ಕನ್ನಡ ವಾರ್ತೆಗಳು

ವಿಧಾನಪರಿಷತ್ ಚುನಾವಣೆಗೆ ಕುಂದಾಪುರ ಸಜ್ಜು; ಮತದಾನ ಗೌಪ್ಯತೆಗೆ ಕ್ರಮ

Pinterest LinkedIn Tumblr

lc

ಕುಂದಾಪುರ: ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಚುನಾವಣಾ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗಾಗಿ ತಾಲ್ಲೂಕಿನ 67 ಮತಗಟ್ಟೆಗೆ ಸಂಬಂಧಿಸಿದಂತೆ ಚುನಾವಣೆ ಪ್ರಕ್ರಿಯೆಗೆ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಕುಂದಾಪುರದ ತಹಸೀಲ್ದಾರ್ ಅವರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕುಂದಾಪುರದಲ್ಲಿ ಮಿನಿ ವಿಧಾನಸೌಧದಲ್ಲಿ ಡಿ.26 ರಂದು ಬೆಳಿಗ್ಗೆ 8.30 ರಿಂದ ಮತಗಟ್ಟೆಯ ಸಿಬ್ಬಂದಿಗಳಿಗೆ ಮಸ್ಟರಿಂಗ್ ಕಾರ್ಯ ನಡೆಯಲಿದೆ. ಡಿ.27 ರಂದು ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ನಡೆಯಲಿರುವ ಮತದಾನದ ವೇಳೆಯಲ್ಲಿ ಮತಗಟ್ಟೆಯ 200 ಮೀಟರ್ ವ್ಯಾಪ್ತಿಯಲ್ಲಿ ಪ್ರಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮತದಾನದ ಗೌಪ್ಯತೆಯನ್ನು ಕಾಪಾಡಲು ಏಕಕಾಲದಲ್ಲಿ ಒಬ್ಬ ಮತದಾರರಿಗೆ ಮಾತ್ರ ಮತಗಟ್ಟೆಯ ಒಳಗೆ ಪ್ರವೇಶ ನೀಡಲಾಗುವುದು.

ಮತದಾರರು ತಮ್ಮ ಎಪಿಕ್ ಕಾರ್ಡ್, ಪಂಚಾಯಿತಿ ವತಿಯಿಂದ ನೀಡಿರುವ ಗುರುತಿನ ಚೀಟಿಯನ್ನು ಹಾಜರುಪಡಿಸತಕ್ಕದ್ದು, ಮತಗಟ್ಟೆಯಲ್ಲಿ ಮತದಾರರು, ಅಧಿಕೃತ ನೇಮಕಗೊಂಡಿರುವ ಮತದಾನದ ಏಜೆಂಟರು ಮತ್ತು ಚುನಾವಣೆಗೆ ಸಂಬಂಧಿಸಿದ ಇತರೆ ಅಧಿಕಾರಿಗಳನ್ನು ಹೊರತು ಪಡಿಸಿ ಇತರೇ ಜನರಿಗೆ ಮತಗಟ್ಟೆಯ ಒಳಗೆ ಪ್ರವೇಶ ಅನುಮತಿ ಇರುವುದಿಲ್ಲ. ಮತದಾನದ ಗೌಪ್ಯತೆಯನ್ನು ಉಲ್ಲಂಘಿಸಿದಲ್ಲಿ ಜನತಾ ಪ್ರಾತಿನಿದ್ಯ ಕಾಯ್ದೆಯಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿರುವ ಅವರು ಶಾಂತಿಯುತ, ಮುಕ್ತ, ನ್ಯಾಯ ಸಮ್ಮತ, ನಿಷ್ಪಕ್ಷಪಾತ ಮತದಾನಕ್ಕೆ ಮತದಾರರು ಹಾಗೂ ರಾಜಕೀಯ ಮುಖಂಡರುಗಳು ಸಹಕರಿಸುವಂತೆ ಕೋರಿದ್ದಾರೆ.

Write A Comment