ಕನ್ನಡ ವಾರ್ತೆಗಳು

ದೆಹಲಿ ಪೊಲೀಸರ ಮೇಲೆ ನಿಗಾ ಇಡಲು ಸಿಸಿಟಿವಿ ಅಳವಡಿಸಿದ ದಂಧೆಕೋರರು

Pinterest LinkedIn Tumblr

cctv-camera_0_0

ದೆಹಲಿ,ಮೇ.09 : ಇದೊಂದು ವಿಚಿತ್ರ ಹಾಗೆ ಅಚ್ಚರಿ ಹುಟ್ಟಿಸೋ ಸ್ಟೋರಿ. ಸಾಮಾನ್ಯವಾಗಿ ಕಳ್ಳರ ಚಲನವಲನಗಳ ಮೇಲೆ ನಿಗಾ ಇಡೋಕೆ ಪೊಲೀಸರು ಸಿಸಿಟಿವಿಗಳನ್ನ ಬಳಸೋದನ್ನ ನಾವು ನೋಡಿದ್ದೀವಿ. ಆದ್ರೆ ದೆಹಲಿಯಲ್ಲಿ ಪೊಲೀಸರ ಚಲನವಲನಗಳ ಮೇಲೆ ಕಳ್ಳರೇ ನಿಗಾ ಇಟ್ಟಿದ್ದಾರೆ..ಅದು ಸಿಸಿಟಿವಿ ಮೂಲಕ.

ದಕ್ಷಿಣ ದೆಹಲಿಯಲ್ಲಿ ಜೂಜಾಟದ ಅಡ್ಡೆಗಳ ಮೇಲೆ ವಾರಕ್ಕೊಂದು ದಾಳಿಯಾದ್ರೂ ನಡೀತಾ ಇರುತ್ತೆ. ಪೊಲೀಸರ ದಾಳಿಗಳಿಂದ ಬೆಚ್ಚಿ ಬಿದ್ದಿರೋ ಗ್ಯಾಂಬ್ಲರ್ಸ್​ ದಕ್ಷಿಣ ದೆಹಲಿಯಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳೋಕೆ ಹೊಸ ಮಾರ್ಗವನ್ನ ಕಂಡುಕೊಂಡಿದ್ದಾರೆ.ತಾವು ಬೆಟ್ಟಿಂಗ್​ ದಂಧೆ ನಡೆಸೋ ಅಡ್ಡೆಗಳಲ್ಲಿ ಪೊಲೀಸರ ಚಲನವಲಗಳನ್ನ ಗಮನಿಸೋಕೆ ಅಂತ ಸಿಸಿಟಿವಿಗಳನ್ನ ಬಳಕೆ ಮಾಡ್ತಾರಂತೆ ಇತ್ತೀಚೆಗೆ ದಕ್ಷಿಣ ದೆಹಲಿಯ ವಸಂತ್​ ಗಾವ್ ಸೇರಿದಂತೆ ಹಲವು ಕಡೆ ಜೂಜಿನ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದಾಗಿ ಅಲ್ಲಿ ಸಿಸಿಟಿವಿಗಳು ಇರೋದನ್ನ ಕಂಡು ಪೊಲೀಸರೇ ದಂಗಾಗಿ ಹೋಗಿದ್ದಾರೆ.

ಬರೀ ಜೂಜು ಅಡ್ಡೆ ಮಾತ್ರ ಅಲ್ಲ. ಈ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ಮಾಡೋರು, ಡ್ರಗ್​ ಸಪ್ಲೈ ಮಾಡೋರು ತಮ್ಮ ಮನೆಗಳಲ್ಲಿ ಸಿಸಿಟಿವಿಗಳನ್ನ ಇಟ್ಕೊಂಡಿದ್ದಾರೆ.
ಇಲ್ಲಿ ಇನ್ನೊಂದು ಇಂಟರೆಸ್ಟಿಂಗ್​ ವಿಷ್ಯ ಇದೆ. ಈ ಖದೀಮರ ಮನೆಗೆ ಪೊಲೀಸರು ಅರೆಸ್ಟ್​ ಮಾಡೋಕೆ ಹೋದ್ರೆ ಅವರನ್ನ ಬಂಧಿಸೋದು ಅಷ್ಟು ಸುಲಭ ಅಲ್ಲ. ಯಾಕಂದ್ರೆ ದಂಧೆಕೋರರು ಸಿಸಿಟಿವಿ ಫೂಟೇಜ್​ನ ಅಸ್ತ್ರವಾಗಿ ಬಳಸಿಕೊಂಡು ಪೊಲೀಸರು ತಮ್ಮ ಬಳಿ ಹಣ ಕೇಳಿದ್ರು ಅಥವಾ ಮನೆಯ ಹೆಂಗಸರ ಜೊತೆಗೆ ಅಸಭ್ಯವಾಗಿ ವರ್ತಿಸಿದ್ರು ಅಂತ ಪೊಲೀಸರ ವಿರುದ್ಧವೇ ಆರೋಪ ಮಾಡ್ತಾರಂತೆ.. ಒಟ್ಟಾರೆ ದಕ್ಷಿಣ ದೆಹಲಿಯಲ್ಲಿ ಪೊಲೀಸರಿಂದ ಬಚಾವಾಗೋಕೆ ಕಳ್ಳರು ಬಳಸಿರೋ ಈ ಟ್ರಿಕ್ಸ್​ ಕಂಡು ಪೊಲೀಸರೇ ಶಾಕ್​​ ಆಗಿರೋದು ಸುಳ್ಳಲ್ಲ.

Write A Comment