ವರದಿ : ಈಶ್ವರ ಎಂ. ಐಲ್/ ಚಿತ್ರ,: ದಿನೇಶ್ ಕುಲಾಲ್
ಮುಂಬಯಿ : ಗೋರೆಗಾಂವ್ ಪಶ್ಚಿಮ ಸಿದ್ದಾರ್ಥ ನಗರದಲ್ಲಿ ಸಿದ್ದಾರ್ಥ ನಗರದ ಅಯ್ಯಪ್ಪ ಭಕ್ತವೃಂದದ 25 ನೇ ವಾರ್ಷಿಕ ಮಹಾಪೂಜೆಯು ಯು ಡಿ. 13 ರಂದು ಸುರೇಶ್ ರೈ ಗುರುಸ್ವಾಮಿ, ಇನ್ನಂಜೆ ಚಂದ್ರಹಾಸ ಗುರುಸ್ವಾಮಿ, ಮೀರಾರೋಡ್ ಜಯಶೀಲ ಗುರುಸ್ವಾಮಿ, ವಿಶ್ವನಾಥ ಗುರುಸ್ವಾಮಿ ಜಗದಂಬಾ, ಕಾಂತಾವರ ಉಮೇಶ್ ಗುರುಸ್ವಾಮಿ ಇವರ ಉಪಸ್ಥಿತಿಯಲ್ಲಿ ಜರಗಿತು. ಗುರುಸ್ವಾಮಿ ಕರುಣಾಕರ್ ಗುರುಸ್ವಾಮಿಯವರ ಪೂಜಾವಿಧಿಗಳನ್ನು ನೆರವೇರಿಸಿದರು.
ಮುಂಜಾನೆ ಗಣಹೋಮ, ಬಳಿಕ ಮೀರಾರೋಡ್ ಲಕ್ಷ್ಮೀನಾರಾಯಣ ಭಜನಾ ಮಂಡಳಿಯವರಿಂದ ಭಜನೆ, ಮಹಾಪೂಜೆ ಯು ನಡೆಯಿತು. ಆ ಬಳಿಕ ಸಾವಿರಾರು ಭಕ್ತಾಭಿಮಾನಿಗಳು ಪೂಜೆಯ ಮಹಾಪ್ರಸಾದ, ಅನ್ನದಾನವನ್ನು ಸ್ವೀಕರಿಸಿದರು.
ಪೂಜೆಯ ಉಸ್ತುವಾರಿ ಹಾಗು ಅನ್ನದಾನದ ಸೇವೆಯನ್ನು ನೀಡಿದ ಮೀರಾರೋಡ್ ನ ಹೋಟೇಲು ಉದ್ಯಮಿ ಬಂಟರ ಸಂಘದ ಮೀರಾ ಭಾಯಂಧರ್ ಪ್ರಾದೇಶಿಕ ಸಮಿತಿಯ ಯುವ ವಿಭಾಗದ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಲ್ಲಾರ್ ಅವರು, ಶಿವಸೇನೆಯ ಹಿರಿಯ ನೇತಾರ ಹಾಗೂ ಸಚಿವ ಸುಭಾಷ್ ದೇಸಾಯಿ ಯವರನ್ನು ಗೌರವಿಸಿದರು.
ಪೂಜಾ ಕಾರ್ಯದಲ್ಲಿ ಮುಂಬಯಿ ಬಂಟರ ಸಂಘ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಜೊತೆಕಾರ್ಯದರ್ಶ್ ಕುತ್ಯಾರು ಕಿಶೋರ್ ಶೆಟ್ಟಿ, ಮೀರಾ ಭಾಯಂಧರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಅರುಣ್ ರೈ, ಉದ್ಯಮಿ ಮಹೇಶ್ ಶೆಟ್ಟಿ ತೆಲ್ಲಾರ್, ಪ್ರೀತಮ್ ಸುವರ್ಣ, ಧನಂಜಯ ಶಾಂತಿ, ರೋಹಿತ್ ಶೆಟ್ಟಿ, ಗುಡ್ಡಿ, ಸಂತೋಷ್ ಗುಡ್ಡಿ, ಆಶೋಕ್ ಶೆಟ್ಟಿ ಮೀಯಾರ್, ನಗರ ಸೇವಕಿ ಶ್ರೀಮತಿ ಕಿರಣ್ ಪಾಟೀಲ್, ಶಿವಸೇನಾ ಶಾಖಾ ಪ್ರಮುಖ ದೀಪ್ ಶೆಟ್ಟಿ, ಮತ್ತಿತರ ಗಣ್ಯರು ಹಾಗೂ ಇತರ ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.