ಕನ್ನಡ ವಾರ್ತೆಗಳು

ಮಂಗಳೂರಿನಾದ್ಯಂತ ಕ್ರಿಸ್ ಮಸ್ ಆಚರಣೆಯ ಸಂಭ್ರಮ ಸಡಗರ

Pinterest LinkedIn Tumblr

xmas_city_photo_1

ಮಂಗಳೂರು,ಡಿ.23:  ಕ್ರಿಸ್‍ಮಸ್, ಕ್ರಿಸ್‌ಮಸ್, ಕ್ರಿಸ್‌ಮಸ್ . ಈ ಬಾರಿಯ ಕ್ರಿಸ್‍ಮಸ್‌ನ್ನು ಭರ್ಜರಿಯಾಗಿ ಸ್ವಾಗತ ಮಾಡಲು ಮಂಗಳೂರು ನಗರ ಸಂಪೂರ್ಣ ಸಜ್ಜಾಗಿದೆ. ಕ್ರಿಸ್‍ಮಸ್ ಗೆ ಕುಟುಂಬದವರೆಲ್ಲರೂ ಸಂತೋಷ ಪಡೆಯಲು ನಗರ‍ದ ಎಲ್ಲಾ ಕಡೆ ಅದ್ದೂರಿಯ ಸಿದ್ಧತೆ ನಡೆಯುತ್ತಿದೆ.

ಕ್ರಿಸ್‍ಮಸ್ ಗಾಗಿ ಸಾಂತಾ ಕ್ಲಾಸ್, ಸ್ನೋಮ್ಯಾನ್ ಕ್ಯಾರಕ್ಟರ್ ಮತ್ತು ಕ್ರಿಸ್‍ಮಸ್ ಕ್ಯಾರೋಲ್ಸ್ ಮುಂತಾದ ವಿಭಿನ್ನ ಕಾನ್ಸೆಪ್ಟ್ ಗಳಿಂದ ಕ್ರಿಸ್‍ಮಸ್ ಆಚರಣೆಯನ್ನು ಅನನ್ಯವಾಗಿಸಲು ತಯಾರಿಸಲು ಚರ್ಚ್ ಗಳು ಸಿದ್ದತೆ ನಡೆಸುತ್ತಿದೆ.

xmas_city_photo_2 xmas_city_photo_3 xmas_city_photo_4 xmas_city_photo_5 xmas_city_photo_6 xmas_city_photo_7 xmas_city_photo_8 xmas_city_photo_9 xmas_city_photo_10 xmas_city_photo_11 xmas_city_photo_12 xmas_city_photo_13 xmas_city_photo_14 xmas_city_photo_15 xmas_city_photo_16 xmas_city_photo_17 xmas_city_photo_18 xmas_city_photo_19 xmas_city_photo_20 xmas_city_photo_21

ಪ್ರತಿಯೊಂದು ಮನೆ , ಚರ್ಚ್ ಗಳಲ್ಲಿ ಹಬ್ಬದೊಂದಿಗಿನ ಮೋಜು ಹಾಗೂ ಹುರುಪಿನೊಂದಿಗೆ ಕ್ರಿಸ್‍ಮಸ್ ಆಚರಣೆಗಾಗಿ ಎಲ್ಲಾ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ವಿವಿಧ ರೀತಿಯ ಅಲಂಕಾರ ಮತ್ತು ಜನಪ್ರಿಯ ಕ್ರಿಸ್‍ಮಸ್ ಸಂಕೇತಗಳಾದ ದೊಡ್ಡ ಹಸಿರು ಬೆಲ್, ಒಂದು ದೊಡ್ಡ ಕೆಂಪು ಸ್ಟಾಕಿಂಗ್, ಥ್ರೋನ್ ಹಾಗೂ ಸಾಂತಾಗಾಗಿ ಒಂದು ಕೆಂಪು ಮೇಲ್ ಬಾಕ್ಸ್ ಹೀಗೆ ಕ್ರಿಸ್‍ಮಸ್ ಗಾಗಿ ಬೇಕಾದ ವಿವಿಧ ರೀತಿಯ ಅಲಂಕಾರಿಕಾ ವಸ್ತುಗಳನ್ನು ಈಗಾಗಲೇ ಮಾರುಕಟ್ಟೆಯ ಪ್ರತಿಯೊಂದು ಮಳಿಗೆಯಲ್ಲೂ ಕಾಣಬಹುದು.

Write A Comment