ಉಳ್ಳಾಲ ಜ.25 : ಸಯ್ಯಿದ್ ಮದನಿ ಸುನ್ನಿ ಸೆಂಟ್ರಲ್ ಕಮಿಟಿ (ರಿ) ಉಳ್ಳಾಲ ಮತ್ತು ವೆನ್ಲಾಕ್ ಆಸ್ಪತ್ರೆ ಇದರ ಸಹಯೋಗದೊಂದಿಗೆ ಜೀಲಾನಿ ಸ್ಮರಣೆ ಪ್ರಯುಕ್ತ ರಕ್ತದಾನ ಶಿಬಿರ ರವಿವಾರ ಉಳ್ಳಾಲ ದರ್ಗಾ ವಠಾರದಲ್ಲಿ ನಡೆಯಿತು.
ಉಳ್ಳಾಲದ ಮದನಿ ಅರಬಿಕ್ ಕಾಲೇಜಿನ ಪ್ರೊ. ಸಯ್ಯಿದ್ ಚೆರುಕುಂಞಿ ತಂಙಳ್ ದುಅ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಸಯ್ಯದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿಯ ಸಲಹ ಸಮಿತಿಯ ಅಧ್ಯಕ್ಷ ಎ.ಎ ಹೈದರ್ ಪರ್ತಿಪ್ಪಾಡಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಾಹಾರೈಸಿದರು.
ಸೆಯ್ಯದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಯು.ಎ. ಹುಸೈನ್ ಮೋನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಯು.ಎಸ್ ಹಂಝ, ಉಳ್ಳಾಲ ಮದನಿ ಅರಬಿಕ್ ಕಾಲೇಜಿನ ಪೊ.ಅಬ್ದುರ್ರಶೀದ್ ಮದನಿ, ಮುಫದಿಸ್ ಸುಲೈಮನ್ ಮದನಿ, ಎ.ಸಿ.ಪಿ ಕಲ್ಯಾಣ್ ಶೆಟ್ಟಿ, ಸೆಚಿiದ್ ಮದನಿ ಚಾರಿಟೇಬಲ್ ಟ್ರಸ್ಟ್‌ನ ಉಪಾಧ್ಯಕ್ಷ ಹಾಜಿ ಹನೀಫ್ ಬಿ.ಜಿ, ವೆನ್ಲಾಕ್ ಆಸ್ಪತ್ರೆಯ ಡಾ.ಶರತ್ ಕುಮರ್ ರಾವ್.ಜೆ, ಸೆಚಿiದ್ ಮದನಿ ದರ್ಗಾ ಸಮಿತಿಯ ಕಾರ್ಯದರ್ಶಿ ಅಶ್ರಫ್ ಹಾಜಿ, ಕರೀಂ ಹಾಜಿ, ಅಬ್ದುಲ್ ಅತಿಫ್ ಹಾಜಿ, ಅಬ್ದುಲ್ ಸತ್ತಾರ್, ಉಳ್ಳಾಲ ನಗರ ಸಭೆಯ ಸದಸ್ಯ ಸಲೀಂ ಅರ್.ಕೆ ಮದನಿ ಅಮ್ಮೆಂಬಳ ಸ್ವಾಗತಿ ಕಾರ್ಯಕ್ರಮ ನಿರೂಪಿಸಿದರು.