ಗಲ್ಫ್

ಅಬುಧಾಬಿ : ಮಾರ್ಚ್ 6 ಕ್ಕೆ ಮಂಗಳೂರು ಕಪ್ 2015

Pinterest LinkedIn Tumblr

MCC Cup Abu Dhabi - 2015

ಅಬುಧಾಬಿ : ಕಳೆದ ವರ್ಷ ಬಹಳ ರೊಮಾಂಚನಕಾರಿಯಾಗಿ ನಡೆದ ಮಂಗಳೂರು ಕಪ್ ನ; ತೃತೀಯ ಸೀಸನ್ ಮಂಗಳೂರು ಕಪ್ 2015 ಮಾರ್ಚ್ 6 ಶುಕ್ರವಾರ ಶೇಖ್ ಜಾಯಿದ್ ಓವೆಲ್ ಕ್ರೀಡಾಂಗಣದಲ್ಲಿ ನಡೆಯಲಿದೆಯೆಂದು ಮಂಗಳೂರು ಕ್ರಿಕೆಟ್ ಕ್ಲಬ್ ಅಬುಧಾಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಪೈಪೋಟಿಯುತ ಹಣಾಹಣಿ ನಿರೀಕ್ಷಿತ ಪಂದ್ಯಾವಳಿಯಲ್ಲಿ ಹಾರ್ಡ್ ಟೆನಿಸ್ – MRI ಚೆಂಡು ಬಳಕೆಯಾಗಲಿದ್ದು, ಪಂದ್ಯ ವು ನಿರ್ದಿಷ್ಟ ಆರು ಓವರ್ ಗಳಿಗೆ ಸೀಮಿತವಾಗಿದೆ. ಪ್ರವಾಸಿ ಭಾರತೀಯ ತಂಡಗಳಿಗೆ ಮಾತ್ರ ಸೀಮಿತವಾಗಿರುವ ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳು ಕೇವಲ ಭಾರತೀಯ ಕ್ರಿಕೆಟಿಗರನ್ನು ಮಾತ್ರ ಹೊಂದಿರಬೇಕೆಂಬ ನಿಬಂಧನೆ ಇರುವುದಾಗಿ ಸಂಘಟಕರು ವ್ಯಕ್ತಪಡಿಸಿದ್ದಾರೆ.

ಈ ಸಂಧರ್ಭದಲ್ಲಿ ಮಂಗಳೂರು ಕಪ್ – ಮೈಲಿಗಲ್ಲುಗಳು ಎಂಬ ಕಿರುಹೊತ್ತಿಗೆಯನ್ನೂ ಸಂಘಟಕರು ಪ್ರಕಾಶನ ಮಾಡಲಿದ್ದಾರೆ. ಕಳೆದಬಾರಿ 28 ತಂಡಗಳು ಯುಎ ಇ ಸಂಯುಕ್ತ ಅರಬ್ ಸಂಸ್ಥಾನದ ಏಳು ಎಮಿರಟುಗಳಿಂದ ಆಗಮಿಸಿ ಕದನ ಕುತೂಹಲ ಕೆರಳಿಸಿತ್ತು. 2013 ಫೈನಲ್ ಹಣಾಹಣಿಯಲ್ಲಿ ಸುರತ್ಕಲ್ ಸ್ಟಾರ್ ಟ್ರೋಫಿಯನ್ನು ತನ್ನ ಬಗಲಿಗೆ ಹಾಕಿಕೊಂಡರೆ ನಫೀಸ್ ದುಬೈ ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು. 2014 ರ ಫೈನಲ್ ನಲ್ಲಿ ಯಂಗ್ ಇಂಡಿಯನ್ಸ್ ಮತ್ತು ಸಿತಾರ ಕ್ರಿಕೆಟರ್ಸ್ ತಂಡಗಳು ಕ್ರಮವಾಗಿ ವಿನ್ನರ್ ಮತ್ತು ರನ್ನರ್ ಅಪ್ ಆಗಿ ಮೂಡಿಬಂದಿತ್ತು.

ಪಂದ್ಯಾವಳಿಯ ವಿಜಯಿಗಳಿಗೆ ಆಕರ್ಷಕ ಬಹುಮಾನ ಘೋಷಿಸಲಾಗಿದ್ದು ಅವು ಇಂತಿವೆ :
ಪ್ರಥಮ ಸ್ಥಾನ – ಟ್ರೋಫಿ ಮತ್ತು 7017/ -AED ಮೊತ್ತ
ರನ್ನರ್ ಅಪ್ – ಟ್ರೋಫಿ ಮತ್ತು 4014/ -AED ಮೊತ್ತ

ಸರಣಿ ಪುರುಷೋತ್ತಮ, ಉತ್ತಮ ದಾಂಡಿಗ, ಉತ್ತಮ ಎಸೆತಗಾರ, ಉತ್ತಮ ಕೀಪರ್, ಉತ್ತಮ ಕ್ಷೇತ ರಕ್ಷಕ, ಮನಮೋಹಕ ಕ್ಯಾಚ್, ಹಾಗು ಫೈನಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪ್ರದಾನಮಾಡಲಾಗುವುದು. ಲೀಗ್ ಹಂತದ ಪ್ರತೀ ಪಂದ್ಯಗಳಲ್ಲಿ ಕೂಡ ಪಂದ್ಯ ಪುರುಷೋತ್ತಮ ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಗುವುದು. ವೀಕ್ಷಕರಿಗೆ ಮತ್ತು ಆಟಗಾರರಿಗೆ ಡ್ರಾ ಮೂಲಕ ಹತ್ತು ಹಲವು ಆಕರ್ಷಕ ಬಹುಮಾನಗಳನ್ನೂ ಪಡೆಯುವ ಸದವಕಾಶವಿದೆ. ಈ ಪಂದ್ಯಾವಳಿಯ ಉಧ್ಘಾಟನಾಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಮಾಜಿಕ ಕ್ಷೇತ್ರದ ಗಣ್ಯರು, ಉದ್ಯಮಿಗಳು ಭಾಗವಹಿಸಲಿದ್ದಾರೆ.

ಅನಿವಾಸಿ ಕನ್ನಡಿಗರಲ್ಲಿ ಕ್ರೀಡಾಪ್ರೇಮವನ್ನು ಹುರಿದುಂಬಿಸುವ ಸಲುವಾಗಿ ಹುಟ್ಟಿಕೊಂಡ ಮಂಗಳೂರು ಕ್ರಿಕೆಟ್ ಕ್ಲಬ್ ವರ್ಷಂಪ್ರತಿ ಈ ಪಂದ್ಯಾವಳಿಯನ್ನು ನಡೆಸಿಕೊಂಡು ಹೋಗುವ ಗುರಿ ಹೊಂದಿದೆ. ತಂಡಗಳ ನೋಂದಣಿ ಕಾರ್ಯ ಪ್ರಗತಿಯಲ್ಲಿದ್ದು. ಭಾಗವಹಿಸಲಿಚ್ಚಿಸುವವರು ಅಂತರ್ಜಾಲ ದ ಮುಖಾಂತರ ಮಂಗಳೂರು ಕ್ರಿಕೆಟ್ ಕ್ಲಬ್ ವೆಬ್ಸೈಟ್ http://www.mccabudhabi.com ನಲ್ಲಿ ನೋಂದಣಿ ಮಾಡಿಕೊಳ್ಳ ಬೇಕಾಗಿ ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡವರನ್ನು ದೂರವಾಣಿ ಮೂಲಕ ಸಂಪರ್ಕಿಸಬೇಕಾಗಿ ಕೋರಲಾಗಿದೆ : ಲತೀಫ್ – 0506713247 ರಶೀದ್ – 0504387609.

Write A Comment