ಕನ್ನಡ ವಾರ್ತೆಗಳು

ಸ್ಕೌಟ್ಸ್-ಗೈಡ್ಸ್‌ಗೆ 25 ಎಕರೆ ಜಾಗ : ಡಿ.ಸಿ

Pinterest LinkedIn Tumblr

Dc_home_scotgaid_1

ಮಂಗಳೂರು, ಡಿ.21: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಏರ್ಪಡಿಸಿದ್ದ ತೃತೀಯ ಸೋಪಾನ ಪ್ರಶಸ್ತಿ ಪ್ರದಾನ ಸಮಾರಂಭ ರವಿವಾರ ನಗರದ ಜಿಲ್ಲಾಧಿಕಾರಿ ಬಂಗಲೆಯಲ್ಲಿ ನಡೆಯಿತು.

ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಅವರು,.ಕ. ಜಿಲ್ಲೆಯಲ್ಲಿ ಸ್ಕೌಟ್ಸ್-ಗೈಡ್ಸ್‌ಗೆ 25 ಎಕರೆ ಜಾಗವನ್ನು ಬಜ್ಪೆಯ ಬಳಿ ಕಾಯ್ದಿರಿಸಲು ಪರಿಶೀಲಿಸಲಾಗುತ್ತಿದೆ. ಜಿಲ್ಲೆಯ ಸ್ಕೌಟ್ಸ್-ಗೈಡ್ಸ್, ಕಬ್-ಬುಲ್‌ಬುಲ್ಸ್ ಇನ್ನಷ್ಟು ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗಳಿಗೆ ಭಾಜನರಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

Dc_home_scotgaid_2 Dc_home_scotgaid_3 Dc_home_scotgaid_4 Dc_home_scotgaid_5 Dc_home_scotgaid_6 Dc_home_scotgaid_7 Dc_home_scotgaid_8 Dc_home_scotgaid_9 Dc_home_scotgaid_10 Dc_home_scotgaid_11 Dc_home_scotgaid_12 Dc_home_scotgaid_13

ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಮುಖ್ಯ ಆಯುಕ್ತ ಎನ್.ಜಿ.ಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಕೌಟ್ಸ್-ಗೈಡ್ಸ್, ಕಬ್- ಬುಲ್‌ಬುಲ್ಸ್ ಸೇರಿ ಒಟ್ಟು 128 ಶಾಲೆಗಳ 954 ವಿದ್ಯಾರ್ಥಿಗಳು ಇಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಎಸ್ಪಿ ಡಾ.ಶರಣಪ್ಪಎಸ್.ಡಿ., ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಕದ್ರಿ, ಗೈಡ್ಸ್ ಆಯುಕ್ತ ಐರಿನ್ ಡಿಕುನ್ಹ ಮೊದಲಾದರು ಉಪಸ್ಥಿತರಿದ್ದರು.

Write A Comment