
ಮಂಗಳೂರು,ಡಿ.31: ನಗರದ ಪುರಭವನದಲ್ಲಿ ಜನವರಿ 3 ರವಿವಾರ ಸಂಜೆ ಜರಗಲಿರುವ’ಪೇಜಾವರ ಶ್ರೀಗಳ ಪೌರಸಂಮಾನ’ ಸಮಾರಂಭದ ಪ್ರಯುಕ್ತ ಅಂದು ಸಂಜೆ 4 ಗಂಟೆಗೆ ಶರವು ದೇವಸ್ಥಾನದಿಂದ ಪುರಭವನದವರೆಗೆ ಭವ್ಯಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ವಿವಿಧ ಸಂಘ ಸಂಸ್ಥೆಗಳು, ಭಜನಾ ತಂಡಗಳು ಹಾಗೂ ಸಾಂಸ್ಕೃತಿಕ ತಂಡಗಳನ್ನು ವಿನಂತಿಸಲಾಗಿದೆ. ಭಾಗವಹಿಸುವ ತಂಡಗಳು ಮುಂಚಿತವಾಗಿ ಗಣೇಶ್ ಭಟ್ ಶರವು (9448133027) ಅವರನ್ನು ಸಂಪರ್ಕಿಸುವಂತೆ ಸಂಮಾನ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ