ಮಂಗಳೂರು,ಫೆ.01: ಕರ್ನಾಟಕ ಕ್ರಿಶ್ಛಿಯನ್ ಎಜುಕೇಶನ್ ಸೊಸೈಟಿಯ ಆಶ್ರಯದಲ್ಲಿ ಭಾನುವಾರ ನಗರದ ಬಲ್ಮಠ ಕಾಸೆನ್ ಮೈದಾನದಲ್ಲಿ ಶಾಂತಿಗಾಗಿ ಆಹರೋತ್ಸವ ಕಾರ್ಯಕ್ರಮ ನಡೆಯಿತು.
ಎಲ್ಲಾ ವರ್ಗದವರ ಜೊತೆಗೂಡಿ ಸಹಬೋಜನದಂತಹ ಕಾರ್ಯಕ್ರಮಗಳನ್ನು ಆಚರಿಸಿಕೊಂಡಾಗ ಬಂದಾಗ ಸಂಸ್ಕೃತಿಯ ಮಹತ್ವ ತಿಳಿಯುತ್ತದೆ ಎಂದು ಜರ್ಮನಿಯ ವಿದ್ವಾಂಸ ಡೇಕ್ಕನ್ ಬರ್ನ್ಡ್ ಲಿಬೆಂಡ್ಯೋರ್ಫಡ್ ಅವರು ಆಹಾರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಕ್ರಿಶ್ಛಿಯನ್ ಎಜುಕೇಶನ್ ಸೊಸೈಟಿಯು ಆಹಾರೋತ್ಸವ ಆಯೋಜಿಸಿ ಜನತೆಗೆ ಸಹಬೋಜನ ಸವಿಯುವ ಅವಕಾಶ ಮಾಡಿದೆ. ಇಂತಹ ಕಾರ್ಯ ಕೆಅಮಗಳಿಂದ ಸಮಾಜದಲ್ಲಿ ಶಾಂತಿ ನೆಲೆಸುವಂತಾಗಲಿ ಎಂದು ಅವರು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ 30ಕ್ಕೂ ಅಧಿಕ ಸಸ್ಯಾಹರ ಮತ್ತು ಮಾಂಸಾಹಾರ ತಿಂಡಿಗಳು ಲಭ್ಯವಿದ್ದು, ನೋಡುಗರಿಗೆ ವಿವಿಧ ಬಗೆಯ ತಿಂಡಿ ತಿನಸುಗಳನ್ನು ಸವಿಯುವ ಸದಾವಕಾಶ ದೊರೆಯಿತು.
ಹೊಸದಿಲ್ಲಿ ಇಂಟರ್ಪ್ಗೈತ್ ಕೋಅಲಿಷನ್ ಫಾರ್ ಪೀಸ್ ನ ಕಾರ್ಯದರ್ಶಿ ಡಾ ಪಾಕಿಯಮ್ ಸ್ಯಾಮುಲ್, ಜರ್ಮನಿಯ ಫಾರಿನ್ ಸದಸ್ಯೆ ಪಾಲ್ ಬ್ರೌಕ್ಲೆ, ಕೆಟಿಸಿ ಪ್ರಾಂಶುಪಾಲ ಡಾ ಹನಿ ಕಬ್ರಾಲ್, ತುಳು ಅಕಾಡೆಮಿಯ ಸದಸ್ಯೆ ಪ್ರೋ. ವೇದಾವತಿ, ಕರ್ನಾಟಕ ಕ್ರಿಶ್ಚಿಯನ್ ಎಜುಕೇಶನ್ ಸೊಸೈಟಿಯ ಖಜಾಂಜಿ ಡಾ ಎಸ್ ಅನಿಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.