ಗಲ್ಫ್

ಜನವರಿ 30ರಂದು ಅಜ್ಮಾನ್‌ನಲ್ಲಿ ಬಿಸಿಎಫ್‌ನ ‘ಬ್ಯಾರೀಸ್ ಸ್ಪೋರ್ಟ್ಸ್ ಫೆಸ್ಟಿವಲ್-2015’; ಬ್ರೌಚರ್ ಬಿಡುಗಡೆಗೊಳಿಸಿದ ಗಣ್ಯರು

Pinterest LinkedIn Tumblr

2

ದುಬೈ, ನ.30: ಯುಎಇ ಬ್ಯಾರೀಸ್ ಕಲ್ಚರಲ್ ಫೋರಂ(ಬಿಸಿಎಫ್) ‘ಬ್ಯಾರೀಸ್ ಸ್ಪೋರ್ಟ್ಸ್ ಫೆಸ್ಟಿವಲ್-2015’ ಕ್ರೀಡಾಕೂಟವನ್ನು ಜನವರಿ 30ರ ಶುಕ್ರವಾರದಂದು ಅಜ್ಮಾನ್‌ನ ಜಿಎಂಸಿ ಕ್ರೀಡಾಂಗಣದಲ್ಲಿ ಆಯೋಜಿಸಿದೆ.

ಈ ಹಿನ್ನೆಲೆಯಲ್ಲಿ ಬರ್‌ದುಬೈಯ ಉಸ್ಮಾನಿ ಹೊಟೇಲ್‌ನಲ್ಲಿ ಕ್ರೀಡಾಕೂಟದ ಬ್ರೌಚರ್(ಕರಪತ್ರ) ಬಿಡುಗಡೆಯ ಸರಳ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಬ್ರೌಚರ್ ಬಿಡುಗಡೆಗೊಳಿಸಿದ ಯುಎಇ ಬ್ಯಾರೀಸ್ ಕಲ್ಚರಲ್ ಫೋರಂನ ಪೋಷಕ ಸದಸ್ಯ ಮುಮ್ತಾಝ್ ಅಲಿ, ಯುಎಇಯಲ್ಲಿರುವ ಬ್ಯಾರಿ ಸಮುದಾಯದ ಹಿರಿಯ-ಕಿರಿಯರೆಲ್ಲರೂ ಭಾಗವಹಿಸುವ ಮೂಲಕ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

Front & Back

221222

1

4

5

6

7

8

9

10

11

12

3

ಬ್ಯಾರೀಸ್ ಕಲ್ಚರಲ್ ಫೋರಂನ ಅಧ್ಯಕ್ಷ ಡಾ.ಬಿ.ಕೆ.ಯೂಸುಫ್, ಪ್ರಧಾನ ಕಾರ್ಯದರ್ಶಿ ಡಾ.ಕಾಪು ಮೊಹಮ್ಮದ್, ಕ್ರೀಡಾಕೂಟದ ಸಂಚಾಲಕ ಹನೀಫ್ ಕಾಪು, ಬಿಸಿಎಫ್‌ನ ಉಪಾಧ್ಯಕ್ಷರಾದ ಲತೀಫ್ ಮೂಲ್ಕಿ, ರಝಾಕ್ ದೇವಾ, ಅಮೀರುದ್ದೀನ್ ಸೇರಿದಂತೆ ಮತ್ತಿತರ ಪದಾಧಿಕಾರಿಗಳು ಬ್ರೌಚರ್ ಬಿಡುಗಡೆಗೆ ಸಾಕ್ಷಿಯಾದರು.

ಜನವರಿ 30ರಂದು ಬೆಳಗ್ಗೆ 8 ಗಂಟೆಯಿಂದ ರಾತ್ರಿ 8ರ ವರೆಗೆ ನಡೆಯಲಿರುವ ಕ್ರೀಡಾಕೂಟದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳು ನಡೆಯಲಿವೆ. ಜೊತೆಗೆ ಸಣ್ಣಪುಟ್ಟ ಮಕ್ಕಳಿಗೂ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪುರುಷರಿಗೆ ಕ್ರಿಕೆಟ್, ವಾಲಿಬಾಲ್, ಫುಟ್‌ಬಾಲ್, ಕಬ್ಬಡಿ, ಶಟಲ್ ಸೇರಿದಂತೆ ಹಲವಾರು ಪಂದ್ಯಾಟಗಳನ್ನು ಆಯೋಜಿಸಲಾಗಿದೆ.

ಸಮಾರಂಭದ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭದಲ್ಲಿ ಕರ್ನಾಟಕದ ಕ್ರೀಡಾಸಚಿವರಾದ ಅಭಯಚಂದ್ರ ಜೈನ್, ಆರೋಗ್ಯ ಸಚಿವ ಯು.ಟಿ.ಖಾದರ್, ಜಿಎಂಸಿ ಮೆಡಿಕಲ್ ಕಾಲೇಜಿನ ಸಂಚಾಲಕ ತುಂಬೆ ಮೊಯಿದಿನ್, ಮಂಗಳೂರು ಉತ್ತರ ಶಾಸಕರಾದ ಮೊಯಿದಿನ್ ಬಾವಾ ಸೇರಿದಂತೆ ವಿವಿಧ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಡಾ.ಕಾಪು ಮೊಹಮ್ಮದ್ ತಿಳಿಸಿದ್ದಾರೆ.

ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿಚ್ಚಿಸುವ ಕ್ರೀಡಾಪಟುಗಳು ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಬಹುದು.
ಹನೀಫ್ ಕಾಪು(ಸಂಚಾಲಕರು): 0566822093
ಅಫೀಕ್(ಸಹಸಂಚಾಲಕ): 0556463435
ರಫೀಕ್ ಮೂಲ್ಕಿ(ಸಹಸಂಚಾಲಕ): 0505156284
ನವಾಸ್ ಕೋಟೆಕಾರ್(ಸಹಸಂಚಾಲಕ):0508417475

Write A Comment