ಉಡುಪಿ: ವಡ್ಡರ್ಸೆ ಎಂ.ಜಿ. ಕಾಲನಿಯ ಕೊಂಕಣ ರೈಲು ಮಾರ್ಗದ ಬಳಿ ಮರದ ಕೊಂಬೆಯೊಂದಕ್ಕೆ ಸುಮಾರು 45-50 ವರ್ಷ ಪ್ರಾಯದ ಅಪರಿಚಿತ ಗಂಡಸೊಬ್ಬರು ಜ.28ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಮೃತರ ವಾರಸುದಾರರು ಇದುವರೆಗೂ ಪತ್ತೆಯಾಗಿರುವುದಿಲ್ಲ. ಆತ್ಮಹತ್ಯೆಗೆ ಶರಣಾದ ವ್ಯಕ್ತಿ 5 ಅಡಿ 8 ಇಂಚು ಎತ್ತರ, ಎಣ್ಣೆಗಪ್ಪು ಮೈ ಬಣ್ಣ ಹೊಂದಿದ್ದು, ಬಿಳಿ ಬಣ್ಣದ ಅರ್ಧ ತೋಳಿನ ಬನಿಯನ್ ಹಾಗೂ ಖಾಕಿ ಬಣ್ಣದ ಬರ್ಮುಡಾ ಚಡ್ಡಿ ಧರಿಸಿದ್ದಾರೆ.
ಈ ಶವದ ಕುರಿತು ಮಾಹಿತಿ ತಿಳಿದಲ್ಲಿ ಪೊಲೀಸ್ ಕಂಟ್ರೋಲ್ ರೂಮ್ ಉಡುಪಿ 0820-2526444, ಅಥವಾ ಪೊಲೀಸ್ ವೃತ್ತ ನಿರೀಕ್ಷಕರು ಬ್ರಹ್ಮಾವರ ವೃತ್ತ 0820-2561966, ಮೊ. 9480805432. ಅಥವಾ ಪೊಲೀಸ್ ಉಪ್ ನಿರೀಕ್ಷಕರು ಕೋಟ ಪೊಲೀಸ್ ಠಾಣೆ 0820-2564155. ಮೊ. 9480805454 ಇವರಿಗೆ ಮಾಹಿತಿ ನೀಡಬೇಕಾಗಿ ಕೋರಲಾಗಿದೆ.