ಕನ್ನಡ ವಾರ್ತೆಗಳು

ಬೆಂಗಳೂರುನಲ್ಲಿ ನಿಗೂಢ ಸಾವು-ಕೊಲೆ ಶಂಕೆ: ಪತ್ನಿಯಿಂದ ತನಿಖೆಗೆ ಆಗ್ರಹ

Pinterest LinkedIn Tumblr

puttur_mithun_photo

ಪುತ್ತೂರು ,ನ.27:  ಬೆಂಗಳೂರಿಗೆ ಕೆಲಸಕ್ಕೆ ಹೋಗಿದ್ದ ವ್ಯಕ್ತಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದು, ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಮೃತರ ಪತ್ನಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ, ಶವದ ಮರಣೋತ್ತರ ಪರೀಕ್ಷೆ ನಡೆಸಿ ಸಾವಿನ ನೈಜ ಕಾರಣ ತಿಳಿಸುವಂತೆ ಆಗ್ರಹಿಸಿದ್ದಾರೆ.

ವ್ಯಕ್ತಿ ಪೆರ್ನೆ ಗ್ರಾಮದ ಕಳೆಂಜ ನಿವಾಸಿ ಪಾಂಡುರಂಗ ಎಂಬವರ ಪುತ್ರ ಮಿಥುನ್ (29) ಎಂಬವರು ಎಂಬವರು ಬೆಂಗಳೂರಿನಲ್ಲಿ ಮೃತಟ್ಟವರು. ಮಿಥುನ್ ಎಲೆಕ್ಟ್ರಿಷಿಯನ್ ಆಗಿದ್ದು, ಉಪ್ಪಿನಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ತನ್ನ ಪರಿಚಯಸ್ಥರಾದ ಮಡಿಕೇರಿಯ ನಂದನ್ ಎಂಬವರು ನ. 22ರಂದು ಬೆಂಗಳೂರುನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದರು. ಆದರೆ ಮಿಥುನ್ ಶವವಾಗಿ ಬಂದಿದ್ದು, ಈ ಸಾವಿನ ಹಿಂದೆ ನಿಗೂಢತೆ ತಲೆದೋರಿದೆ, ಸಾವಿನ ಬಗ್ಗೆ ಸ್ಪಷ್ಟ ಕಾರಣ ತಿಳಿಸುವಂತೆ ಮಿಥುನ್ ಪತ್ನಿ ರಜನಿ ಉಪ್ಪಿನಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

 ಹೃದಯಾಘಾತದಿಂದ ಸಾವು :
ಮಿಥುನ್ ನ. 25ರಂದು ರಾತ್ರಿ ಬೆಂಗಳೂರು ಸಮೀಪ ಮಾಗಡಿ ಎಂಬಲ್ಲಿ ಕೆಲಸ ಮಾಡುತ್ತಿದ್ದಾಗ ಅಪಸ್ಮಾರ ಖಾಯಿಲೆಯಿಂದ ಬಿದ್ದು, ನರಳಾಡುತ್ತಿದ್ದರು, ಬಳಿಕ ಅವರನ್ನು ಅಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ, ಅಲ್ಲಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಮೃತದೇಹ ತಂದಿರುವ ನಂದನ್ ಅವರ ಸಹಾಯಕರು ಉಪ್ಪಿನಂಗಡಿ ಪೊಲೀಸರಿಗೆ ತಿಳಿಸಿದ್ದು, ಈ ಬಗ್ಗೆ ಮಾಗಡಿ ಪೊಲೀಸರು ನೀಡಿರುವ ಪತ್ರವನ್ನು ಉಪ್ಪಿನಂಗಡಿ ಪೊಲೀಸರಿಗೆ ನೀಡಿದ್ದಾರೆ.

ಮರಣೋತ್ತರ ಪರೀಕ್ಷೆ ನಡೆಸಿಲ್ಲ, ಮನೆಯವರಿಗೆ ತಿಳಿಸಿಲ್ಲ: ಅಲ್ಲಿ ನಡೆದಿರುವ ಘಟನೆ ಬಗ್ಗೆ ಅಲ್ಲಿನ ಪೊಲೀಸರು ಮಿಥುನ್ ಮನೆಯವರಿಗೆ ತಿಳಿಸಿಲ್ಲ ಹಾಗೂ ಶವದ ಮರಣೋತ್ತರ ಪರೀಕ್ಷೆಯೂ ನಡೆಸಿಲ್ಲ ಎಂದು ಹೇಳಲಾಗಿದೆ. ಅದಾಗ್ಯೂ ಮೃತದೇಹವನ್ನು ಆಂಬುಲೆನ್ಸ್‌ನಲ್ಲಿ ಕಳುಹಿಸಿ ಕೊಡುವ ಬದಲು ಟಾಟಾ ಸುಮೋ ವಾಹನದಲ್ಲಿ ಕಳುಹಿಸಿಕೊಡಲಾಗಿದೆ. ಈ ಎಲ್ಲಾ ಅನಪೇಕ್ಷಿತ ವರ್ತನೆಗಳು ಆಕ್ಷೇಪಾರ್ಹ ಎಂದು ಹೇಳಲಾಗಿದ್ದು, ಮಿಥುನ್ ಮನೆಯವರು ಉಪ್ಪಿನಂಗಡಿ ಠಾಣೆ ಮುಂದೆ ಜಮಾಯಿಸಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿನ್ನೆ ರಾತ್ರಿಯಿಂದ ನಡೆದ ಘಟನೆ, ಬಳಿಕ ಮಿಥುನ್ ಮೃತಪಟ್ಟಿರುವ ಬಗ್ಗೆ ಅವರ ಮಾವ ಜಯರಾಮ ಎಂಬವರಿಗೆ ನಂದನ್ ತಿಳಿಸಿದ್ದಾರೆ ಎಂದು ಹೇಳಲಾಗಿದ್ದು, ಅವರು ಮರಣೋತ್ತರ ಪರೀಕ್ಷೆ ನಡೆಸುವುದು ಬೇಡ, ಮೃತದೇಹವನ್ನು ಕಳುಹಿಸಿಕೊಡಿ ಎಂದು ಹೇಳಿದ್ದರು. ಆ ನಿಮಿತ್ತ ನಂದನ್ ಮೃತದೇಹವನ್ನು ವಾರೀಸುದಾರರಿಲ್ಲದೆ ಕಳುಹಿಸಿಕೊಟ್ಟಿದ್ದರು ಎಂದು ಹೇಳಲಾಗಿದೆ. ಮೃತ ದೇಹ ಉಪ್ಪಿನಂಗಡಿಗೆ ತಲುಪುವ ತನಕ ಮೃತದೇಹ ತಂದವರ ಸಂಪರ್ಕದಲ್ಲಿದ್ದ ಜಯರಾಮ ಎಂಬವರು ಆ ಬಳಿಕ ಫೋನ್ ಸಂಪರ್ಕಕ್ಕೂ ದೊರಕದೆ ತಪ್ಪಿಸಿಕೊಂಡಿದ್ದಾರೆ ಎಂದು ಹೇಳಲಾಗಿದ್ದು, ಒಟ್ಟಿನಲ್ಲಿ ಪ್ರಕರಣ ನಿಗೂಢತೆ ಉಳಿಸಿಕೊಂಡಿದ್ದು, ಹಲವು ಸಂಶಯಗಳಿಗೆ ಎಡೆ ಮಾಡಿಕೊಡುತ್ತಿರುವುದು ಕಂಡು ಬರುತ್ತಿದೆ.

ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ-ಎಸ್.ಐ.: ಮಿಥುನ್ ಅವರ ಸಾವು ಬಗ್ಗೆ ಅವರ ಪತ್ನಿ ರಜನಿ ನೀಡಿರುವ ದೂರಿನಂತೆ ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ. ಮೃತ ದೇಹದ ಮರಣೋತ್ತರ ಪರೀಕ್ಷೆಗೆ ಮಂಗಳೂರಿಗೆ ಕಳುಹಿಸಿಕೊಡಲಾಗಿದೆ. ಅದರ ವರದಿ ಬಂದ ಬಳಿಕ ಕಾನೂನಿನ ಪ್ರಕಾರ ತನಿಖೆ ನಡೆಸಲಾಗುವುದು ಎಂದು ಉಪ್ಪಿನಂಗಡಿ ಎಸ್.ಐ. ತಿಮ್ಮಪ್ಪ ನಾಯ್ಕ್ ತಿಳಿಸಿದ್ದಾರೆ.

Write A Comment