ಕನ್ನಡ ವಾರ್ತೆಗಳು

ಚಾಲಕನ ಹತ್ಯ್ರೆಗೆ ಖಂಡಿನೆ : ಟ್ಯಾಂಕರ್ ಚಾಲಕರ ಮುಷ್ಕರ ನಾಲ್ಕನೆ ದಿನಕ್ಕೆ – ಅನಿಲ ಪೂರೈಕೆ ಸ್ಥಗಿತ

Pinterest LinkedIn Tumblr

pamvel_tanker_photo_1

ಮಂಗಳೂರು,ಜ.02: ಆಂಧ್ರಪ್ರದೇಶದ ಹೆದ್ದಾರಿಯಲ್ಲಿ ಕರ್ತವ್ಯ ನಿರತರಾಗಿರುವಾಗಲೇ ದುಷ್ಕರ್ಮಿಗಳಿಂದ ಕೊಲೆಯಾದ ಟ್ಯಾಂಕರ್ ಚಾಲಕ ಶರವಣ್ ಹತ್ಯೆಯ ಆರೋಪಿಗಳನ್ನು ಬಂಧಿಸಬೇಕು, ಚಾಲಕರಿಗೆ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿ ಎಂಆರ್‌ಪಿಎಲ್, ಹೆಚ್‌ಪಿಸಿಎಲ್ ಅಡುಗೆ ಅನಿಲ ಸಾಗಾಟದ ಟ್ಯಾಂಕರ್ ಚಾಲಕರು ನಡೆಸುತ್ತಿರುವ ಮುಷ್ಕರ ನಾಲ್ಕನೆ ದಿನಕ್ಕೆ ಕಾಲಿಟ್ಟಿದೆ.

pamvel_tanker_photo_2 pamvel_tanker_photo_3

ಚಾಲಕರ ಪ್ರತಿಭಟನೆಗೆ ಡಿವೈಎಫ್ಐ, ಸಿಐಟಿಯು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದೆ. ಮೃತಚಾಲಕನ ಕುಟುಂಬಕ್ಕೆ ಹತ್ತು ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂಬ ಆಗ್ರಹಿಸಿದ್ದಾರೆ.

ಸುಮಾರು ನಾಲ್ಕು ಸಾವಿರ ಟ್ಯಾಂಕರ್ಗಳು ಎಂಆರ್‌ಪಿಎಲ್ ಉತ್ಪಾದಿಸುವ ಅನಿಲವನ್ನು ದಕ್ಷಿಣ ಭಾರತದ ಮೂಲೆ ಮೂಲೆ ಸಾಗಿಸುತ್ತದೆ. ಆದರೆ, ಈಗ ಏಕಕಾಲಕ್ಕೆ ಎಲ್ಲಾ ಚಾಲಕರು ಮುಷ್ಕರ ಹೂಡಿರುವುದರಿಂದ ದಕ್ಷಿಣ ಭಾರತದಾದ್ಯಂತ ಅನಿಲ ಪೂರೈಕೆ ಸ್ಥಗಿತಗೊಂಡಿದೆ.

Write A Comment