
ಮಂಗಳೂರು,ಡಿ.18: ಪಾಣೆಮಂಗಳೂರು ಶ್ರೀ ವೀರ ವಿಠಲ ದೇವಳದ ಪರಿಸರದಲ್ಲಿ ನೂತನವಾಗಿ ನಿರ್ಮಾಣಗೊಂಡ ಕೆರೆಯನ್ನು (ಪುಷ್ಕರಣೆ) ದೇವರಿಗೆ ಅರ್ಪಿಸಲಾಯಿತು.
ನೂತನವಾಗಿ ನಿರ್ಮಾಣಗೊಂಡ ಪುಷ್ಕರಣೆಗೆ ” ಶ್ರೀ ಸುಧೀಂದ್ರ ರೀರ್ಥ ಪುಷ್ಕರಣೆ ಎಂದು ಹೆಸರಿಡಲಾಗಿದ್ದು, ಶ್ರೀ ಕಾಶೀಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸುದ್ರೀಂದ್ರ ತೀರ್ಥ ಸ್ವಾಮೀಜಿಯವ ಅನುಗ್ರಹದಿಂದ ಅವರ ಪಟ್ಟ ಶಿಷ್ಯರಾದ ಶ್ರೀಮದ್ ಸಮ್ಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ಲೋಕಾರ್ಪಣೆ ನೆರೆವೇರಿಸಿದರು.
ಪ್ರಾರಂಭದಲ್ಲಿ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ದೇವಳದಲ್ಲಿ ಮಹಾಪ್ರಾರ್ಥನೆ ನಡೆಯಿತು. ಪುಷ್ಕರಣೆ ಬಳಿ ನಿರ್ಮಿಸಿದ ನೂತನ ಮಂಟಪವನ್ನು ಶ್ರೀಗಳವರ ದಿವ್ಯಕರಕಮಲಗಳಿಂದ ಗಂಗಾಕಲಸ, ಪಂಚವರುಣ ಕಲಶ, ಅಷ್ಟದಿಕ್ಪಾಲಕ ಕಲಶ, ಪುಷ್ಕರಣೆ ಗೆ ಶ್ರೀ ದೇವರಿಗೆ ಸಮರ್ಪಿಸಲಾಯಿತು. ತದನಂತರ ಶ್ರೀ ಗಳವರ ಪಾದಪೂಜೆ ಬಳಿಕ ಆರ್ಶಿವರ್ಚನ ನೆರೆವೇರಿತು.
ಈ ಸಂಧರ್ಭದಲ್ಲಿ ಪುಷ್ಕರಣೆಯ ಸೇವಾದಾರರಾದ ಪಿ.ರಘುವೀರ್ ಭಂಡಾರ್ ಕಾರ್, ಆಡಳಿತ ಮೊಕ್ತೇಸರರು, ಉದ್ಯಮಿ ಎಂ.ಜಗನ್ಯಾಥ ಶೆಣೈ ದೇವಳದ ಮೊಕ್ತೇಸರರಾದ ಪಿ.ವಿಶ್ವನಾಥ ಶೆಣೈ, ಪಿ ಪ್ರಭಾಕರ್ ಪೈ ಹಾಗೂ ನೂರಾರು ಸಮಾಜ ಭಾಂಧವರು ಉಪಸ್ಥಿತರಿದ್ದರು.
ಚಿತ್ರ : ಮಂಜು ನಿರೇಶ್ವಾಲ್ಯ