
ಮಂಗಳೂರು,ಜ.05 : ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘದ ವತಿಯಿಂದ ಮಂಗಳವಾರ ಅಳಪೆಯ ಅರಣ್ಯ ಭವನದಲ್ಲಿರುವ ಮಂಗಳೂರು ವೃತ್ತದ ಮುಖ್ಯ ಆರಣ್ಯಸಂರಕ್ಷಣಾಧಿಕಾರಿ ಕಛೇರಿ ಎದುರು ಧರಣಿ ನಡೆಸಿದರು.
ಅರಣ್ಯ ಇಲಾಖೆಯಲ್ಲಿ ಪಿಸಿಪಿ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌರಕರರಿಗೆ ನೀಡಬೇಕಾದ ಸವಲತ್ತುಗಳನ್ನು ಇನ್ನೂ ಪೊರೈಸಿಲ್ಲ ಎಂದು ರಾಜ್ಯಧ್ಯಕ್ಷರಾದ ಎ.ಎಂ ನಾಗರಾಜುಅವರು ಹೇಳಿದರು.

ರಾಜ್ಯ ಅರಣ್ಯ ಇಲಾಖೆ ಜಿಲ್ಲಾಧ್ಯಕ್ಷ ಎಸ್ ಹರೀಶ್, ಉಪಾಧ್ಯಕ್ಷ ಮೋಹನ್ ಡಿ ಸತೀಶ್, ಸದಾನಂದ, ಚಿದಾನಂದ, ಚಂದ್ರಶೇಖರ, ಸಾಧಿಕುಲಾಲ್. ಶೇಖರ್, ಸತೀಶ್ ಕೆ ಎಸ್, ಸರಿನ, ಶೈಲಜಾ ಮುಂತಾದವರು ಉಪಸ್ಥಿತರಿದ್ದ್ರರು.