ಕನ್ನಡ ವಾರ್ತೆಗಳು

“ಆದಾಂವ್ ಆನಿಂ ಯೇವ್ ” ನಾಟಕಕ್ಕೆ ಮೂಹರ್ತ  

Pinterest LinkedIn Tumblr

Paduva_high_school_1

ಮಂಗಳೂರು,ಡಿ.11: ಚಲನ ಚಿತ್ರಗಳ ಈ ಕಾಲದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಅಭಿನಯಿಸುತ್ತಿರುವ ಇಂತಹ ನಾಟಕಗಳಿಂದ ವಿದ್ಯಾರ್ಥಿಗಳಲ್ಲಿ ರಂಗ ಕಲೆಯ ಅಭಿರುಚಿ ಮೂಡುತ್ತದೆ. ಹಿಂದಿನ ಕಾಲದ ಚಲನ ಚಿತ್ರ ತಾರೆಯರು ರಂಗ ಕಲೆಯಿಂದಲೇ ಮುಂದೆ ಬಂದು ದೇಶದಾದ್ಯಂತ ಹೆಸರು ಗಳಿಸಿ ಸಿನೆಮಾ ತಾರೆಯರಾಗಿದ್ದಾರೆ ಎಂದು ಉದ್ಯಮಿ  ಇ. ಫೆರ್ನಾಂಡಿಸ್ ಹೇಳಿದರು.

ಅವರು ಶುಕ್ರವಾರ ಪದವ ಕಾಲೆಜಿನ ಸಭಾಂಗಣದಲ್ಲಿ ನಡೆದ ಕಾಲೇಜಿನ ಪ್ರಾಂಶುಪಾಲ  ರೆ| ಫಾ| ಆಲ್ವಿನ್ ಸೆರಾವೊ ಅವರು ಬರೆದ “ಆದಾಂವ್ ಆನಿಂ ಯೇವ್”‘ ನಾಟಕದ ಮೂಹರ್ತ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ನಾಟಕದ ಅಭಿರುಚಿ ಕಾಲೇಜು ವಿದ್ಯಾರ್ಥಿಗಳಿಗೆ ತಳ ಮಟ್ಟದಲ್ಲೇ ನೀಡಿದಲ್ಲಿ ಮುಂದೆ ಅವರು ಅದೇ ಕ್ಷೇತ್ರದಲ್ಲಿ ಮಿಂಚಬಹುದೆಂದು ಅವರು ಹೇಳಿದರು.

Paduva_high_school_1a Paduva_high_school_2 Paduva_high_school_3 Paduva_high_school_4 Paduva_high_school_5 Paduva_high_school_6 Paduva_high_school_7 Paduva_high_school_8 Paduva_high_school_9 Paduva_high_school_10 Paduva_high_school_11 Paduva_high_school_12 Paduva_high_school_13 Paduva_high_school_14

 

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕ ರೆ| ಫಾ| ಆಂಟಾನಿ ಸೆರಾವೊ ನೂತನ ನಾಟಕ್ಕಕ್ಕೆ ಶುಭ ಕೋರಿದರು. ಮತ್ತೊರ್ವ ಅತಿಥಿ ರೆ| ಫಾ| ಮ್ಯಾಕ್ಸಿಂ ರೊಸಾರಿಯೊ ಅವರು ನಾಟಕದ ಬಗ್ಗೆ ವಿವರ ನೀಡಿದರು. ನಾಟಕದ ನಿರ್ದೇಶಕ ಕ್ರಿಸ್ಟೋಫರ್ ನಿನಾಸಂ ಅವರು ಉಪಸ್ಥಿತರಿದ್ದರು.  ಕಾಲೇಜಿನ ಪ್ರಾಂಶುಪಾಲ ರೆ| ಫಾ| ಆಲ್ವಿನ್ ಸೆರಾವೊ ಸ್ವಾಗತಿಸಿದರು ಕಾರ್ಯಕ್ರಮವನ್ನು ರೋಶನ್ ನಿರೂಪಿಸಿದರು.

 

Write A Comment