ಮಂಗಳೂರು,ಜ.23 :ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವತಿಯಿಂದ ಶ್ರಮಶಕ್ತಿ ಮತ್ತು ಇತರೇ ಯೋಜನೆಯಡಿಯಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಫಲಾನುಭವಿ ಗಳಿಗೆ ಸಾಲ ಸೌಲಭ್ಯಗಳ ಚೆಕ್ ವಿತರಣೆ ಸಮಾರಂಭ ಹಾಗೂ ಅರಿವು, ಸಿಇಟಿ ಯೋಜನೆಯಡಿ ವಿದ್ಯಾರ್ಥಿಗಳಿಗೆ ಮಾಹಿತಿಶಿಬಿರವನ್ನು ನಗರದ ಲೋಯೋಲಾ ಹಾಲ್ ನಲ್ಲಿ ಶನಿವಾರ ಆಯೋಜಿಸಲಾಯಿತು.
ಸಮಾಜದಲ್ಲಿ ಸಂಖ್ಯಾತ, ಅಲ್ಪಸಂಖ್ಯಾತ ಎನ್ನುವ ಬೇಧ ಭಾವ ವಿಲ್ಲದೇ ಎಲ್ಲರೂ ಮುಂದೆಬರಬೇಕು, ಜೀವನದಲ್ಲಿ ಪ್ರಗತಿ ಕಾಣಬೇಕು, ಸಮಾಜದಲ್ಲಿ ಉತ್ತಮ ಸ್ಥಾನಮಾನ ಸೀಗಬೇಕು ಎನ್ನುವ ಉದ್ದೇಶದಿಂದ ಈ ಅಲ್ಪಸಂಖ್ಯಾತ ಇಲಾಖೆಯು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಕೇಂದ್ರ ಮಾಜಿ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರು ಕಾರ್ಯಕ್ರಮ ಉದ್ಘಾಟಿಸಿ,ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಶಾಸಕ ಜೆ.ಆರ್.ಲೋಬೊ, ಫಝಲ್, ಮೇಯರ್ ಜೆಸಿಂತಾ ವಿಜಯ ಆಲ್ಫ್ರೆಡ್,ಕಾರ್ಪೊರೇಟರ್ ಗಳಾದ ಅಬ್ದುಲ್ ಲತೀಫ್,ಎ.ಸಿ.ವಿನಯ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಮಾರು 300 ಕ್ಕೂ ಹೆಚ್ಚು ಅಲ್ಪಸಂಖ್ಯಾತರಿಗೆ ಶ್ರಮಶಕ್ತಿ ಯೋಜನೆಯಡಿ ಸುಮಾರು 82,15,000ರೂ. ಮೌಲ್ಯದ ಚೆಕ್ ಗಳನ್ನು ವಿತರಿಸಲಾಯಿತು.