ಕನ್ನಡ ವಾರ್ತೆಗಳು

16ರ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ : ದೂರು ದಾಖಲು.

Pinterest LinkedIn Tumblr

Kavoor_rape_case_1

ಮಂಗಳೂರು,ಡಿ.28 : ಹದಿನಾರು ವರ್ಷದ ಅಪ್ರಾಪ್ತ ಬಾಲಕಿಯೋರ್ವಳ ಮೇಲೆ ಐವರು ಯುವಕರು ಸಾಮೂಹಿಕ (ಗ್ಯಾಂಗ್ ರೇಪ್) ಅತ್ಯಾಚಾರ ನಡೆಸಿರುವ ಬಗ್ಗೆ ನಗರದ ಕಾವೂರು ಪೊಲೀಸ್ ಠಾಣೆಯಲ್ಲಿ ಸಂತೃಸ್ತ ಬಾಲಕಿ ದೂರು ದಾಖಲಿಸಿರುವ ಘಟನೆ ಸೋಮವಾರ ನಡೆದಿದೆ.

ಮಂಗಳೂರು ಮಹಿಳಾ ಶಕ್ತಿ ಸಂಘದ ಸದಸ್ಯರ ಸಹಾಯದೊಂದಿಗೆ ಠಾಣೆಗೆ ಆಗಮಿಸಿದ ಯುವತಿ, ತನ್ನ ಮೇಲೆ ಕುಂಜತ್ ಬೈಲ್ ನಿವಾಸಿ ಪ್ರಶಾಂತ್ ಶೆಟ್ಟಿ ಮತ್ತಾತನ ಗೆಳೆಯರಾದ ಸಲ್ಮಾನ್, ಆದಿಲ್, ನೌಫಾಲ್ ಮತ್ತು ಪರಿಚಯವಿಲ್ಲದ ಇನ್ನೊರ್ವ ವ್ಯಕ್ತಿ ಅತ್ಯಾಚಾರ ನಡೆಸಿರುವುದಾಗಿ  ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರಿನಂತೆ ಪೋಕ್ಸೋ ಕಾಯಿದೆ ಮತ್ತು ಐಪಿಸಿ ಸೆಕ್ಷನ್ 376ಡಿ ಪ್ರಕಾರ ದೂರು ದಾಖಲಿಸಿದ್ದಾರೆ.

Kavoor_rape_case_2 Kavoor_rape_case_3 Kavoor_rape_case_4 Kavoor_rape_case_5 Kavoor_rape_case_6 Kavoor_rape_case_7 Kavoor_rape_case_8

ಪ್ರಶಾಂತ್ ತನ್ನ ಮನೆಯ ಸಮೀಪದ ನಿವಾಸಿಯಾಗಿದ್ದು ಹಲವು ಸಮಯಗಳಿಂದ ನನ್ನನ್ನ ಸತಾಯಿಸುತ್ತಿದ್ದ. ತಾನು ಎಷ್ಟು ನಿರಾಕರಿ ಸಿದರೂ ಮದುವೆ ಭರವಸೆ ನೀಡಿ ತನ್ನ ಪ್ರೀತಿಯ ಬಲೆಯಲ್ಲಿ ಸಿಲುಕಿಸಿದ ಆತ ನನ್ನನ್ನು ದೈಹಿಕವಾಗಿಯೂ ಬಳಸಿಕೊಂಡಿದ್ದ. ನಂತರ ಆತ ಮತ್ತು ಮುಂದುವರಿದು ತನ್ನ ಸ್ನೇಹಿತರ ಜೊತೆಯೂ ದೈಹಿಕ ಸಂಪರ್ಕ ಹೊಂದುವಂತೆ ಒತ್ತಡ ಹೇರುತ್ತಿದ್ದ. ಅಷ್ಟು ಮಾತ್ರವಲ್ಲ ತನ್ನ ಆಜ್ಞೆಯನ್ನು ಪಾಲಿಸದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಬೆದರಿಕೆಯನ್ನೂ ಹಾಕಿದ್ದ ಎಂದು ಹುಡುಗಿ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.

ಭಾನುವಾರ, ಡಿಸೆಂಬರ್ 27ರಂದು ಸಲ್ಮಾನ್ ಎಂಬಾತ ಏನೋ ಅರ್ಜೆಂಟಾಗಿ ಮಾತನಾಡಲಿಕ್ಕಿದೆ ಎಂದು ಹೇಳಿ ಪ್ರಶಾಂತ್ ಮೊಬೈಲ್ ಫೋನ್ ಮೂಲಕ ನನಗೆ ಕರೆ ಮಾಡಿ ಪಂಜಿಮೊಗರುವಿಗೆ ಬರುವಂತೆ ತಿಳಿಸಿದ್ದ. ತಾನು ಅಲ್ಲಿಗೆ ತೆರಳಿದಾಗ ಆದಿಲ್ ಅಲ್ಲಿಗೆ ಬಂದು ತನ್ನ ಬೈಕ್ ನಲ್ಲಿ ಪಂಜಿಮೊಗರುವಿನಲ್ಲಿರುವ ಮನೆಗೆ ಕೊಂಡೊಯ್ದ. ಅಲ್ಲಿ ಮನೆಯೊಳಗೆ ಪ್ರಶಾಂತ್, ನೌಫಾಲ್ ಮತ್ತು ಅಪರಿಚಿತ ವ್ಯಕ್ತಿ ಇದ್ದರು. ಈ ಮನೆ ಯಾರದ್ದು ಎಂದು ಕೇಳಿದ್ದಕ್ಕೆ ಅದು ಸಲ್ಮಾನ್ ಮನೆ ಎಂದು ಹೇಳಿದರು ಎಂದು ಯುವತಿ ಹೇಳಿಕೊಂಡಿದ್ದಾಳೆ.

ಮನೆಯೊಳಗೆ ಪ್ರವೇಶಿಸಿದ ನಂತರ ಕುಡಿಯಲು ಜ್ಯೂಸ್ ನೀಡಿದರು. ಆನಂತರ ನನ್ನನ್ನು ಒಂದು ಕೋಣೆಯೊಳಗೆ ಕೊಂಡೊಯ್ದು ಗ್ಯಾಂಗ್ ರೇಪ್ ಮಾಡಿದರು. ನಾನು ಬಿಡಿಸಲು ಯತ್ನಿಸಿದಾಗ ದೈಹಿಕವಾಗಿ ಹಿಂಸಿಸಲಾಯಿತು. ನಂತರ ಆದಿಲ್ ನನ್ನನ್ನು ಕಾಲೇಜೊಂದರ ಸಮೀಪದ ಬಸ್ ಸ್ಟಾಪ್ ನಲ್ಲಿ ಬಿಟ್ಟು ಹೋದ. ದೈಹಿಕ ಹಲ್ಲೆ ಮತ್ತು ಪೀಡನೆಯಿಂದ ಕಂಗಾಲಾಗಿದ್ದ ನನ್ನನ್ನು ದಾರಿಹೋಕರು ಮನೆಗೆ ತಂದು ಬಿಟ್ಟರು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಪ್ರಶಾಂತ್ ಶೆಟ್ಟಿ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಪ್ರಕರಣ ದಾಖಲಿಸಿ ಕಾವೂರು ಪೊಲೀಸರು ಇನೋರ್ವ ಅರೋಪಿಗಾಗಿ ಶೋಧ ನಡೆಸುತ್ತಿದ್ದಾರೆ

Write A Comment