ಕನ್ನಡ ವಾರ್ತೆಗಳು

ಕಾರ್ಕಳ : ಭೀಕರ ರಸ್ತೆ ಆಪಘಾತಕ್ಕೆ ತಂದೆ, ಮಗ ಬಲಿ

Pinterest LinkedIn Tumblr

karkal_busbike_acdent_1.

ಕಾರ್ಕಳ,ಡಿ.09: ಬೈಕ್‌ಗೆ ಬಸ್ಸೊಂದು ಡಿಕ್ಕಿ ಹೊಡೆದು ಪರಿಣಾಮ ತಂದೆ ಮಗ ಸ್ಥಳದಲ್ಲೇ ಮೃತ ಪಟ್ಟ ಘಟನೆ ಬೆಳ್ಮಣ್ ಚರ್ಚ್ ಬಳಿಯಲ್ಲಿ ಮಂಗಳವಾರ ನಡೆದಿದೆ. ಮೃತಪಟ್ಟವರನ್ನು ಕಾರ್ಕಳ ನಿವಾಸಿ ಶೇಖರ ಕೋಟ್ಯಾನ್(50)ಹಾಗೂ ಅವರ ಪುತ್ರ ನಿತಿನ್(11) ಎಂದು ಗುರುತಿಸಲಾಗಿದೆ.

karkal_busbike_acdent_3 karkal_busbike_acdent_2

ಘಟನೆ ವಿವರ :
ಕಾರ್ಕಳದಿಂದ ಮಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ಸುವೊಂದು ಬೆಳ್ಮಣ್ ಪಟ್ರೋಲ್ ಪಂಪ್ ಕಡೆಯಿಂದ ಪೇಟೆಗೆ ಬರುತ್ತಿದ್ದ ಎಂಐಟಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ರಾಜ್ಯ ಹೆದ್ದಾರಿ ಪಕ್ಕದಲ್ಲಿ ನಿಂತಿದ್ದ ಸ್ವಿಫ್ಟ್ ಕಾರಿಗೂ ಡಿಕ್ಕಿ ಹೊಡೆದಿದೆ.

ಮೃತ ಶೇಖರ ಕೋಟ್ಯಾನ್ ಬೆಳ್ಮಣ್‌ನಲ್ಲಿ ತರಕಾರಿ ಹಾಗೂ ಕೋಳಿ ಅಂಗಡಿ ಹೊಂದಿದ್ದರು. ಮೃತರು ಮೂವರು ಗಂಡು ಮಕ್ಕಳು ಸ್ಥಳೀಯ ಆಂಗ್ಲ ಮಧ್ಯಮ ಶಾಲೆಯಲ್ಲಿ ಕಲಿಯುತ್ತಿದ್ದಾರೆ.  ಅಪಘಾತದಲ್ಲಿ ಮೃತನಾದ ನಿತಿನ್ 6 ನೇ ತರಗತಿಯಲ್ಲಿದ್ದ. ಶೇಖರ ಕೋಟ್ಯಾನ್ ಘಟನಾ ಸ್ಥಳದಲ್ಲೇ ಮೃತ ಪಟ್ಟರೆ, ನಿತಿನ್ನನ್ನು ಶಿರ್ವದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಗೆ ಕೊಂಡೊಯ್ಯುವ ದಾರಿ ಮಧ್ಯೆ ಮೃತಪಟ್ಟಿದ್ದಾನೆ.

ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಕೇಸುದಾಖಲಾಗಿದೆ.

Write A Comment