ಕನ್ನಡ ವಾರ್ತೆಗಳು

ಸರಕಾರಿ ನೌಕರರಿಗೆ ಪಿಂಚಣಿ ವ್ಯವಸ್ಥೆ ಮುಂದುವರೆಸಲು ಮನವಿ

Pinterest LinkedIn Tumblr

Govt_pension_manavi

ಮ೦ಗಳೂರು, ಏ.02: ಕರ್ನಾಟಕ ಸರ್ಕಾರವು 2016ರ ಏಪ್ರಿಲ್ 1ರ ನಂತರ ಸರ್ಕಾರಿ ಸೇವೆಗೆ ನೇಮಕಗೊಂಡ ತನ್ನ ನೌಕರರಿಗೆ ಎನ್.ಪಿ.ಎಸ್. ಯೋಜನೆಯನ್ನು ರೂಪಿಸಿ ನೌಕರರ ಇಳಿವಯಸ್ಸಿನಲ್ಲಿ ಮತ್ತು ಅವರ ಕುಟುಂಬ ಅವಲಂಬಿತರಿಗೆ ಆರ್ಥಿಕ ಭದ್ರತೆಗೆ ತೊಡಕಾಗುವಂತೆ ಮಾಡಿರುತ್ತದೆ, ಮಾತ್ರವಲ್ಲದೆ 10% ರಷ್ಟನ್ನು ವಂತಿಕೆ ನೀಡಿ 30-35 ವರ್ಷಗಳ ನಂತರ ನಿವೃತ್ತಿಯಾದಾಗ ಪಿಂಚಣಿಯನ್ನು ಪಡೆಯಲು ಹರಸಾಹಸ ಪಡೆಯಬೇಕಾಗಿದೆ. ತಮ್ಮ ನೌಕರರು ಸೇವೆ ಸಲ್ಲಿಸಿರುವುದಕ್ಕೆ ಪಿಂಚಣಿಯನ್ನು ನೀಡುವುದು, ಮಾತ್ರವಲ್ಲದೆ ನೌಕರರ ಕಾರ್ಯಕ್ಷಮತೆ, ಜೀವನ ಮಟ್ಟ ಕುಸಿಯದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯವಾಗಿರುತ್ತದೆ.

ಈ ಶಾಸನವು ಜಾರಿಗೆ ಬಂದು ಇವತ್ತಿಗೆ 10 ವರ್ಷಗಳೇ ಆಗಿದ್ದು, ಈ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ರದ್ದುಗೊಳಿಸಿ, ನಿಶ್ಚಿತ ಪಿಂಚಣಿಯನ್ನು ನೀಡಲು ಪ್ರಧಾನಮಂತ್ರಿ, ಮುಖ್ಯಮಂತ್ರಿಯವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್. ನೌಕರರ ಸಂಘ(ರಿ.), ಮಂಗಳೂರು ತಾಲೂಕು ಘಟಕದ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಹಾಗೂ ಮಂಗಳೂರು ತಹಶೀಲ್ದಾರರಿಗೆ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಎನ್.ಪಿ.ಎಸ್. ತಾಲೂಕು ಅಧ್ಯಕ್ಷ ಸಂತೋಷ್, ಕಾರ್ಯದರ್ಶಿ ಮಾರ್ಕ್ ಮೆಂಡೋನ್ಸಾ, ಜಿಲ್ಲಾ ಉಪಾಧ್ಯಕ್ಷ ಸಿ.ಆರ್. ಪ್ರದೀಪ್ ಕುಮಾರ್, ಸುನಿಲ್ ಕುಮಾರ್, ಸಂಘದ ಪದಾಧಿಕಾರಿಗಳು, ವಿವಿಧ ಇಲಾಖೆಯ ಎನ್.ಪಿ.ಎಸ್.ಗೆ ಒಳಪಟ್ಟ ಸರಕಾರಿ ನೌಕರರು ಹಾಜರಿದ್ದರು.

Write A Comment