ಕನ್ನಡ ವಾರ್ತೆಗಳು

ಇನ್ಸ್‌‌ಪೆಕ್ಟರ್ ಶಾಂತಾರಾಮ್ ಕುಂದರ್ ಸಹಿತ ನಾಲ್ವರಿಗೆ ಮುಖ್ಯಮಂತ್ರಿ ಚಿನ್ನದ ಪದಕ

Pinterest LinkedIn Tumblr

shantharam_golden_awrd

ಮಂಗಳೂರು,ಮಾ.31: ಬಂದರು ಪೊಲೀಸ್ ಠಾಣಾ ಇನ್ಸ್‌‌ಪೆಕ್ಟರ್ ಶಾಂತಾರಾಮ್ ಕುಂದರ್ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರಿಗೆ ಈ ಬಾರಿಯ ಮುಖ್ಯಮಂತ್ರಿ ಚಿನ್ನದ ಪದಕ ಘೋಷಣೆಯಾಗಿದೆ.

ಇನ್ಸ್‌ಪೆಕ್ಟರ್ ಶಾಂತಾರಾಮ್ ಕುಂದರ್, ನಗರ ಮೀಸಲು ಸಶಸ್ತ್ರ ಪಡೆ (ಸಿಎಆರ್)ಯ ಇನ್ಸ್‌‌ಪೆಕ್ಟರ್ ಸಚಿನ್ ಲಾರೆನ್ಸ್, ಉಳ್ಳಾಲ ಠಾಣೆಯ ಭಾರತಿ ಮತ್ತು ಬಜ್ಪೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಮಹಮ್ಮದ್ ರವರಿಗೆ ಈ ಪ್ರಶಸ್ತಿ ಲಭಿಸಿದೆ.

ಮಂಗಳೂರು ನಗರ ಪೊಲೀಸ್ ಕಮಿಷನರ್ ಚಂದ್ರಶೇಖರ್ ರವರು ಈ ನಾಲ್ವರ ಹೆಸರನ್ನು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.

ಏಪ್ರಿಲ್. 2ರಂದು ಬೆಂಗಳೂರಿನಲ್ಲಿ ನಡೆಯುವ ಪೊಲೀಸ್ ಧ್ವಜ ದಿನಾಚರಣೆಯಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ನಾಲ್ವರಿಗೆ ಚಿನ್ನದ ಪದಕ ನೀಡಿ ಗೌರವಿಸಲಿದ್ದಾರೆ.

ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ಅರ್ಹತೆ, ಸೇವಾ ಬದ್ಧತೆಯನ್ನು ಗುರುತಿಸಿ ಈ ಪ್ರಶಸ್ತಿ ಪದಕ ನೀಡಲಾಗುತ್ತಿದೆ. 1963ರ ಎಪ್ರಿಲ್ 2 ರಂದು ಕರ್ನಾಟಕ ಪೊಲೀಸ್ ಆಕ್ಟ್ ಜಾರಿಗೆ ಬಂದಿದ್ದು, ಅಂದಿನಿಂದ ಪ್ರತಿವರ್ಷ ಎಪ್ರಿಲ್ 2ರಂದು ರಾಜ್ಯಾದ್ಯಂತ ಪೊಲೀಸ್ ದ್ವಜ ದಿನಾಚರಣೆಯನ್ನು ಆಚರಿಸಿ ಅರ್ಹರನ್ನು ಗುರುತಿಸಿ ಗೌರವಿಸಲಾಗುತ್ತಿದೆ.

ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಇನ್ಸ್‌ಪೆಕ್ಟರ್ ಶಾಂತಾರಾಮ್ ಬಂಟ್ವಾಳ ತಾಲೂಕಿನ ಕಾರಿಂಜದವರು, 2003 ರ ಬ್ಯಾಂಚ್ ನ ಅಧಿಕಾರಿ ಮಡಿಕೇರಿಯಲ್ಲಿ ಪ್ರೊಬೆಷನರಿ ಸಬ್ ಇನ್ಸ್‌ಪೆಕ್ಟರಾಗಿ ವ್ರ್‍ಇತ್ತಿ ಜೀವನ ಆರಂಭಿಸಿದ ಅವರು ಮೈಸೂರಿನ ದೇವರಾಜ್ ಠಾಣೆ, ಮಂಡ್ಯದ ಅಲಗೂರು, ಮಡಿಕೇರಿ ಗ್ರಾಮಾಂತರ, ಅಲ್ಲಿಯೇ ಗುಪ್ತಚರ ವಿಭಾಗ ಮತ್ತು ತುಮಕೂರಿನ ತಾವರೆಕೆರೆ ಪೊಳಿಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರಾಗಿ ಕರ್ತವ್ಯ ನಿರ್ವಹಿಸಿದವರು.

ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರಾಗಿ ಭಡ್ತಿಗೊಂಡ ಬಳಿಕ ಮಂಗಳೂರಿನ ಮೆಸ್ಕಾಂ ವಿಜೆಲೆನ್ಸ್ ನಲ್ಲಿ ಬಳಿಕ ಕುದುರೆಮುಖ, ಮೂಡಿಗೆರೆ ಪೊಲೀಸ್ ಠಾಣೆಗಳಲ್ಲಿ,ಅನಂತರ ನಕ್ಸಲ್ ನಿಗ್ರಹ ಪಡೆಯಲ್ಲಿಯೂ ಅವರು ಕರ್ತವ್ಯದಲ್ಲಿದ್ದು ಒಂದು ವರ್ಷದ ಹಿಂದೆ ಬಂದರು ಠಾಣೆಗೆ ವರ್ಗಾವಣೆಗೊಂಡವರು.
ಬಂದರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಂಟ್ರಲ್ ಮಾರ್ಕೆಟ್ ನಲ್ಲಿ ನಡೆದ ಕೊಲೆ ಮತ್ತು ಇತ್ತೀಚೆಗೆ ಭಾರಿ ಸುದ್ದಿ ಮಾಡಿದ ಆರ್‌ಟಿಐ ಕಾರ್ಯಕರ್ತ ವಿನಾಯಕ್ ಬಾಳಿಗಾ ಕೊಲೆ ಪ್ರಕರಣದ ಹಿನ್ನೆಲೆಯನ್ನು ಯಶಸ್ವಿಯಾಗಿ ಭೇದಿಸಿದವರು ಶಾಂತರಾಮ್. ಕೆಲ ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಮಂಗಳೂರಿನ ಖಾಸಗಿ ಕಾಲೇಜೊಂದರ ಇಬ್ಬರು ವಿಧ್ಯಾರ್ಥಿನಿಯರ ಪತ್ತೆ ಕಾರ್ಯಚರಣೆಯಲ್ಲೂ ಇವರು ಪಾಲ್ಗೊಂಡು ಉನ್ನತಾಧಿಕಾರಿಗಳ ಮೆಚ್ಚುಗೆ ಗಳಿಸಿದ್ದರು. ಕುದುರೆಮುಖ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಹದಿನೈದು ಕ್ಲಿಷ್ಟಕರ ಕ್ರಿಮಿನಲ್ ಪ್ರಕರಣಗಳ ತನಿಖೆಯನ್ನು ಪೂರ್ಣಗೊಳಿಸಿದ ಹೆಸರು ಇವರಿಗಿದೆ.

ಶಾಂತಾರಾಮ್ ಅವರದು ಕೃಷಿ ಆಧಾರಿತ ಕೂಡು ಕುಟುಂಬ. ಕಾರಿಂಜ ಪರಿಸರದಲ್ಲಿ ಈ ಕುಟುಂಬಕ್ಕೆ ದೊಡ್ಡ ಹೆಸರಿದೆ. ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ.ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ Handsome ಅಧಿಕಾರಿಗಳ ಪೈಕಿ ಶಾಂತಾರಾಮ್ ಅವರದ್ದು ಮೊದಲ ಹೆಸರು.

ಪದಕ ವಿಜೇತ ಇನ್ನೋರ್ವ ಅಧಿಕಾರಿ ಸಚಿನ್ ಲಾರೆನ್ಸ್ ನಗರ ಮೀಸಲು ಸಶಸ್ತ್ರ ಪಡೆಯ ಪೊಲೀಸ್ ಇನ್ಸ್‌ಪೆಕ್ಟರ್ ಈ ಹಿಂದೆ ಮಂಗಳೂರಿನಲ್ಲಿ ಇನ್ಸ್‌ಪೆಕ್ಟರ್ ಜಯಂತ್ ಶೆಟ್ಟಿ ನೇತೃತ್ವದ ರೌಡಿ ನಿಗ್ರಹ ದಳದಲ್ಲಿದ್ದ ಚೆರಿಯನ್ ರವರ ಪುತ್ರ. ಗುಲ್ಬರ್ಗದಲ್ಲಿ ಪ್ರೊಬೆಷನರಿ ಅವಧಿಯನ್ನು ಪೊರೈಸಿದ್ದ ಸಚಿನ್ ಲಾರೆನ್ಸ್ ಕಾರವಾರ ಚಿಕ್ಕಮಂಗಳೂರಿನಲ್ಲೂ ಕರ್ತವ್ಯ ನಿರ್ವಹಿಸಿದ್ದಾರೆ. 8 ತಿಂಗಳ ಹಿಂದಷ್ಟೇ ಮಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ.

ಉಳ್ಳಾಲ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಭಾರತೀಯವರಿಗೂ ಈ ಬಾರಿಯ ಮುಖ್ಯಮಂತ್ರಿ ಚಿನ್ನದ ಪದಕ ಲಭಿಸಿದೆ. ಈ ಹಿಂದೆ ಮೂಡಬಿದ್ರೆ, ಪಣಂಬೂರು, ಪಾಂಡೇಶ್ವರ, ಮಂಗಳೂರು ಗ್ರಾಮಾಂತರ ಮತ್ತಿತರೆಡೆಗಳಲ್ಲಿ ಭಾರತಿ ಕಾರ್ಯನಿರ್ವಹಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಇವರಿಗೆ ಒಳ್ಳೆಯ ಹೆಸರಿದೆ . ಈ ಕಾರಣಕ್ಕಾಗಿಯೇ ಹಲವರ ವಿರೋಧ ಕಟ್ಟಿಕೊಂಡಿದ್ದಾರೆ. ಕೆಲವು ವಿವಾದಗಳಿಗೂ ತುತ್ತಾಗಿದ್ದಾರೆ. ಒತ್ತಡ ಮತ್ತು ಪ್ರಭಾವಗಳಿಗೆ ಒಳಗಾಗದ ಪ್ರಾಮಾಣಿಕ ಅಧಿಕಾರಿ ಎಂಬ ಹೆಸರೂ ಇವರಿಗಿದೆ. ಭಾರತೀಯವರ ಪತಿ ಕೆ‍ಎಸ್‌ಆರ್‌ಟಿಸಿ ಸಂಸ್ಥೆಯ ಉದ್ಯೋಗಿ ಯಾಗಿದ್ದಾರೆ. ಪುಟ್ಟ ಹೆಣ್ಣು ಮಗು ಇವರಿಗಿದೆ.

ಬಜ್ಪೆ ಹೆಡ್ ಕಾನ್ಸ್‌ಟೇಬಲ್ ಮಹಮ್ಮದ್ ರವರೂ ಪದಕ ವಿಜೇತರಾಗಿದ್ದಾರೆ. 1992 ರಲ್ಲಿ ಪೊಲೀಸ್ ಇಲಾಖೆ ಸೇರಿದ ಇವರು, ಕೊಲ್ಲೂರು, ಕುಂದಾಪುರ, ಮಂಗಳೂರು ಗ್ರಾಮಾಂತರ, ಕಾವೂರು, ಟ್ರಾಫಿಕ್ ಈಸ್ಟ್,ಉಳ್ಳಾಲ ಠಾಣೆಗಳಲ್ಲಿ ಮತ್ತು ಇನ್ಸ್‌ಪೆಕ್ಟರ್ ವಿನಯ್ ಗಾಂವ್ಕರ್ ನೇತೃತ್ವದ ರೌಡಿ ನಿಗ್ರಹ ದಳದಲ್ಲಿ ಕಾರ್ಯನಿರ್ವಹಿಸಿದವರು. ಉಳ್ಳಾಲ , ಮಂಗಳೂರು ಗ್ರಾಮಾಂತರ , ಕದ್ರಿ ಮತ್ತು ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸುಮಾರು 20ಕ್ಕೂ ಹೆಚ್ಚು ಪತ್ತೆಯಾಗದ ಪ್ರಕರಣ (long pending case) ಗಳನ್ನು ಗುರುತಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ ಹೆಸರು ಇವರಿಗಿದೆ. ಹಲವು ಪೊಲೀಸ್ ವರಿಷ್ಠಾಧಿಕಾರಿಗಳ ಪ್ರಶಂಸೆಯೂ ಇವರಿಗೆ ದೊರಕಿದೆ. ಕಳೆದೊಂದು ವರ್ಷದಿಂದ ಬಜ್ಪೆ ಠಾಣೆಯಲ್ಲಿದ್ದಾರೆ.

Write A Comment