ಕನ್ನಡ ವಾರ್ತೆಗಳು

ಕುಂದಾಪುರ ರೊಜರಿ ಅಮ್ಮನವರ ಇಗರ್ಜಿಯಲ್ಲಿ ಶಿಲುಬೆ ಯಾತ್ರೆ

Pinterest LinkedIn Tumblr

ಕುಂದಾಪುರ: ಕುಂದಾಪುರ ರೊಜರಿ ಅಮ್ಮನವರ ಇಗರ್ಜಿಯಲ್ಲಿ ಪವಿತ್ರ ಶುಕ್ರವಾರವನ್ನು ಭಕ್ತಿ ಪೂರ್ವಕವಾದ ಪ್ರಾರ್ಥನಾ ವಿಧಿಗಳಿಂದ ಆಚರಿಸಲಾಯಿತು.

ಈ ಇಗರ್ಜಿಯ ಚರಿತ್ರೆಯ ಸುಮಾರು 50 ವರ್ಷಗಳ ಬಳಿಕ ಯೇಸುವಿನ ಕಷ್ಟ, ಮರಣದ ಕಷ್ಟ ಮರಣದ ಯಾತನೆ ಪೀಡನೆಯನ್ನು, ಯೇಸು, ಪೀಡನೆ ಕೊಡುವ ಕ್ರೂರಿ ಸೈನಿಕರು, ಯೇಸುವಿನ ತಾಯಿ ಮೇರಿ, ಯೇಸುವಿನ ಬಗ್ಗೆ ಕನಿಕರ ತೋರುವ ಅವರ ಹಿಂಬಾಲಕ ಪಾತ್ರಧಾರಿಗಳು ಅಭಿನಯಿಸುವುದರ ಜೊತೆ ಗಾಯನ ಪ್ರಾರ್ಥನೆಗಳೊಂದಿಗೆ ಒಂದು ಗಂಟೆಯ ಶಿಲುಭೆ ಯಾತ್ರೆಯನ್ನು ನಡೆಸಿದ್ದು ವಿಶೇಷವಾಗಿತ್ತು. ಯೇಸುವಿನ ಪಾತ್ರದಲ್ಲಿ ನವೀನ್ ಮೊಂತೆರೊ ಬಹಳ ನೈಜ್ಯವಾಗಿ ಅಭಿನಯಿಸಿದರು.

â

â

â

ಬಳಿಕ ಇಗರ್ಜಿಯಯಲ್ಲಿ ಶಿಲುಬೆಗೇರಿಸುವ ಪ್ರಾರ್ಥನ ವಿಧಿಗಳನ್ನು ನಡೆಸಲಾಯಿತು. ಇದರ ನೇತ್ರತ್ವನ್ನು ಪ್ರಧಾನ ಧರ್ಮಗುರು ವ|ಅನೀಲ್ ಡಿಸೋಜಾ ವಹಿಸಿದ್ದರು, ಸಹಾಯಕ ಧರ್ಮಗುರು ವ| ಪಾವ್ಲ್ ಪ್ರಕಾಶ್ ಡಿಸೋಜಾ ‘ಯೇಸು ಸ್ವಾಮಿ ನಮ್ಮ ಪಾಪ ವಿಮೋಚನೆಗಾಗಿ ತಮ್ಮನ್ನೆ ಬಲಿದಾನ ಮಾಡಿದರು. ತಮ್ಮ ಬಲಿದಾದದಿಂದ ಅವಮಾನದ ಸಂಕೇತವಾದ ಶಿಲುಬೆಗೆ ಪಾವಿತ್ರ್ಯತೆಯನ್ನು ದೊರಕಿಸಿ ಅವರು ಜಗತ್ತಿಗೆ ಒಳ್ಳೆದನ್ನೆ ಮಾಡುತ್ತಾ ಹೋದರು, ಅವರ ಬಲಿದಾನವನ್ನು ನಾವು ಸಾರ್ಥಕವನ್ನಾಗಿಸಬೇಕು’ ಎಂದು ಸಂದೇಶ ನೀಡಿದರು.

ಈ ಪವಿತ್ರ ಪ್ರಾರ್ಥನಾ ವಿಧಿಗೆ ಧರ್ಮಗುರು ವ|ಪ್ರವೀಣ್ ಅಮ್ರತ್ ಮಾರ್ಟಿಸ್ ಸಹಕರಿಸಿದರು. ಈ ಪ್ರಾರ್ಥನ ವಿಧಿಯಲ್ಲಿ ಅನೇಕ ಧರ್ಮ ಭಗಿನಿಯರು, ಚರ್ಚ್ ಮಂಡಳಿಯ ಸದಸ್ಯರು ಮತ್ತು ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದರು

Write A Comment