___ಸತೀಶ್ ಕಾಪಿಕಾಡ್
ಮಂಗಳೂರು : ಇಂಟರ್‌ನ್ಯಾಷನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್ (ರಿ.) ಇದರ ಅಶ್ರಯದಲ್ಲಿ ಮಂಗಳೂರಿನ ಪುರಭವನದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾದ “ರಾಷ್ಟ್ರೀಯ ಬಂಟ ಮಹಾಸಮ್ಮೇಳನ – 2016” ರ ಅಂಗವಾಗಿ ಶನಿವಾರ ಅಪರಾಹ್ನ ಆಕರ್ಷಕ ಮೆರವಣಿಗೆ ನಡೆಯಿತು.
ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲಜು ಆವರಣದಿಂದ ಆರಂಭಗೊಂಡ ಮೆರವಣಿಗೆ ಎ.ಬಿ.ಶೆಟ್ಟಿ ವೃತ್ತದ ಮೂಲಕ ಪುರಭವನಕ್ಕೆ ತಲುಪಿತು. ಸಮ್ಮೇಳನಾಧ್ಯಕ್ಷ ತುಳು ಕನ್ನಡ ಸಾಹಿತಿ ಡಾ| ಡಿ. ಕೆ. ಚೌಟ ಅವರನ್ನು ಬೆಳ್ಳಿ ರಥದ ಸಾರೋಟ್‌ನಲ್ಲಿ ಅದ್ಧೂರಿ ಮೆರವಣಿಗೆಯ ಮೂಲಕ ಪುರಭವನಕ್ಕೆ ಕರೆತರಲಾಯಿತು.ಇಂಟರ್‌ನ್ಯಾಷನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್‌ನ ಸ್ಥಾಪಕ ಹಾಗೂ ಅಧ್ಯಕ್ಷ ಶ್ರೀ ಎ. ಸದಾನಂದ ಶೆಟ್ಟಿ ಜತೆಗಿದ್ದರು.
ಕಲ್ಲಡ್ಕ ಶಿಲ್ಪಕಲಾ ಬೊಂಬೆ ಬಳಗ, ಚೆಂಡೆ ಬಳಗ ಮೆರವಣಿಗೆಗೆ ವಿಶೇಷ ಮೆರಗು ನೀಡಿತ್ತು. ಮಹಿಳೆಯರು ಕಲಶ ಹಿಡಿದು ಹಾಗೂ ಪುರುಷರು ಸಾಂಪ್ರಾದಾಯಿಕ ಪೇಟದೊಂದಿಗೆ ಸಮ್ಮೇಳನದ ಗಣ್ಯರನ್ನು ಪುರಭವನಕ್ಕೆ ಕರೆತಂದರು.
ಟ್ರಸ್ಟ್‌ನ ಪದಾಧಿಕಾರಿಗಳು ಹಾಗೂ ಜಿಲ್ಲೆಯೆ ವಿವಿದೆಡೆಯಿಂದ ಆಗಮಿಸಿದ ಬಂಟ ಭಾಂದವರು ಸಾಂಪ್ರದಾಯಿಕ ಉಡುಗೆಯೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.