
ಮ೦ಗಳೂರು, ಡಿ,30: ಮಂಗಳೂರು ಆರ್‌ಟಿಓ ಕಚೇರಿಗೆ ವಾಹನ ನೋಂದಾವಣೆಗಾಗಿ ಮತ್ತು ಅರ್ಹತಾ ಪತ್ರ ನೀಡಿಕೆಗೆ/ ನವೀಕರಣಕ್ಕೆ ಸಾರಿಗೆ ವಾಹನಗಳು ಬರುತ್ತಿವೆ. ಇದರಿಂದ ಈ ಪ್ರದೇಶದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿರುವ ಬಗ್ಗೆ ಹಾಗೂ ಆರ್‌ಟಿಓ ಕಛೇರಿಯಲ್ಲಿ ವಾಹನ ನಿಲುಗಡೆಗೆ ಸ್ಥಳ ಕಡಿಮೆ ಇರುವ ಬಗ್ಗೆ ಸಾರ್ವಜನಿಕ ದೂರುಗಳು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಸಾರಿಗೆ ವಾಹನಗಳ ತಪಾಸನೆಗೆ ಮಂಗಳೂರು -ಉಡುಪಿ ರಾಷ್ಟ್ರೀಯ ಹೆದ್ದಾರಿಯ ಕೂಳೂರು ಫೋರ್ತ್ ಮೈಲ್ ಪಕ್ಕದ ಖಾಲಿ ಸ್ಥಳದಲ್ಲಿ ಸಾರಿಗೆ ವಾಹನಗಳ ಅರ್ಹತಾ ಪತ್ರ ನೀಡಿಕೆ ನವೀಕರಣ ನಡೆಸಲು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ತಾತ್ಕಾಲಿಕವಾಗಿ ಸ್ಥಳ ನೀಡಿರುತ್ತಾರೆ.
ಮಂಗಳೂರು ಆರ್‌ಟಿಓ ಕಚೇರಿಯಲ್ಲಿ ನಿಗದಿತ ಶುಲ್ಕ ಪಾವತಿಸಿ, ಭರ್ತಿ ಮಾಡಿದ ಅರ್ಜಿ ಹಾಗೂ ವಾಹನದೊಂದಿಗೆ ಬಂಗ್ರಕೂಳೂರು ಮೈದಾನದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ರವರೆಗೆ ವಾಹನ ತಪಾಸಣೆ, ಪರಿಶೀಲನೆ ನಡೆಸಲಾಗುವುದು.
ಸಾರಿಗೇತರ ಖಾಸಗಿ ವಾಹನ ನೊಂದಣಿಗೆ ಮತ್ತು ನವೀಕರಣಕ್ಕೆ ಎಂದಿನಂತೆ ಆರ್‌ಟಿಓ ಕಛೇರಿ ಆವರಣದಲ್ಲಿ ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ರವರೆಗೆ ನಡೆಸಲಾಗುವುದೆಂದು ಉಪಸಾರಿಗೆ ಆಯುಕ್ತ ಜಿ.ಎಸ್. ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.