ಕನ್ನಡ ವಾರ್ತೆಗಳು

ಆನೆಗುಡ್ಡೆ ವಿನಾಯಕನ ಸನ್ನಿಧಿಗೆ ಭೇಟಿ ನೀಡಿದ ಸಿಕ್ಕಿಂ ರಾಜ್ಯಪಾಲ

Pinterest LinkedIn Tumblr

ಕುಂದಾಪುರ: ಸಿಕ್ಕಿಂ ರಾಜ್ಯಪಾಲ ಶ್ರೀನಿವಾಸ್ ದಾದಾಸಾಹೇಬ್ ಪಾಟೀಲ್ ಅವರುಕುಟುಂಬ ಸಮೇತ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿದರು.

Sikkim_Governor_Aanegudde Visit (2) Sikkim_Governor_Aanegudde Visit (3) Sikkim_Governor_Aanegudde Visit (1) Sikkim_Governor_Aanegudde Visit (4)

ಬೆಳಿಗ್ಗೆ ಶ್ರೀ ದೇವಳಕ್ಕೆ ಭೇಟಿ ನೀಡಿದ ಅವರು ವಿನಾಯಕನ ದರ್ಶನಪಡೆದು ವಿಶೇಷ ಪೂಜೆ ಸಲ್ಲಿಸಿದರು. ದೇವಳದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ದೇವಳದ ಅನುವಂಶಿಕ ಆಡಳಿತ ಮೊಕ್ತೇಸ್ವರ ಸೂರ್ಯನಾರಾಯಣ ಉಪಾಧ್ಯ ರಾಜ್ಯಪಾಲ ಶ್ರೀನಿವಾಸ್ ದಾದಾಸಾಹೇಬ್ ಪಾಟೀಲ್ ಅವರನ್ನು ಬರಮಾಡಿಕೊಂಡು ದೇವಳದ ವತಿಯಿಂದ ಗೌರವಿಸಿದರು.

Write A Comment