ಚಿಕ್ಕಮಗಳೂರು, ಫೆ.06: ಸಂಗಮೇಶ್ವರ ಪೇಟೆ ಸಮೀಪದ ಗುಡ್ಡೆಕೊಪ್ಪ ಅರಣ್ಯ ಪ್ರದೇಶದಲ್ಲಿ ಶಿಕಾರಿಗೆ ತೆರಳಿದ್ದ ಗುಂಪಿನ ಸದಸ್ಯನೋರ್ವ ಆಕಸ್ಮಿಕವಾಗಿ ಗುಂಡೇಟು ತಗುಲಿ ಮೃತಪಟ್ಟಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ಮೃತ ವ್ಯಕ್ತಿಯನ್ನು ಮಾಗಲು ಗ್ರಾಮದ ಹರೀಶ್ (38) ಎಂದು ಗುರುತಿಸಲಾಗಿದೆ
ಹರೀಶ್ ಮತ್ತು ಮಾಗಲು ಗ್ರಾಮದವರೇ ಆದ ಶರತ್, ಉಮೇಶ್ ಮತ್ತು ಸವಿನ್ ನಿನ್ನೆ ತಡರಾತ್ರಿ ಗುಡ್ಡೆಕೊಪ್ಪ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳ ಬೇಟೆಗೆ ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಗುಂಡೇಟು ತಗುಲಿ ಹರೀಶ್ ಮೃತಪಟ್ಟಿದ್ದಾರೆ. ತಂಡದವರೇ ಕಾಡುಪ್ರಾಣಿಯತ್ತ ಹಾರಿಸಿದ ಗುಂಡೇಟು ಅವರಿಗೆ ತಗುಲಿದೆ ಎನ್ನಲಾಗಿದೆ.
ಈ ಬಗ್ಗೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ