ಕನ್ನಡ ವಾರ್ತೆಗಳು

`ಪ್ರೇರಣ್’ ಕೊಂಕಣಿ ಭಕ್ತಿಗೀತೆಗಳ ಸಿ.ಡಿ. ಬಿಡುಗಡೆ

Pinterest LinkedIn Tumblr

Prerann_CD_Release

ಮಂಗಳೂರು,ಜ.21 : `ಕರಾವಳಿ ಕೊಂಕಣ್ಸ್’ ಮತ್ತು ಬೆಂದುರಿನ ಸಂತ ಸೆಬಾಸ್ಟಿಯನ್ ಇಗರ್ಜಿಯ ಸಹಯೋಗದಲ್ಲಿ ಜನವರಿ 17 ರಂದು ಪ್ರದರ್ಶನಗೊಂಡ ಶ್ರೀ ಕ್ಲೊಡ್ ಡಿಸೋಜಾ ರವರ ೫೦ನೇ ಕೊಂಕಣಿ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಶ್ರೀ ಲೆಸ್ಲಿ ರೇಗೊ, ಬೆಂದುರ್ ಇವರ ಚೊಚ್ಚಲ ಕೊಂಕಣಿ ಭಕ್ತಿಗೀತೆಗಳ `ಪ್ರೇರಣ್’ ಸಿ.ಡಿ.ಯನ್ನು ಲೆಸ್ಲಿ ರೇಗೊರವರ ತಾಯಿ ಶ್ರೀಮತಿ ಮೊಲಿ ರೇಗೊ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬೆಂದುರ್ ಚರ್ಚಿನ ಧರ್ಮಗುರು ವಂ| ಆಂಟನಿ ಸೆರಾವೊರವರು ` ಕಾರ್ಯನಿರ್ವಾಹಕನಾಗಿ, ಟಿವಿ ನಿರೂಪಕನಾಗಿ ಖ್ಯಾತರಾದ ಲೆಸ್ಲಿ ರೇಗೊರವರ `ಪ್ರೇರಣ್’ ಸಿ.ಡಿ. ಆಲಿಸಿದ ಬಳಿಕ ಅವರೋರ್ವ ಉತ್ತಮ ಗೀತೆ ರಚನೆಕಾರರೂ ಆಗಿದ್ದಾರೆ ಎಂಬುದನ್ನು ಅರಿತೆ. ಪ್ರತಿಯೋರ್ವರೂ ಅವರ ಈ ಭಕ್ತಿ ಸಂಗೀತವನ್ನು ಆಲಿಸಬೇಕು” ಎಂದು ಕರೆಯಿತ್ತರು.

ಈ ಸಂದರ್ಭದಲ್ಲಿ ವಂ| ವಿನ್ಸೆಂಟ್ ಮಿನೇಜಸ್, ಮೆಲ್ವಿನ್ ರೊಡ್ರಿಗಸ್, ಆಲ್ವಿನ್ ನೊರೊನ್ಹಾ, ಜೊಸ್ವಿನ್ ಪಿಂಟೊ ಮತ್ತು ಕ್ಲೊಡ್ ಡಿಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Write A Comment