ಕನ್ನಡ ವಾರ್ತೆಗಳು

ಮಗಳು ಡಿವೈಎಸ್ಪಿ, ತಂದೆಗೆ ಕ್ಯಾಂಟಿನ್ ಆಧಾರ; ಇದು ಡಿವೈಎಸ್ಪಿ ಅನುಪಮಾ ಸ್ಟೋರಿ

Pinterest LinkedIn Tumblr

Dysp Anupama_Father_Story (2)

ಉಡುಪಿ: ಬಳ್ಳಾರಿಯಲ್ಲಿ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅನುಪಮಾ ಶೆಣೈ ಮೂಲತಃ ಉಡುಪಿಯ ಉಚ್ಛಿಲದವರು. ಉಚ್ಛಿಲದ ಪಣಿಯೂರು ರಾಧಾಕೃಷ್ಣ ಶೆಣೈ ಮೂವರು ಮಕ್ಕಳಲ್ಲಿ ಅನುಪಮಾ ಕೂಡಾ ಒಬ್ಬರು. ಚಿಕ್ಕಂದಿನಲ್ಲಿ ಬಹಳ ಚೂಟಿಯಾಗಿದ್ದ ಅನುಪಮಾ ಕಷ್ಟಪಟ್ಟು ಅಧಿಕಾರಿಯಾಗಿದ್ದವರು.

Dysp Anupama_Father_Story (5) Dysp Anupama_Father_Story (1) Dysp Anupama_Father_Story (4) Dysp Anupama_Father_Story (3)

ತಂದೆ ರಾಧಾಕೃಷ್ಣ ಶೆಣೈ ಕಳೆದ 40 ವರ್ಷಗಳಿಂದ ಕೂಡಾ ಚಿಕ್ಕ ಕ್ಯಾಂಟಿನ್ ನಿಂದ ಸ್ವಾವಲಂಬಿಯಾಗಿ ಜೀವನ ಸಾಗಿಸುತ್ತಿದ್ದಾರೆ.ಅನುಪಮಾ ಜೊತೆ ಸಿವಿಲ್ ಇಂಜಿನಿಯರ್ ಆಗಿರೋ ಅರವಿಂದ್ ಶೆಣೈ ಮತ್ತು ವಿದೇಶದಲ್ಲಿರುವ ಅಚ್ಯುತ ಶೆಣೈಯವರನ್ನು ಕಷ್ಟ ಪಟ್ಟು ಓದಿಸಿ ಈ ಮಟ್ಟಕ್ಕೆ ಬೆಳಸಿದ್ದಾರೆ. ಅನುಪಮಾ ತಾಯಿ ಕೂಡಾ ಬೀಡಿ ಕಟ್ಟಿ ಜೀವನ ಸಾಗಿಸದವರು. ಮಗಳು ಅನುಪಮಾ ಬಗ್ಗೆ ಬಹಳಷ್ಟು ಒಲವು ವ್ಯಕ್ತಪಡಿಸುವ ತಂದೆ ಅನುಪಮಾ ಕಾರ್ಯ ವೈಖರಿ ಬಗ್ಗೆ ಬಳ್ಳಾರಿ ಜನತೆ ಖುಷಿ ಪಟ್ಟಿದ್ದಾರೆ. ಅವಳನ್ನು ಅಲ್ಲಿಯೇ ಉಳಿಸಿಕೊಳ್ಳಲು ಪ್ರತಿಭಟನೆ ಕೂಡಾ ನಡೆಸುತ್ತಿದ್ದಾರೆ ಅನ್ನೊದು ಹೆಮ್ಮೆಯ ಸಂಗತಿ ಎನ್ನುತ್ತಾರೆ.

ಅನುಪಮಾ ಅವರು ಮಂಗಳೂರಿನ ಅಜ್ಜಿ ಮನೆಯಲ್ಲಿ ಓದಿ ಬೆಳದವರು. ಸೈಂಟ್ ಅಲೋಶಿಯಸ್ ಮತ್ತು ಕುಲಶೇಖರದ ಸೇಕ್ರಡ್ ಹಾರ್ಟ್ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ಮಗಳು ಡಿವೈಎಸ್ಪಿ ಆದ ನಂತರ ಈಗಿನ ಬೆಳವಣಿಗೆ ಬಗ್ಗೆ ತಂದೆಗೆ ಹೆಚ್ಚೆನೂ ಮಾಹಿತಿ ಇಲ್ಲ. ಎಲ್ಲಿಯಾದರೂ ಸರಕಾರಿ ಕೆಲಸ ಮಾಡಲೇಬೇಕಲ್ಲವೇ ಎಂದು ತಮ್ಮ ಮನದಿಂಗಿತವನ್ನು ವ್ಯಕ್ತಪಡಿಸುತ್ತಾರೆ.

Write A Comment