ಕನ್ನಡ ವಾರ್ತೆಗಳು

ಫೆ.18: ಕಲ್ಕೂರ ಪ್ರತಿಷ್ಠಾನದಿಂದ ಕೆ.ಎಸ್.ನ ಕಾವ್ಯಾನುಸಂಧಾನ

Pinterest LinkedIn Tumblr

KS_Narasimha_swami_kallukur

ಮಂಗಳೂರು,ಫೆ.12:  ಒಲವು- ಚೆಲುವು-ನಲಿವಿನ ಸರಳ-ವಿರಳ ಭಾವಗೀತೆಗಳನ್ನು ನೀಡಿದ ಜನಪ್ರೀತಿಯ ಕವಿ, ಮೈಸೂರು ಮಲ್ಲಿಗೆ ಖ್ಯಾತಿಯ ಡಾ. ಕೆ. ಎಸ್. ನರಸಿಂಹಮೂರ್ತಿ ಅವರ ‘ಕಾವ್ಯಾನುಸಂಧಾನ’ ಕಾರ್ಯಕ್ರಮವು ಫೆಬ್ರವರಿ 18, ಗುರುವಾರ ಮಧ್ಯಾಹ್ನ ಐಕಳ ಪೊಂಪೈ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ಭಾಷಾ ಸಂಘ ಪೊಂಪೈ ಕಾಲೇಜು ಐಕಳ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸಮಾರಂಭವನ್ನು ಉದ್ಘಾಟಿಸುವರು. ಪೊಂಪೈ ಕಾಲೇಜಿನ ಪ್ರಾಂಶುಪಾಲರಾದ ಡಾ. ಜೋನ್‌ಕ್ಲಾರೆನ್ಸ್ ಮಿರಾಂದ ಅಧ್ಯಕ್ಷತೆ ವಹಿಸಲಿದ್ದು, ಕಟೀಲು ಶ್ರೀ ದುರ್ಗಾಪರಮೇಶ್ವರಿ ಪದವಿ ಕಾಲೇಜಿನ ಪ್ರಾಂಶುಪಾಲ ಶ್ರೀ ಬಾಲಕೃಷ್ಣ ಶೆಟ್ಟಿ ಉಪನ್ಯಾಸ ನೀಡಲಿರುವರು.

ಮುಖ್ಯ ಅತಿಥಿಗಳಾಗಿ ಭಾಷಾ ಸಂಘದ ನಿರ್ದೇಶಕ ಡಾ. ಪ್ರೀಡಾ ಡಿ’ಸೋಜಾ ಹಾಗೂ ಕಲ್ಕೂರ ಪ್ರತಿಷ್ಠಾನದ ನಿರ್ದೇಶಕರಲ್ಲೋರ್ವರಾದ ಶ್ರೀಮತಿ ವಿಜಯಲಕ್ಷ್ಮೀ ಬಿ. ಶೆಟ್ಟಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Write A Comment