ಕನ್ನಡ ವಾರ್ತೆಗಳು

ದೇರಳಕಟ್ಟೆ: ಹಿಫ್ಲುಲ್ ಕುರಾನ್ ಕಾಲೇಜು ಕಟ್ಟಡಕ್ಕೆ ಶಿಲಾನ್ಯಾಸ

Pinterest LinkedIn Tumblr

ullala_hajal_silanyasa_1

ಉಳ್ಳಾಲ. ಡಿ,16 : ಸಮುದಾಯದ ಅಭಿವೃದ್ಧಿಗೆ ಹಿಫುಲ್ ಕುರಾನ್ ಮತ್ತು ಮದ್ರ ಅಗತ್ಯವಿದ್ದು, ಧಾರ್ಮಿಕ ಶಿಕ್ಷಣವನ್ನು ಪಡೆದರೆ ಮಾತ್ರ ಇಸ್ಲಾಂ ಧರ್ಮ ಮತ್ತು ಸಮಾಜದ ಬಗ್ಗೆ ಅರಿವು ಮೂಡಲು ಸಾಧ್ಯ ಎಂದು ಪಾಣಕ್ಕಾಡ್ ಹೈದರಲಿ ಶಿಹಾಬ್ ತಂಙಳ್ ಹೇಳಿದರು.

ಅವರು ದೇರಳಕಟ್ಟೆಂ ಬದ್ಯಾರ್‌ನಲ್ಲಿ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಸ್ಥಾಫಿಸಲುದ್ದೇಶಿಸಿರುವ ಹಿಫ್ಲುಲ್ ಕುರಾನ್ ಕಾಲೇಜು ಮತ್ತು ಮದ್ರಸ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಶಂಸುಲ್ ಉಲಮಾ ಹಿಫ್ಲುಲ್ ಕುರಾನ್ ಕಾಲೇಜು ಸ್ಥಾಪಿಸಲುದ್ದೇಶಿಸಿರುವುದು ಸ್ವಾಗತಾರ್ಹ. ಇಂತಹ ಇಸ್ಲಾಂಧರ್ಮದ ಕಲಿಕೆ ಸ್ಫೂರ್ತಿ ನೀಡುವ ಯೋಜನೆಗಳಿಗೆ ಎಲ್ಲರ ಸಹಕಾರ ಅಗತ್ಯವಿದೆ. ಎಲ್ಲರೂ ಒಟ್ಟಾಗಿ ಈ ಕಾರ್ಯ ಮಾಡಿದಲ್ಲಿ ಇಲ್ಲಿನ ಜನತೆಗೆ ಕಲಿಕೆಗೆ ಉತ್ತಮ ಅವಕಾಶ ಸಿಗುತ್ತದೆ. ಸಮಾಜ ಮತ್ತು ಧರ್ಮದ ಬಗ್ಗೆ ಕೂಲಂಕಷ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ullala_hajal_silanyasa_2 ullala_hajal_silanyasa_3 ullala_hajal_silanyasa_4

ಕಾರ್ಯಕ್ರಮದ ಉದ್ಘಾಟನೆಯನ್ನು ಪಾಣಕ್ಕಾಡ್ ಸಯ್ಯದ್ ಅಬ್ಬಾಸ್ ಅಲಿ ಶಿಹಾಬ್ ತಂಙಳ್ ನೆರವೇರಿಸಿದರು.ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ವಹಿಸಿದ್ದರು. ಕಾಸರಗೋಡ್ ಸಂಯುಕ್ತ ಖಾಝಿ ಫ್ರೊ. ಕೆ. ಅಲಿಕುಟ್ಟಿ ಮುಸ್ಲಿಯಾರ್, ಎಸ್‌ಕೆ‌ಐ‌ಎಂವಿಬಿ ಪ್ರಧಾನ ಕಾರ್ಯದರ್ಶಿಕೋಟುಮಲೆ ಬಾಪು ಮುಸ್ಲಿಯಾರ್, ಸಮಸ್ತ ಮುಶಾವರ ಸದಸ್ಯ ಮಿತ್ತಬೈಲ್ ಜಬ್ಬಾರ್ ಉಸ್ತಾದ್, ಅಮೀರ್ ತಂಙಳ್ ಕಿನ್ಯಾ, ಸಚಿವ ಯು.ಟಿ ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಬೆಳ್ಮ ಗ್ರಾ,ಪ ಉಪಾಧ್ಯಕ್ಷ ಸತ್ತಾರ್ ಸಿ.ಎಮ್, ಸದಸ್ಯ ಕಬೀರ್ ಡಿ, ದೇರಳಕಟ್ಟೆ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಅಬೂಬಕರ್ ನಾಟೆಕಲ್, ಸ್ವಾಗತ್ ಅಬೂಬಕರ್ ಹಾಜಿ, ಎಸ್ಕೆ‌ಎಸ್ಸೆಸ್ಸೆಫ್ ದೇರಳಕಟ್ಟೆ ಅಧ್ಯಕ್ಷ ನೌಫಾಲ್, ಉದ್ಯಮಿ ಸಿದ್ದೀಕ್ ಘ್ಲಾಡ್, ದೇರಳಕಟ್ಟೆ ಕೇಂದ್ರ ಜುಮಾ ಮಸೀದಿ ಮಾಜಿ ಆಧ್ಯಕ್ಷ ಇಸ್ಮಾಯಿಲ್ ಹಾಜಿ, ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್‌ನ ಅಧ್ಯಕ್ಷರು ಇಬ್ರಾಹೀಂ ಬದ್ಯಾರ್, ಪ್ರ.ಕಾರ್ಯದರ್ಶಿ ಲತೀಫ್ ಬದ್ಯಾರ್, ಜೊತೆಕಾರ್ಯದರ್ಶಿ ನೌಷಾದ್ ಬದ್ಯಾರ್, ಪತ್ರಿಕಕಾರ್ಯದರ್ಶಿ ಇಬ್ರಾಹೀಂ ಕೊಣಾಜೆ, ಉಪಸ್ಥಿತರಿದ್ದರು. ಕಲೀಲ್ ರಹ್ಮಾನ್ ಅರ್ಶದಿ ಕಾರ್ಯಕ್ರಮ ನಿರೂಪಿಸಿದರು.

Write A Comment