ಕನ್ನಡ ವಾರ್ತೆಗಳು

ಮಂಗಳೂರಿನ ಜನತೆಗೆ ‘ಉಬೇರ್’ ಸೇವೆ

Pinterest LinkedIn Tumblr

uber_taxi_mangalor

ಮಂಗಳೂರು, ಡಿ.19: ವಿಶ್ವದ ಅತಿದೊಡ್ಡ ಖಾಸಗಿ ಸಾರಿಗೆ ಸೇವಾ ಕಂಪನಿಗಳಲ್ಲೊಂದಾದ ಉಬೇರ್, ಮಂಗಳೂರಿನಲ್ಲಿ ಸೇವೆ ಆರಂಭಿಸಿದೆ.

ಮೊಬೈಲ್ ಆಪ್ ಆಧಾರಿತ ಟ್ಯಾಕ್ಸಿ ಬುಕಿಂಗ್ ಸೇವೆ ಇದಾಗಿದ್ದು. ಸುರಕ್ಷಿತ, ವಿಶ್ವಾಸಾರ್ಹ ಮತ್ತು ಕೈಗೆಟಕುವ ಸಾರಿಗೆಯನ್ನು ಬಟನ್ ತುದಿಯಲ್ಲಿ ಎಲ್ಲೆಡೆಯಲ್ಲೂ, ಎಲ್ಲರಿಗೂ ಒದಗಿಸುವುದು ನಮ್ಮ ಆದ್ಯತೆ ಎಂದು ಉಬೇರ್ ಇಂಡಿಯಾದ ದಕ್ಷಿಣ ಮತ್ತು ಪಶ್ಚಿಮ ವಿಭಾಗದ ಜಿಎಂ ಭವಿಕ್ ರಾಥೋಡ್ ತಿಳಿಸಿದ್ದಾರೆ.

ಕರ್ನಾಟಕದ ಬೆಂಗಳೂರು ಹಾಗೂ ಮೈಸೂರಿನಲ್ಲಿ ಈಗಾಗಲೇ ಸೇವೆ ಆರಂಭಿಸಿರುವ ಉಬೇರ್, ದೇಶದಲ್ಲಿ ಒಟ್ಟು 26 ನಗರಗಳಲ್ಲಿ ಸೇವೆ ಆರಂಭಿಸಿದಂತಾ ಗಿದೆ.  ಉಬೇರ್ ಕಂಪನಿಗೆ ಭಾರತ ಜಾಗತಿಕ ಆದ್ಯತೆಯ ಮಾರುಕಟ್ಟೆಯಾಗಿದ್ದು, ದೇಶದಲ್ಲಿ ಕಾರ್ಯ ನಿರ್ವಹಣೆ ಆರಂಭಿಸಿ ಎರಡು ವರ್ಷಗಳಲ್ಲೇ ಅಮೆರಿಕ ಹೊರತುಪಡಿಸಿದರೆ, ಅತಿ ದೊಡ್ಡ ಭೌಗೋಳಿಕ ಮಾರುಕಟ್ಟೆಯಾಗಿ ಭಾರತ ರೂಪುಗೊಂಡಿದೆ. 25,00,000 ಚಾಲಕ- ಸಹಭಾಗಿಗಳೊಂದಿಗೆ ಉಬೇರ್ ಶೇ. 40ರಷ್ಟು ಮಾರುಕಟ್ಟೆ ಪಾಲನ್ನು ಕಿರು ಅವಧಿಯಲ್ಲೇ ಭಾರತದಲ್ಲಿ ಹೊಂದಿದೆ ಎಂದು ಹೇಳಿದೆ.

Write A Comment