ಕನ್ನಡ ವಾರ್ತೆಗಳು

ಮದುವೆ ಮನೆಯಲ್ಲಿ ದೋಚುವ ಖತರ್ನಾಕ್ ದಂಪತಿಗಳು ಅಂದರ್..!

Pinterest LinkedIn Tumblr

ಉಡುಪಿ: ಉಡುಪಿ, ಹಿರಿಯಡ್ಕ ಕಡೆಗಳಲ್ಲಿ ನಡೆಯುವ ಮದುವೆ ಸಮಾರಂಭಕ್ಕೆ ಹೋಗಿ ವಧೂವರರ‌ ಡ್ರಸ್ಸಿಂಗ್‌ ರೂಮಿಗೆ ತೆರಳಿ ಕಳ್ಳತನ ನಡೆಸುತ್ತಿದ್ದವರನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ರೂಮುಗಳಲ್ಲಿ ಮನೆಯವರು ತಂದಿಟ್ಟ ಸಣ್ಣ ಬ್ಯಾಗ್‌ಗಳನ್ನು, ಅದರೊಳಗಿನ ನಗದು, ಚಿನ್ನಾಭರಣಗಳನ್ನು ಕಳ್ಳತನ ಮಾಡುವುದಲ್ಲದೆ ಬ್ಯಾಗ್‌ನಲ್ಲಿಟ್ಟಿರುವ ಎಟಿಎಂ ಕಾರ್ಡ್‌ ಉಪಯೋಗಿಸಿ ಕಾರ್ಡ್‌ನಿಂದ ಹಣವನ್ನು ತೆಗೆಯುತ್ತಿದ್ದರು.

Udp_Thaeft accused_Arrest

ಬಂಧಿತ ಆರೋಪಿಗಳು ಶಿವಮೊಗ್ಗ ಜಯನಗರ ವಾಸಿಗಳಾದ ಎಸ್‌. ಆರ್‌. ಪ್ರದೀಪ್‌ (38), ರೇವತಿ (28). ಇವರಿಬ್ಬರು ದಂಪತಿಗಳಾಗಿದ್ದಾರೆ. ಅವರಿಂದ ಚಿನ್ನ ಬೆಳ್ಳಿ ಆಭರಣ, ನಗದು ಹಣ, ಒಂದು ಮೋಟಾರು ಸೈಕಲ್, ಎಟಿಎಂ ಕಾರ್ಡ್‌ ಸೇರಿ ಸುಮಾರು 12 ಲ.ರೂ. ಮೌಲ್ಯದ ಸೊತ್ತುಗಳನ್ನು ಹಿರಿಯಡಕ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆ ತಂಡ: ಎಸ್ಪಿ ಕೆ.ಅಣ್ಣಾಮಲೈ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಎಸ್ಪಿ ಸಂತೋಷ್ ಕುಮಾರ್, ಡಿವೈಎಸ್ಪಿ ಚಂದ್ರಶೆಖರ್, ಬ್ರಹ್ಮಾವರ ಸಿಪಿಐ ಅರುಣ್ ನಾಯಕ್ ನೇತೃತ್ವದಲ್ಲಿ ಹಿರಿಯಡಕ ಪಿಎಸ್‌ಐ ರಫೀಕ್‌ ಎಂ., ಎಎಸ್‌ಐಗಳಾದ ಅಗಸ್ಟಿನ್‌ ಕ್ವಾಡ್ರಸ್‌, ಪುಷ್ಪಾ, ಎಚ್‌ಸಿಗಳಾದ ಎಸ್‌.ಎನ್‌. ಭಂಡಾರ್‌ಕರ್‌, ಸಂತೋಷ್‌ ಕೆ., ಶಶಿಕುಮಾರ್‌, ಲಕ್ಷ್ಮಣ ಪ್ರಭು, ಶೇಖರ್‌, ಪಿಸಿಗಳಾದ ರಾಜೇಶ್‌ ಹೆರ್ಗ, ರಾಜೇಶ್‌, ಸಂತೋಷ್‌ ನಾಯ್ಕ್, ನಜೀರ್‌ ಸಾಹೇಬ್, ಶಾನೂರು ಬಾಷಾ, ಗೋಪಾಲ ನಾಯ್ಕ್, ಮಹೇಶ್‌ ಭಂಡಾರಿ ಹೆಬ್ರಿ, ಪ್ರವೀಣ್ ಶೆಟ್ಟಿ ಹೆಬ್ರಿ, ಪ್ರಸನ್ನ, ಮಯ್ಯದ್ದಿ, ಮಲ್ಲೇಶ್, ಕಾಸಿಂ ಸಾಹೇಬ್, ಸುಹಾಸಿನಿ ಶೆಟ್ಟಿ, ಜಯಲಕ್ಷ್ಮೀ, ಜೀಪು ಚಾಲಕ ಗೋಪಾಲನಾಯ್ಕ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Write A Comment