ಕನ್ನಡ ವಾರ್ತೆಗಳು

ವಿಶೇಷ ಸಾಧನೆಗೈದ ಇಬ್ಬರು ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮ್ಮಾನ.

Pinterest LinkedIn Tumblr

Dc_office_Sanmana_1

ಮಂಗಳೂರು : 2015ನೆ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ 387ನೆ ರ್ಯಾಂಕ್ ಗಳಿಸಿರುವ ನಿಡ್ಡೋಡಿ-ನೀರುಡೆಯ ಮಿಶಾಲ್ ಕ್ವೀನಿ ಡಿಕೋಸ್ತ ಹಾಗೂ ಸರ್ಫಿಂಗ್‌ನಲ್ಲಿ ಸಾಧನೆಗೈದ ಪುತ್ತೂರಿನ ಅನೀಶಾ ನಾಯಕ್‌ ಅವರನ್ನು ಶುಕ್ರವಾರ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

Dc_office_Sanmana_2 Dc_office_Sanmana_3

ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಮಂಗಳೂರು ನಗರ ಪೊಲೀಸ್ ಅಯುಕ್ತ ಚಂದ್ರಶೇಖರ್ ಎಂ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಶ್ರೀವಿದ್ಯಾ ಮೊದಲಾದವರು ಈ ಇಬ್ಬರು ಸಾಧಕರಿಗೆ ಹೂಗುಚ್ಚ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು.

ಮಿಶಾಲ್ ಕ್ವೀನಿ ಡಿಕೋಸ್ತ ಹಾಗೂ ಪುತ್ತೂರಿನ ಅನೀಶಾ ನಾಯಕ್‌ ಅವರ ಫೋಷಕರು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Write A Comment