ಗಲ್ಫ್

ಕುವೈಟ್- ಕೆ.ಸಿ.ಎಫ್ ಕುವೈಟ್ ನ ವತಿಯಿಂದ 2015ರ ಜನವರಿ 1 ರಂದು ನಡೆಯುವ “ಅಂತರಾಷ್ಟ್ರೀಯ ಮೀಲಾದ್ ಸಮಾವೇಶ” ದ ಪ್ರಚಾರ ಸಭೆ

Pinterest LinkedIn Tumblr

96560731363-1395512191

ಕುವೈಟ್:ಇದೇ ಬರುವ 2015 ರ ಜನವರಿ 1 ರಂದು ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆ.ಸಿ.ಎಫ್.ಕುವೈಟ್) ನ ವತಿಯಿಂದ ನಡೆಯುವ “ಅಂತರಾಷ್ಟ್ರೀಯ ಮೀಲಾದ್ ಸಮಾವೇಶ” ಇದರ ಪ್ರಚಾರ ಸಭೆಯು ಫಹಾಹೀಲ್ ನ ಸೂಕ್ ಸಭಾದ ಹತ್ತಿರ “ಕೋಹಿನೂರ್ ಆಡಿಟೋರಿಯಂ” ನಲ್ಲಿ ಶುಕ್ರವಾರ ದಿನಾಂಕ 28/1/2014 ರಂದು ಮಗ್ರಿಬ್ ನಮಾಝ್ ನಂತರ 6-00 ಘಂಟೆಗೆ ಸರಿಯಾಗಿ ನಡೆಯಲಿದೆ.

ಈ ಸಭೆಯ ಅಧ್ಯಕ್ಷತೆಯನ್ನು ಕೆ.ಸಿ.ಎಫ್. ಕುವೈಟ್ ನ ಅಧ್ಯಕ್ಷರಾದ ಜನಾಬ್ ಹಬೀಬ್ ಕೋಯ ರವರು ವಹಿಸಲಿರುವರು. ವಿಶೇಷ ಅಥಿತಿಗಳಾಗಿ ಕೆ.ಸಿ.ಎಫ್ ಕುವೈಟ್ ನ ಮುಖಂಡರಾದ ಮಾಹಿನ್ ಸಖಾಫಿ, ಉಮರ್ ಝುಹ್ರಿ, ಐ.ಸಿ.ಎಫ್. ಕುವೈಟ್, ನ ಮುಖಂಡರಾದ ಸೈಯ್ಯದ್ ಹಬೀಬ್ ಬುಖಾರಿ ತಂಞಳ್, ಸೈಯ್ಯದ್ ಬಾಫಾಕಿ ತಂಞಳ್, ಸೈಯ್ಯದ್ ಅಲವಿ ಸಖಾಫಿ ತಂಞಳ್, ಅಬ್ದುಲ್ ಹಕೀಮ್ ದಾರಿಮಿ, ಆರ್.ಎಸ್.ಸಿ. ಕುವೈಟ್, ಇದರ ಮುಖಂಡರಾದ ಜನಾಬ್ ಅಬ್ದುಲ್ಲಾ ವಡಗರ ಹಾಗೂ ಕೆ.ಕೆ.ಎಮ್.ಏ. ಕುವೈಟ್ ಇದರ ಮುಖಂಡರಾದ ಜನಾಬ್ ಬಿ.ಎಮ್.ಇಕ್ಬಾಲ್, ಜನಾಬ್ ಅಯ್ಯೂಬ್ ಸೂರಿಂಜೆ, ಜನಾಬ್ ಅಬ್ದುಲ್ ಹಮೀದ್ ಮೂಲ್ಕಿ ಹಾಗೂ ಇನ್ನಿತರ ಉಲಮಾ ಉಮರಾಗಳು ಭಾಗವಹಿಸಲಿರುವರು. ಈ ಕಾರ್ಯಕ್ರಮದಲ್ಲಿ ತಾವೂ ಹಾಗೂ ತಮ್ಮೆಲ್ಲ ಬಂಧು ಮಿತ್ರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆತಂದು ಯಶಸ್ವಿಗೊಳಿಸುವಿರೆಂದು ಕೆ.ಸಿ.ಎಫ್ ಕುವೈಟ್ ನ ವತಿಯಿಂದ ಎಲ್ಲಾ ಮುಸ್ಲಿಂ ಬಾಂಧವರಲ್ಲಿ ವಿನಂತಿಸುತ್ತೇವೆ.

“ಅಂತರಾಷ್ಟ್ರೀಯ ಮೀಲಾದ್ ಸಮಾವೇಶ” ದ ಪ್ರಯುಕ್ತ ಶನಿವಾರ ದಿನಾಂಕ 29/11/2014 ರಂದು ದ್ವೈಹಿ ಪ್ಯಾಲೇಸ್ ಫರ್ವಾನಿಯಾ ಇದರಲ್ಲಿ ಸಾಯಂಕಾಲ ಘಂಟೆ 7-00 ಕ್ಕೆ ಪತ್ರಿಕಾ ಗೋಷ್ಠಿ ನಡೆಯಲಿದೆ.

Write A Comment