ್ಯಕ್ಷರಾದ ಹನೀಫ್ ಆರ್ಯಮೂಲೆ , ಶಾರ್ಜಾ ಸಮಿತಿ ಅದ್ಯಕ್ಷರಾದ ಅಬ್ದುಲ್  ರಝಾಕ್ ಮಣಿಲಾ , ಬದ್ರುದ್ದೀನ್ ಹೆಂತಾರ್ , ನೈಫ್ ಘಟಕ  ಅದ್ಯಕ್ಷರಾದ ಅಬ್ದುಲ್ಲಾ ನಈಮಿ , ನಾಸೀರ್ ಮಂಗಿಲಪದವು ಮೊದಲಾದವರು ಸಂದರ್ಭೋಚಿತವಾಗಿ ಮಾತನಾಡಿ ನೂತನ ಸಮಿತಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಅತಾವುಲ್ಲಾ ಉಮರ್ ಮುಕ್ವೆ ಕಿರಾಅತ್ ಪಠಿಸಿ , ಅಹಮ್ಮದ್ ಜಾಬೀರ್ ಬೆಟ್ಟಂಪಾಡಿ ಯವರು ವರದಿ ವಾಚಿಸಿದರು. ಅಶ್ರಫ್ ಪರ್ಲಡ್ಕ ರವರು ಕಾರ್ಯಕ್ರಮ ನಿರೂಪಿಸಿ ರಫೀಕ್ ಮುಕ್ವೆ ರವರು ವಂದನಾರ್ಪಣೆ ಗೈದರು .ಪಧಾಧಿಕಾರಿಗಳಾದ ನವಾಜ್ ಬಿಸಿ ರೋಡ್ ಸಲೀಂ ಮಿತ್ತೂರ್ , ರಝಾಕ್ ಸೊರಕೆ , ನಾಸಿರ್ ಬಪ್ಪಲಿಗೆ ಮೊದಲಾದವರು ವಿವಿದ ರೀತಿಯಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿ .

Write A Comment