ಉಡುಪಿ: ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಯುವ ಮೆರಿಡಿಯನ್ ಬೇ ರೆಸಾರ್ಟ್ ಎಂಡ್ ಸ್ಪಾ ಹೋಟೇಲ್ ಇಲ್ಲಿ ಸ್ವಾಪ್ ಸಂಸ್ಥೆ ಉದ್ಘಾಟನೆ ಕಾರ್ಯಕ್ರಮ ಶನಿವಾರ ಸಂಜೆ ನಡೆಯಿತು.
ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಐಂದ್ರಿತಾ ರೇ ಸ್ವಾಪ್ ಉದ್ಘಾಟಿಸಿ ಸ್ವಾಪ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ವಾಪ್ ಸೌಂದರ್ಯ ವರ್ಧಕ ಉತ್ಪನ್ನಗಳಿಂದ ಅಂತರಾಷ್ಟ್ರೀಯ ಗುಣಮಟ್ಟದ ಸೇವೆ ನೀಡುವ ಸಂಸ್ಥೆಯಾಗಿದ್ದು ಮಹಿಳೆಯರ ಮತ್ತು ಪುರುಷರ ಪ್ರತ್ಯೇಕ ವಿಭಾಗ ಹೊಂದಿದೆ. ನುರಿತ ಸಿಬ್ಬಂದಿಗಳಿಂದ ಕೂಡಿದ ಸೌಂದರ್ಯವನ್ನು ಹೆಚ್ಚಿಸುವ ಸಂಸ್ಥೆಯಿದಾಗಿದೆ.ಈಗಾಗಲೇ ಬೆಂಗಳೂರಿನ ಗೊಲ್ಫ್ ಕ್ಲಬ್‌ನಲ್ಲಿ ಸ್ವಾಪ್ ಸಂಸ್ಥೆಯಿದ್ದು ಇದು 2ನೇ ಸಂಸ್ಥೆಯಾಗಿ ಕುಂದಾಪುರದ ಯುವ ಮೆರಿಡಿಯನ್‌ನಲ್ಲಿ ಉದ್ಘಾಟನೆಗೊಂಡಿದೆ.
ಸ್ವಾಪ್ ಸಂಸ್ಥೆ ನಿರ್ದೇಶಕಿ ಪೆಮಾ ಬುಟಿಯಾ ಫ್ಯಾರಿಸ್ ನಲ್ಲಿ ತರಭೇತಿ ಹೊಂದಿದ್ದು ದೇಶದ ಅನೇಕ ಸಂಸ್ಥೆಗಳಲ್ಲಿ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದು ನುರಿತ ಸಿಬ್ಬಂದಿಗಳೊಂದಿಗೆ ಇಲ್ಲಿ ಕಾರ್ಯವನ್ನಾರಂಭಿಸಿದ್ದಾರೆ.
ಸ್ವಾಪ್ ಉದ್ಘಾಟನೆ ಸಂದರ್ಭ ಹಿರಿಯ ನಟಿ ತಾರಾ, ಹಾಸ್ಯ ನಟ ಸಾಧುಕೋಕಿಲ, ನಿರೂಪಕಿ ಅನೂಶ್ರೀ, ಯುವ ಮೆರಿಡಿಯನ್ ಇನ್ಪ್ರಾಸ್ಟ್ರಕ್ಚರ್ ಮುಖ್ಯಸ್ಥರಾದ ಬೈಲೂರು ಉದಯಕುಮಾರ್ ಶೆಟ್ಟಿ, ವಿನಯಕುಮಾರ್ ಶೆಟ್ಟಿ, ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ವಕ್ವಾಡಿ ವಿ.ಕೆ. ಮೋಹನ್, ಸ್ವಾಪ್ ಸಂಸ್ಥೆ ನಿರ್ದೇಶಕಿ ಪೆಮ ಬುಟಿಯ ಮೊದಲಾದವರಿದ್ದರು.