ಕನ್ನಡ ವಾರ್ತೆಗಳು

ಪ್ರತಿಷ್ಠಿತ ಇನ್‌ಲ್ಯಾಂಡ್ ಬಿಲ್ಡರ್ಸ್‌‌ನವರ ನೂತನ ವಸತಿ ಸಮುಚ್ಚಯ ‘ಇನ್‌ಲ್ಯಾಂಡ್ ಎವಿನ್ಸ್’ ಉದ್ಘಾಟನೆ

Pinterest LinkedIn Tumblr

InLand_Evince_open_1a

ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್

ಮಂಗಳೂರು, ಮಾ.26: ನಗರದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿರುವ ಇನ್‌ಲ್ಯಾಂಡ್ ಬಿಲ್ಡರ್ಸ್‌ನವರು ಕದ್ರಿ ದೇವಸ್ಥಾನದ ಸಮೀಪ ನಿರ್ಮಿಸಿರುವ ಅತ್ಯಾಕರ್ಷಕ ನೂತನ ವಸತಿ ಸಮುಚ್ಚಯ ‘ಇನ್‌ಲ್ಯಾಂಡ್ ಎವಿನ್ಸ್’ ಶನಿವಾರ ಲೋಕಾರ್ಪಣೆಗೊಂಡಿತ್ತು.

ಸ್ಥಳೀಯ ಮನಪಾ ಸದಸ್ಯ ಡಿ.ಕೆ.ಆಶೋಕ್ ಅವರು ನೂತನ ವಸತಿ ಸಮುಚ್ಚಯವನ್ನು ಉದ್ಘಾಟಿಸಿ ಶುಭಾ ಕೋರಿದರು. ಉದ್ಯಮಿಗಳಾದ ಕೆ.ಸಿ.ನಾಯಕ್, ಪಿ.ಎಮ್.ರಜಾಕ್, ರತ್ನಾಕರ್ ಜೈನ್. ಬಿಜೆಪಿ ಮುಖಂಡ ಕೆ.ಪಿ.ಜಗದೀಶ್ ಅಧಿಕಾರಿ ಮುಂತಾದವರು ಉಪಸ್ಥಿತರಿದ್ದರು.

InLand_Evince_open_1

ಇದಕ್ಕೂ ಮೊದಲು ಬೆಳಿಗ್ಗೆ ಶರವು ಮಹಾಗಣಪತಿ ದೇವಸ್ಥಾನದ ಬಳಿಯಿರುವ ಶ್ರೀರಾಧಕೃಷ್ಣ ಮಂದಿರದ ಅರ್ಚಕ ವೇ|ಮೂ| ಗಿರಿಧರ್ ಭಟ್ ಅವರು ಪೂಜೆ ನೆರವೇರಿಸಿದರು. ಮಂಗಳೂರು ಅಲ್ ಹಝಾರಿಯಾ ಮದ್ರಾಸದ ಧರ್ಮಗುರು ಯೆಹ್ಯಾ ಮದನಿ ದು:ವಾ (ಪ್ರಾರ್ಥನೆ) ನೆರವೇರಿಸಿದರು. ಬೆಂದೂರು ಚರ್ಚ್‌ನ ಧರ್ಮಗುರು ರೆ|ಫಾ| ಅಂಟೋನಿ ಸೆರವೋ ಅಶೀರ್ವದಿಸಿದರು.

ಇನ್‌ಲ್ಯಾಂಡ್ ಇನ್‌ಫ್ರಾಸ್ಟ್ರಕ್ಚರ್‍ಸ್ ಡೆವಲಪರ್‍ಸ್ (ಪ್ರೈ) ಲಿಮಿಟೆಡ್‌ನ ಅಧ್ಯಕ್ಷ ಹಾಗೂ ಆಡಳಿತಾ ನಿರ್ದೇಶಕ ಸಿರಾಜ್ ಅಹ್ಮದ್ ಹಾಗೂ ನಿರ್ದೇಶಕ ಮೀರಾಜ್ ಯೂಸೂಫ್ ಅತಿಥಿಗಳನ್ನು ಬರಮಾಡಿಕೊಂಡರು.

InLand_Evince_open_2a InLand_Evince_open_3a InLand_Evince_open_4a

INLAND--EVINCE

ಆಕರ್ಷಕ, ವಿಶಿಷ್ಟ ವಿನ್ಯಾಸ:

ಕಟ್ಟಡ ನಿರ್ಮಾಣದಲ್ಲಿ ಮೂರು ದಶಕಗಳಿಂದ ಹೆಸರುವಾಸಿಯಾಗಿರುವ ಇನ್‌ಲ್ಯಾಂಡ್ ಸಂಸ್ಥೆ ನಗರದ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಳಕ್ಕೆ ಹೋಗುವ ಮುಖ್ಯರಸ್ತೆಯ ಪ್ರಶಾಂತ ವಾತಾವರಣದಲ್ಲಿ ‘ಇನ್‌ಲ್ಯಾಂಡ್ ಎವಿನ್ಸ್’ ನಿರ್ಮಾಣಮಾಡಿದೆ. ಪ್ರಾರ್ಥನಾ ಮಂದಿರಗಳು, ಸೂಪರ್ ಬಝಾರ್, ಮಾರುಕಟ್ಟೆ, ಪ್ರಮುಖ ಆಸ್ಪತ್ರೆಗಳು, ಆಟೋರಿಕ್ಷಾ, ಬಸ್ ನಿಲ್ದಾಣಗಳು, ಶಾಲಾ-ಕಾಲೇಜುಗಳ ಸಮೀಪದಲ್ಲೇ ಇನ್‌ಲ್ಯಾಂಡ್ ಎವಿನ್ಸ್ ನಿರ್ಮಾಣಗೊಂಡಿದ್ದು, ಕದ್ರಿ ಉದ್ಯಾನವನ, ಕದ್ರಿ ಮೈದಾನ ಕಾಲ್ನಡಿಗೆ ದೂರದಲ್ಲಿವೆ.

ಪ್ರಶಾಂತ ಪರಿಸರದಲ್ಲಿ ಆಕರ್ಷಕ, ವಿಶಿಷ್ಟ ವಿನ್ಯಾಸದಲ್ಲಿ ನಿರ್ಮಾಣಗೊಂಡಿರುವ ‘ಇನ್‌ಲ್ಯಾಂಡ್ ಎವಿನ್ಸ್’ ಧಾರ್ಮಿಕ ವಿಧಿವಿಧಾನಗಳೊಂದಿಗೆ ಉದ್ಘಾಟನೆ ಗೊಳ್ಳಲಿದೆ. ನಾಲ್ಕು ಮಹಡಿಗಳ ಈ ವಸತಿ ಸಮುಚ್ಚಯ 28 ವಿಶಾಲವಾದ ಫ್ಲಾಟ್‌ಗಳನ್ನು ಒಳಗೊಂಡಿದ್ದು, 3 ಬಿಎಚ್‌ಕೆ, 2 ಬಿಎಚ್‌ಕೆ, 1 ಬಿಎಚ್‌ಕೆ ಫ್ಲಾಟ್‌ಗಳನ್ನು ಹೊಂದಿವೆ. ಸಕಲ ಸೌಕರ್ಯಗಳನ್ನು ಒಳಗೊಂಡಿರುವ ಈ ವಸತಿ ಸಮುಚ್ಚಯವನ್ನು ಗುಣಮಟ್ಟಕ್ಕೆ ಆದ್ಯತೆ ನೀಡುವ ಇನ್‌ಲ್ಯಾಂಡ್ ಸಂಸ್ಥೆ ಕ್ಲಪ್ತ ಸಮಯದಲ್ಲಿ ಪೂರ್ತಿಗೊಳಿಸಿದೆ.

InLand_Evince_open_2 InLand_Evince_open_3 InLand_Evince_open_4 InLand_Evince_open_5 InLand_Evince_open_6 InLand_Evince_open_7 InLand_Evince_open_8 InLand_Evince_open_9 InLand_Evince_open_10 InLand_Evince_open_11 InLand_Evince_open_12 InLand_Evince_open_13 InLand_Evince_open_14 InLand_Evince_open_15 InLand_Evince_open_16 InLand_Evince_open_17 InLand_Evince_open_18 InLand_Evince_open_19 InLand_Evince_open_20 InLand_Evince_open_21 InLand_Evince_open_22 InLand_Evince_open_23 InLand_Evince_open_24 InLand_Evince_open_25 InLand_Evince_open_26 InLand_Evince_open_27 InLand_Evince_open_28 InLand_Evince_open_29 InLand_Evince_open_30 InLand_Evince_open_31 InLand_Evince_open_32 InLand_Evince_open_33 InLand_Evince_open_34 InLand_Evince_open_35 InLand_Evince_open_36 InLand_Evince_open_37 InLand_Evince_open_38 InLand_Evince_open_39 InLand_Evince_open_40 InLand_Evince_open_41 InLand_Evince_open_42 InLand_Evince_open_43 InLand_Evince_open_44 InLand_Evince_open_45 InLand_Evince_open_46 InLand_Evince_open_47 InLand_Evince_open_48 InLand_Evince_open_50 InLand_Evince_open_51 InLand_Evince_open_52 InLand_Evince_open_53 InLand_Evince_open_54

InLand_Evince_open_5a InLand_Evince_open_6a

1986ರಲ್ಲಿ ಸಿರಾಜ್ ಅಹ್ಮದ್ ಆರಂಭಿಸಿರುವ ಇನ್‌ಲ್ಯಾಂಡ್ ರಿಯಲ್ ಎಸ್ಟೇಟ್ಸ್ ಇದೀಗ ಬೃಹತ್ತಾಗಿ ಬೆಳೆದು ಇನ್‌ಲ್ಯಾಂಡ್ ಗ್ರೂಪ್ ಎಂದು ಖ್ಯಾತವಾಗಿದೆ. ಪ್ರಸ್ತುತ ಐಎಸ್‌ಒ 9001: 2008 ಪ್ರಮಾಣೀತವಾಗಿರುವ ಈ ಸಂಸ್ಥೆ ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್‌ರ ದಕ್ಷ ಆಡಳಿತದಲ್ಲಿ 40ಕ್ಕಿಂತಲೂ ಅಧಿಕ ವಸತಿ, ವಾಣಿಜ್ಯ ಸಮುಚ್ಚಯಗಳನ್ನು ನಿರ್ಮಿಸಿದೆ. ಇದರಡಿಯಲ್ಲಿ ‘ಇನ್‌ಲ್ಯಾಂಡ್ ರಿಯಲ್ ಎಸ್ಟೇಟ್ಸ್’, ‘ಇನ್‌ಲ್ಯಾಂಡ್ ಬಿಲ್ಡರ್ಸ್‌’, ‘ಇನ್‌ಲ್ಯಾಂಡ್ ಇನ್ಫ್ರಾಸ್ಟ್ರಕ್ಚರ್ ಡೆವಲಪರ್ಸ್‌ ಪ್ರೈ.ಲಿ.’, ‘ಇನ್‌ಲ್ಯಾಂಡ್ ಸರ್ವೀಸ್ ಅಪಾರ್ಟ್‌ಮೆಂಟ್’, ‘ಇನ್‌ಲ್ಯಾಂಡ್ ಇಂಟೀರಿಯರ್ ಡಿಸೈನರ್ಸ್‌’, ‘ಇನ್‌ಲ್ಯಾಂಡ್ ಎಂಜಿನಿ ಯರಿಂಗ್’, ‘ಇನ್‌ಲ್ಯಾಂಡ್ ಜನರಲ್ ಟ್ರೇಡಿಂಗ್ ಕಂಪೆನಿ’ (ದುಬೈ) ಕಾರ್ಯನಿರ್ವಹಿಸುತ್ತಿವೆ.

ಮಂಗಳೂರಿನ ವೆಲೆನ್ಸಿಯಾದಲ್ಲಿ ‘ಇನ್‌ಲ್ಯಾಂಡ್ ಎಸ್ಟೋರಿಯಾ’, ಮೇರಿಹಿಲ್‌ನಲ್ಲಿ ‘ಇನ್‌ಲ್ಯಾಂಡ್ ವಿಂಡ್ಸರ್’, ‘ವಿಲ್ಲಾಸ್’, ಉಳ್ಳಾಲದಲ್ಲಿ ‘ಇನ್‌ಲ್ಯಾಂಡ್ ಇಂಪಾಲ’, ಕೂಳೂರು-ಕಾವೂರು ರಸ್ತೆಯಲ್ಲಿ ‘ಇನ್‌ಲ್ಯಾಂಡ್ ಸನ್‌ಲೈಟ್ ಮೂನ್‌ಲೈಟ್’, ಫಳ್ನೀರ್‌ನಲ್ಲಿ ‘ಇನ್‌ಲ್ಯಾಂಡ್ ಎಡಿಲಾನ್’ ಮತ್ತು ಪುತ್ತೂರಿನಲ್ಲಿ ‘ಇನ್‌ಲ್ಯಾಂಡ್ ಮಯೂರ’ದ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ಸಾಗುತ್ತಿದೆ ಎಂದು ಇನ್‌ಲ್ಯಾಂಡ್ ಬಿಲ್ಡರ್ಸ್‌‌ನ ಆಡಳಿತಾ ನಿರ್ದೇಶಕರಾದ ಸಿರಾಜ್ ಅಹ್ಮದ್ ಅವರು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.

‘ಇನ್‌ಲ್ಯಾಂಡ್ ಎವಿನ್ಸ್’ನ ವಿಶೇಷತೆಗಳು :
ನಾಲ್ಕು ಮಹಡಿಗಳು, 28 ಫ್ಲಾಟ್‌ಗಳು / ಜಿಮ್ನೇಶಿಯಂ / ಇಂಟರ್‌ಕಾಮ್ ಸೌಲಭ್ಯ / ಅಗ್ನಿನಿರೋಧ ವ್ಯವಸ್ಥೆ / ರೆಟಿಕ್ಯುಲೇಟೆಡ್ ಗ್ಯಾಸ್ ಸೌಕರ್ಯ / ಶಬ್ದರಹಿತ ಜನರೇಟರ್‌ವ್ಯವಸ್ಥೆ ಮಾಡಲಾಗಿದೆ.

ಇನ್ನಷ್ಟು ಚಿತ್ರ ನಿರೀಕ್ಷಿಸಿ….

Write A Comment