ಕನ್ನಡ ವಾರ್ತೆಗಳು

ಐವರ ಬಂಧನ : 6 ದ್ವಿಚಕ್ರ ವಾಹನ, 12 ಗ್ರಾಂ ಚಿನ್ನ,34 ಮೊಬೈಲ್ ವಶ / ಗೂಂಡಾ ಕಾಯ್ದೆ – ದೇರಳಕಟ್ಟೆ ಅತ್ಯಾಚಾರ ಆರೋಪಿ ಸಫ್ವಾನ್‌ ಬಳ್ಳಾರಿ ಜೈಲಿಗೆ…

Pinterest LinkedIn Tumblr

Police_Commissioner_Press_1

ಮಂಗಳೂರು : ಪಾಂಡೇಶ್ವರ ಠಾಣಾ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧ ಪಟ್ಟ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎಸ್. ಮುರುಗನ್ ತಿಳಿಸಿದ್ದಾರೆ. 

ಮಂಗಳವಾರ ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ  ಮಾಹಿತಿ ನೀಡಿದ ಅವರು, ಬಂಧಿತ ಆರೋಪಿಗಳನ್ನು ಕಸಬ ಬೆಂಗ್ರೆ ನಿವಾಸಿಗಳಾದ ಹಾರಿಸ್ ಯಾನೆ ಚಂದ್ರು (24), ಮುಹಮ್ಮದ್ ಶಬೀರ್ (24) ಅಲ್ತಾಫ್(24), ಉಮರ್ ಫಾರೂಕ್(20) ಮುಹಮ್ಮದ್ ರಫೀಕ್(29) ಎಂದು ಗುರುತಿಸಲಾಗಿದ್ದು, ಬಂಧಿತರಿಂದ 6 ದ್ವಿಚಕ್ರ ವಾಹನ, 12 ಗ್ರಾಂ ಚಿನ್ನ, 34 ಮೊಬೈಲ್ ಸಹಿತಾ ಸುಮಾರು 5 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಬಂಧಿತರಲ್ಲಿ ಹಾರಿಸ್ ಯಾನೆ ಚಂದ್ರು ತನ್ನ ಅಪ್ರಾಪ್ತ ವಯಸ್ಸಿನಲ್ಲೇ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡಿದ್ದಾನೆ. ಉಳಿದವರು ಬೇರೆ ಬೇರೆ ಪ್ರಕರಣಗಳಲ್ಲಿ ಗುರುತಿಸಿ ಕೊಂಡವರಾಗಿದ್ದಾರೆ ಎಂದು ಹೇಳಿದ ಅವರು, ಈ ಐವರ ಬಂಧನದೊಂದಿಗೆ ಒಟ್ಟು 13 ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿದಂತಾಗಿದೆ ಎಂದು ತಿಳಿಸಿದರು.

ದೇರಳಕಟ್ಟೆ ಅತ್ಯಾಚಾರ ಪ್ರಕರಣದ ಆರೋಪಿ ಸಫ್ವಾನ್‌ಗೆ ಗೂಂಡಾ ಕಾಯ್ದೆ

ಕೊಲೆ, ಕಳವು, ಗಲಭೆ, ಅತ್ಯಾಚಾರ, ಅತ್ಯಾಚಾರ ಯತ್ನ, ಡಕಾಯಿತಿ ಮೊದಲಾದ ಹಲವಾರು ಪ್ರಕರಣಗಳ ಆರೋಪಿ ಸದ್ಯಕ್ಕೆ ಜೈಲಿನಲ್ಲಿರುವ ದೇರಳಕಟ್ಟೆ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಸಫ್ವಾನ್ (31) ನನ್ನು ಗೂಂಡಾ ಕಾಯ್ದೆ ದಾಖಲಿಸಿ ಬಳ್ಳಾರಿ ಜೈಲಿಗೆ ಕಳಿಸಲಾಗಿದೆ. ಈತನ ಮೇಲೆ 2005ರಿಂದ 2015ರ ವರೆಗೆ 20 ಪ್ರಕರಣಗಳು ದಾಖಲಾಗಿದೆ ಎಂದು ಕಮಿಷನರ್ ತಿಳಿಸಿದರು.

ಡಿಸಿಪಿ ಸಂಜೀವ ಎಂ. ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Write A Comment