ಕನ್ನಡ ವಾರ್ತೆಗಳು

ಮೊಮ್ಮಕಳನ್ನು ಆಡಿಸುವ 70 ನೇ ವಯಸ್ಸಿನಲ್ಲಿ ಗಂಡು ಮಗು ಹೆತ್ತ ಅಜ್ಜಿ

Pinterest LinkedIn Tumblr

grndmaother_boybby

ನವದೆಹಲಿ,ಮೇ.11: ಅಬ್ಬಬ್ಬಾ ಎಂದರೆ ತಾಯಿಯಾಗುವ ವಯಸ್ಸು 40, ನಲವತ್ತು ದಾಟಿ 50 ರವರೆಗೂ ಮಗುವನ್ನು ಹೆರುವುದು ಬಲು ಅಪರೂಪ. ಆದರೆ ಇಲ್ಲೊಬ್ಬ ಅಜ್ಜಿ ತಮ್ಮ 70ನೇ ವಯಸ್ಸಿಗೆ ಗಂಡು ಮಗುವನ್ನು ಹಡೆದಿದ್ದಾರೆ. ವಿಚಿತ್ರವಾದರೂ ಸತ್ಯಘಟನೆ ಇದು.

ದೆಹಲಿಯ ದಲ್ಜಿಂದರ್ ಕೌರ್ ಕಳೆದ ಏಪ್ರಿಲ್ 19ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅಲ್ಲದೆ ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಈ ಇಳಿ ವಯಸ್ಸಿನಲ್ಲಿಯೂ ಮಗು ಹೊಂದಬೇಕೆಂಬ ಅಜ್ಜಿಯ ಬಯಕೆಗೆ ಆಸರೆಯಾದದ್ದು, ಪ್ರನಾಳಿಯ ಫಲೀಕರಣ ತಂತ್ರಜ್ಞಾನ(ಐವಿಎಫ್ ಪರೀಕ್ಷಾ ಟ್ಯೂಬ್).

ಈ ಮೊದಲು 2 ಬಾರಿ ವೈದ್ಯರು ಅಂಡಾಣು ಹಾಗೂ ಕೃತಕ ಗರ್ಭಧಾರಣೆಗಾಗಿ ಈ ತಂತ್ರಜ್ಞಾನ ಉಪಯೋಗಿಸಿದ್ದರು. ಆದರೆ ಇದು ಫಲಪ್ರದವಾಗಿರಲಿಲ್ಲ. ತದ ನಂತರ ಕಳೆದ ವರ್ಷ ಮೂರನೇ ಬಾರಿ ಪ್ರಯೋಗಿಸಿ ಅಜ್ಜಿಯ ಆಸೆಯನ್ನು ಈಡೇರಿಸಿದ್ದಾರೆ.

ಮದುವೆಯಾಗಿ 46 ವರ್ಷದ ನಂತರ ಹಾಗೂ ಋತುಸ್ರಾವ ನಿಂತ 20 ವರ್ಷದ ಬಳಿಕ ಮಗುವಿಗೆ ಜನ್ಮ ನೀಡಿದ ಶ್ರೇಯ ದಲ್ವಿಂದರ್ ಕೌರ್’ಗೆ ಸಲ್ಲುತ್ತದೆ.

Write A Comment